Police Bhavan Kalaburagi

Police Bhavan Kalaburagi

Friday, January 25, 2013

GULBARGA DISTRICT REPORTED CRIMES


ವರದಕ್ಷಿಣೆ ಕಿರುಕುಳದಿಂದ ಮಹಿಳೆ ಸಾವು:
ವಾಡಿ ಪೊಲೀಸ್ ಠಾಣೆ:ಶ್ರೀ ಮಲ್ಲಣಗೌಡ ತಂದೆ ಶಿವರಾಯಪ್ಪಗೌಡ ಪೊಲೀಸ್ ಪಾಟಿಲ್ ಸಾ|| ಮಳ್ಳಳ್ಳಿ ತಾ|| ಶಹಾಪೂರ ಜಿ|| ಯಾದಗಿರ ರವರು ನನ್ನ  ಮಗಳು ನಿಂಗಮ್ಮ ಇವಳಿಗೆ  ಎರಡೂವರೆ ವರ್ಷಗಳ ಹಿಂದೆ ಕೊಲ್ಲೂರು ಗ್ರಾಮದ ವಿಜಯಕುಮಾರ ದೇಸಾಯಿ ಇವರ ಜೋತೆ ಮದುವೆ ಮಾಡಿಕೊಟ್ಟಿರುತ್ತೆನೆ. ಮಗಳ ಮದುವೆಯಲ್ಲಿ 4 ತೊಲಿ ಬಂಗಾರ, 50 ಸಾವಿರ ರೂಪಾಯಿಗಳು ವರದಕ್ಷಿಣೆ ಕೊಟ್ಟಿರುತ್ತೆನೆ. ಮದುವೆಯಾದ ಒಂದೂವರೆ ವರ್ಷದ ನಂತರ ನನ್ನ ಮಗಳಿಗೆ ನಿನ್ನ ತವರು ಮನೆಯಿಂದ ಇನ್ನೂ ಹಣ ತೆಗೆದುಕೊಂಡು ಬಾ ಅಂತಾ  ಅತ್ತೆ ಕಮಲಮ್ಮ, ನಾದಿನಿ ಸರಮ್ಮ, ಗಂಡ ವಿಜಯಕುಮಾರ ಹೇಳುತ್ತಾ, ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆ ಬಡೆ ಮಾಡಿ ಕಿರುಕುಳ ಕೊಡುತ್ತಿದ್ದರು. ಸದರಿಯವರ ಕಿರುಕುಳ ತಾಳಲಾರದೇ ದಿನಾಂಕ:25/01/13 ರಂದು ಮುಂಜಾನೆ 6-00  ಗಂಟೆಗೆ ಸುಮಾರಿಗೆ ತನ್ನ ಮಗಳು ಬೆಳೆಗಳಿಗೆ ಹೊಡೆಯುವ ಕ್ರಿಮಿನಾಶಕ ಔಷದಿ ಸೇವನೆ ಮಾಡಿ ಮೃತಪಟ್ಟಿರುತ್ತಾಳೆ, ಸದರಿಯವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 12/2013 ಕಲಂ 504323498(ಎ)306 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:ಶ್ರೀಮತಿ, ಸಾವಿತ್ರಿ ಗಂಡ ಹಣಮಂತರಾಯ ಬಿರಾದಾರ ವ||30 ವರ್ಷ ಸಾ||ಬೋಸಗಾ ರವರು ನನಗೆ  ಬೋಸಗಾ ಗ್ರಾಮದ ಹಣಮಂತರಾಯ ಬಿರಾದಾರ ಈತನ ಜೊತೆಗೆ 2005 ನೇ ಸಾಲಿನಲ್ಲಿ ಮದುವೆ ಮಾಡಿಕೊಟ್ಟಿದ್ದು, ಮದುವೆಯಾದ 2-3 ವರ್ಷ ಚೆನ್ನಾಗಿದ್ದೆವು, ನಂತರ ಮದುವೆ ಕಾಲಕ್ಕೆ ವರದಕ್ಷಿಣೆ ಕಡಿಮೆ ಕೊಟ್ಟಿರಿತ್ತಿರಿ, ನಾನು ಕಿರಾಣಿ ಅಂಗಡಿ ಇಡುತ್ತೇನೆ ನಿನ್ನ ತವರು ಮನೆಯಿಂದ 50,000/- ರೂ ತೆಗೆದುಕೊಂಡು ಬರಬೇಕು ಅಂತಾ ನನ್ನ ಗಂಡ ಹೇಳಿರುತ್ತಾರೆ. ನನ್ನ ಗಂಡ ಅಲದೇ , ಅತ್ತೆ, ಮಾವಮೈದುನರವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ಕೊಡುತ್ತಿದ್ದು ಸದರಿಯವರ ಕಿರುಕುಳ ತಾಪ ತಾಳಲಾರದೆ ಬಳೂಂಡಗಿ ಗ್ರಾಮದ ತವರು ಮನೆಗೆ ಬಂದಿರುತ್ತೆನೆ. ದಿನಾಂಕ:13-01-2013 ರಂದು ಮಧ್ಯಾಹ್ನ 2-00  ಗಂಟೆಗೆ ಗಂಡಅತ್ತೆಮಾವನಾದನಿಭಾವಮೈದುನರು ಬಳೂಂಡಗಿ ಗ್ರಾಮಕ್ಕೆ ಬಂದು, ಅವಾಚ್ಯವಾಗಿ ಬೈದು ಎಷ್ಟು ದಿವಸ ತವರು ಮನೆಯಲ್ಲಿ ಇರುತ್ತಿ ಅಂತಾ ತಲೆಯ ಮೇಲಿನ ಕೂದಲು ಎಳೆದಾಡಿ ಬೇದರಿಕೆ ಹಾಕಿರುತ್ತಾರೆ. ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಲಿಖಿತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 19/2013 ಕಲಂ 498 (ಎ) 504 506 ಸಂ. 149 ಐ ಪಿ ಸಿ ಮತ್ತು 3, 4. ಡಿ ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: