2 ½ ವರ್ಷದ ಮಗುವಿನ ಮೇಲೆ ಅತ್ಯಾಚಾರ :
ದೇವಲ ಗಾಣಗಾಪೂರ ಠಾಣೆ: ಅಪಜಲಪೂರ ತಾಲೂಕಿನ ದೇವಲ ಗಾಣಗಾಪುರದಲ್ಲಿ ದಿನಾಂಕ:18-01-2013 ರಂದು ಮಧ್ಯಾಹ್ನ 2-00 ಗಂಟೆ ಸುಮಾರಿಗೆ ಅಂಗನವಾಡಿ ಶಾಲೆಗೆ ಹೋಗಿ ಬಂದ 2 ½ ವರ್ಷದ ಹೆಣ್ಣು ಮಗವಿಗೆ (ಹೆಸರು ಸೂಚಿಸಿರುವದಿಲ್ಲ) ನಮ್ಮ ಪಕ್ಕದ ಮನೆಯ ಮಂಜುನಾಥ ತಂದೆ ಲಕ್ಷ್ಮಣ ಕೋಳೆಕರ ಇವನು ಮಗುವಿಗೆ ಮನೆಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿಕೊಂಡಿರುತ್ತಾನೆ ಅಂತಾ ಮಕ್ಕಳು ತಿಳಿಸಿದ ಮೇರೆಗೆ ನಾನು ಗಾಬರಿಯಾಗಿ ಮಂಜುನಾಥ ತಂದೆ ಲಕ್ಷ್ಮಣ ಕೋಳೆಕರ ಇವರ ಮನೆಯ ಮುಂದೆ ಹೋದಾಗ ಒಳಗಡೆಯಿಂದ ನನ್ನ ಮಗಳ ಅಳುವ ಶಬ್ದ ಬರುತ್ತಿತ್ತು. ತಾನು ಮಂಜುನಾಥನಿಗೆ ಬಾಗಿಲು ತೆಗೆಯಲು ಚಿರಾಡಿದಾಗ ಅವನು ಸ್ವಲ್ಪ ಹೊತ್ತಿನ ಮೇಲೆ ಬಾಗಿಲು ತೆರೆದನು ಅವನು ಚಡ್ಡಿಯ (ಅಂಡವೇಯರ) ಮೇಲೆ ಇದ್ದನು. ಮಂಜುನಾಥನು ನನಗೆ ನೋಡಿ ಪ್ಯಾಂಟ್ ಹಾಕಿಕೊಳ್ಳುತ್ತಾ ಓಡಿ ಹೋದನು.ನಮ್ಮ ಪಕ್ಕದ ಮನೆಯ ಮಂಜುನಾಥ ತಂದೆ ಲಕ್ಷ್ಮಣ ಕೋಳೆಕರ ಇವನು ಏನೋ ಆಸೆ ತೋರಿಸಿ ನನ್ನ 2 ½ ವರ್ಷದ ಮಗಳಿಗೆ ತನ್ನ ಮನೆಯಲ್ಲಿ ಕರೆದುಕೊಂಡು ಹೋಗಿ ಬಲತ್ಕಾರ ಮಾಡಿದ್ದು. ಅವನ ಮೇಲೆ ಕಾನೂನಿನ ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ದೂರು ಮಗುವಿನ ತಾಯಿ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 7/2013 ಕಲಂ. 376 ಐಪಿಸಿ ಮತ್ತು ಕಲಂ.3 (I ), (XII) ಎಸ್.ಸಿ/ಎಸ್ಟಿ ಪಿ.ಎ ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಹರಣ ಮಾಡಿ ಅತ್ಯಾಚಾರವೆಸಗಿ ಕೊಲೆ ಮಾಡಿದ ಬಗ್ಗೆ:
ಶಹಾಬಾದ ನಗರ ಪೊಲೀಸ್ ಠಾಣೆ:ಸಾ:ನದಿ ಸಿನ್ನೂರ ತಾ:ಜಿ:ಗುಲಬರ್ಗಾ ಹಾ||ವ|| ಕೆ.ಪಿ.ಹೆಚ್.ಬಿ ಕಾಲೋನಿ ಹೈದ್ರಾಬಾದ ರವರು ನನ್ನ 26 ವರ್ಷದ ಮಗಳು (ಹೆಸರು ಸೂಚಿಸಿರುವದಿಲ್ಲ) ದಿನಾಂಕ:26/12/2012 ರಂದು ಮನೆಯಿಂದ ಕೆಲಸಕ್ಕೆ ಹೋದವಳು ಮನೆಗೆ ಹಿಂದಿರುಗಿ ಬರದ ಕಾರಣ ನಾವೇಲ್ಲರೂ ಹುಡುಕಾಡಿದರು ಸಿಕ್ಕಿರುವದಿಲ್ಲಾ. ದಿನಾಂಕ:17/01/2013 ರಂದು ವೀರಣ್ಣಾ ತಂದೆ ಲಕ್ಷಮಯ್ಯ ಮುತ್ತಗಿ ಇವನ ತಮ್ಮನಾದ ತಿರುಪತಿ ತಂದೆ ಲಕ್ಷಮಯ್ಯ ಇತನು ಬಂದು ನನ್ನ ಮಗಳು ಮರಣ ಹೊಂದಿರುತ್ತಾಳೆ,ಸದರಿ ಶವವು ಮುತ್ತಗಾ ಗ್ರಾಮಕ್ಕೆ ತುರ್ತುವಾಹನದ ಮೂಲಕ ಮನೆಗೆ ತಲುಪಿಸಿ ಮರಳಿ ಮುತ್ತಗಾ ಗ್ರಾಮದಿಂದ ತೆರಳುವಾಗ ನಮ್ಮ ಕುಟುಂಬದವರು ಸದರಿ ವಾಹನವನ್ನು ರಾವೂರ ಹತ್ತಿರ ನಿಲ್ಲಿಸಿದೇವು, ನನ್ನ 26 ವರ್ಷದ ಮಗಳಿಗೆ ಅಪಹರಣ ಮಾಡಿ ಬಲತ್ಕಾರವೆಸಗಿ ಕೊಲೆ ಮಾಡಿರುವ ವೀರಣ್ಣಾ ತಂದೆ ಲಕ್ಷಮಯ್ಯ ಮುತ್ತಗಿ ಹಾಗೂ ಅವನಿಗೆ ಸಹಾಯ ಮಾಡಿರುವ ಅವರ ಅಣ್ಣಂದಿರಾದ ದ್ಯಾವಪ್ಪಾ ಮತ್ತು ತಿರುಪತಿರವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಅಂತಾ ಮೃತ ಯುವತಿಯ ತಾಯಿಯವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:07/2013 ಕಲಂ:365,376,302,109 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮಟಕಾ ಜೂಜಾಟ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ:18-01-2013 ರಂದು ಮಧ್ಯಾಹ್ನ 14-00 ಗಂಟೆಗೆ ಇಂಡಸ್ಟ್ರೀಯಲ್ ಏರಿಯಾದ ಮಾಸಾಪತಿ ದರ್ಗಾಕ್ಕೆ ಹೋಗುವ ದಾರಿಯ ರೋಡ ಬದಿಗೆ ಇರುವ ಗಿಡದ ಕೆಳಗಡೆ ಮಟಕಾ ಜೂಜಾಟದಲ್ಲಿ ನಿರತರಾಗಿದ್ದ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಪಿ.ಎಸ್.ಐ.(ಅ.ವಿ.) ಮತ್ತು ಠಾಣೆಯ ಸಿಬ್ಬಂದಿ ಯವರು ಮೇಲಾಧಿಕಾರಿಯವರ ಮಾರ್ಗದರ್ಶನದಲ್ಲಿ ದಾಳಿ ಮಾಡಲು ಶೇಕ ಮುನೀರ ತಂದೆ ಶೇಕ ಮದಾರ ಮತ್ತು ಮುನೀರ ತಂದೆ ಅಬ್ದಲ ಗನಿ ಇವರನ್ನು ವಶಕ್ಕೆ ತೆಗೆದುಕೊಂಡಿದ್ದು, ಮಟಕಾ ಚೀಟಿ ಹಣ ತೆಗೆದುಕೊಂಡು ಹೋಗಲು ಬಂದ ರಾಜಶೇಖರ ಉಮಾಶೆಟ್ಟಿ ತನ್ನ ಮೋಟಾರ ಸೈಕಲ ಮತ್ತು ಮೋಬಾಯಿಲ ಸ್ಥಳದಲ್ಲಿ ಬಿಸಾಕಿ ಓಡಿ ಹೋಗಿರುತ್ತಾನೆ. ಮಟಕಾ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 16,025/- , ಎರಡು ಮೊಬಾಯಿಲ್, ಬಜಾಜ ಪಲ್ಸರ ಮತ್ತು ಟಿವಿಎಸ್ ದ್ವಿ-ಚಕ್ರವಾಹನ ಹೀಗೆ ಒಟ್ಟು 76,725/- ಗಳದ್ದು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 41/2013 ಕಲಂ, 78 (3) ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
No comments:
Post a Comment