-: ಪೊಲೀಸ ಪ್ರಕಟಣೆ:-
ಗುಲಬರ್ಗಾ ನಗರದಲ್ಲಿ ಸದ್ಯ 1,25,000 ಕ್ಕೂ ಮೇಲ್ಪಟ್ಟು ದ್ವಿಚಕ್ರ ವಾಹನಗಳು ಸಂಚರಿಸುತ್ತಿದ್ದು ದಿನೇ ದಿನೇ ದ್ವಿಚಕ್ರ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕೆಲವೊಂದು ವಾಹನ ಚಾಲಕರು ಸಂಚಾರಕ್ಕೆ ತೊಂದರೆ ಆಗುವ ರೀತಿಯಲ್ಲಿ ಅಲ್ಲದೆ ನಿಲುಗಡೆ ನಿಷೇದಿಸಿದ (No Parking/Wrong parking ) ಸ್ಥಳಗಳಲ್ಲಿ ತಮ್ಮ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಸುಗಮ ಸಂಚಾರಕ್ಕೆ ಅಡೆತಡೆಯನ್ನುಂಟು ಮಾಡುತ್ತಿರುವದು ಸಹ ಹೆಚ್ಚಾಗಿರುತ್ತದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದ್ದು ಇನ್ನು ಮುಂದೆ ಬೇಕಾಬಿಟ್ಟಿಯಾಗಿ ದ್ವಿಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಿ ಸಾರ್ವಜನಿಕರಿಗೆ ಅಗುವ ತೊಂದರೆಗಳನ್ನು ತಪ್ಪಿಸಲು ಈ ಕೂಡಲೆ ಗುಲಬರ್ಗಾ ಸಂಚಾರಿ ಪೊಲೀಸರು ಅಂತಹ ದ್ವಿಚಕ್ರ ವಾಹನ ಚಾಲಕರ ವಿರುದ್ದ ಕ್ರಮ ಕೈಕೊಳ್ಳಲಿದ್ದಾರೆ. ಸಂಚಾರಕ್ಕೆ ತೊಂದರೆಯಾಗುವಂತೆ ವಾಹನ ಪಾರ್ಕಿಂಗ್ ಮಾಡಿದ ವಾಹನಗಳಿಗೆ ಸ್ಥಳದಲ್ಲಿಯೇ ಅವುಗಳಿಗೆ ಬೀಗಹಾಕಿ, ಬೀಗ ಹಾಕಿದ ಅಧಿಕಾರಿಯ ಮೊಬೈಲ ಸಂಖ್ಯೆಯುಳ್ಳ ಚೀಟಿಯನ್ನು ವಾಹನದ ಸೀಟಿಗೆ ಅಂಟಿಸಲಾಗುವುದು. ನಂತರ ವಾಹನ ಚಾಲಕರು ತಮ್ಮ ಮೋಟಾರ ಸೈಕಲಕ್ಕೆ ಅಂಟಿಸಿದ ಚೀಟಿಯ ಮೇಲಿರುವ ಮೊಬೈಲ ನಂ. ಗೆ ಕರೆಮಾಡಿದಲ್ಲಿ ಸಂಚಾರಿ ಪೊಲೀಸರು ಬಂದು ಸ್ಥಳದಲ್ಲಿಯೇ ದಂಡ ವಿಧಿಸಿ ಕ್ರಮ ಜರುಗಿಸುತ್ತಾರೆ. ಒಂದು ವೇಳೆ ವಾಹನಕ್ಕೆ ಹಾಕಿದ ಬೀಗಕ್ಕೆ ಹಾನಿಗೊಳಿಸಿದರೆ ಕಾನೂನಿನ ರೀತಿ ಕ್ರಮ ಕೈಕೊಳ್ಳಲಾಗುವುದು. ಸಾರ್ವಜನಿಕರು ತಮ್ಮ ವಾಹನಗಳನ್ನು ಸೂಕ್ತ ಸ್ಥಳದಲ್ಲಿ ನಿಲ್ಲಿಸಿ ಸಹಕರಿಸಲು ಕೋರಲಾಗಿದೆ.
ಪೊಲೀಸ್ ಅಧೀಕ್ಷಕರು, ಗುಲಬರ್ಗಾ ಜಿಲ್ಲೆ
No comments:
Post a Comment