Police Bhavan Kalaburagi

Police Bhavan Kalaburagi

Tuesday, January 29, 2013

GULBARGA DISTRICT



ಗುಲಬರ್ಗಾ ಜಿಲ್ಲಾ ಪೊಲೀಸ್ ರ ಕಾರ್ಯಚರಣೆ
7 ಜನ ದರೋಡೆಕೋರರ ಬಂಧನ, ಬಂಧಿತರಿಂದ 1 ನಾಡ ಪಿಸ್ತೂಲ್,       9 ಮಾರಕ ಆಯುಧಗಳು, ಇಂಡಿಕಾ ಕಾರ, ನಗದು ಹಣ, ಮೋಟಾರ ಸೈಕಲಗಳು ವಶ.
ದಿನಾಂಕ:29-01-2013 ರಂದು 00-30 ಗಂಟೆಗೆ ಗುಲಬರ್ಗಾ-ಸೇಡಂ ರಸ್ತೆಯಲ್ಲಿರುವ ಜಿ.ವ್ಹಿ.ಆರ್. ಶೈನ್ ಬೋರ್ಡ ಹತ್ತಿರ ರೋಡಿನ ಮೇಲೆ 7 ಜನರು ಹೋಗಿ ಬರುವ ಸಾರ್ವಜನಿಕರಿಗೆ ತಡೆದು ದರೋಡೆ ಮಾಡಲು ಹೊಂಚು ಹಾಕಿ ಕುಳಿತಿರುವ ಬಗ್ಗೆ ಖಚಿತ ಬಾತ್ಮೀ ಬಂದ ಮೇರೆಗೆ ಮಾನ್ಯ ಶ್ರೀ, ಎನ್. ಸತೀಶಕುಮಾರ ಐ.ಪಿ.ಎಸ್,. ಜಿಲ್ಲಾ ಪೊಲೀಸ ಅಧೀಕ್ಷಕರು ಗುಲಬರ್ಗಾರವರ ಮಾರ್ಗದರ್ಶನದಲ್ಲಿ, ಶ್ರೀ ಎಸ್. ಅಸ್ಲಾಂ ಭಾಷಾ ಸಿ.ಪಿ.ಐ ಎಂ.ಬಿ ನಗರ ವೃತ್ತ, ಶ್ರೀ,ಎಸ್.ಎಸ್. ಹುಲ್ಲೂರ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ, ಶ್ರೀ ಶರಣಬಸವೇಶ್ವರ ಭಜಂತ್ರಿ ಪಿ.ಐ. ಬ್ರಹ್ಮಪೂರ ಠಾಣೆಶ್ರೀ ಶ್ರೀಮಂತ ಇಲ್ಹಾಳ ಪಿ.ಎಸ್.ಐ ಎಂ.ಬಿ ನಗರ ಠಾಣೆಶ್ರೀ, ಗೋಪಾಲ ರಾಠೋಡ ಪಿ.ಎಸ್.ಐ ವಿಶ್ವಿದ್ಯಾಲಯ ಠಾಣೆ, ಪ್ರದೀಪಕುಮಾರ ಭಿಸೆ ಪಿ.ಎಸ್.ಐ (ಅ.ವಿ) ವಿವಿ ಠಾಣೆ ಮತ್ತು ವಿ.ವಿ.ಠಾಣೆ, ಎಂ.ಬಿ ನಗರ ಠಾಣೆ ಸಿಬ್ಬಂದಿಯವರಾದರಾಜಶೇಖರ,ಸುರೇಶಮಶಾಕಯಲ್ಲಪ್ಪ, ಸುರೇಶಅಜರುದ್ದೀನ್ಅಣ್ಣಪ್ಪಾಮಲ್ಲಿನಾಥವೇದರತ್ನಂವೀರಶೇಟ್ಟಿಬಲರಾಮಪ್ರಭಾಕರಶಂಕರ,ಶ್ರೀನಿವಾಸರೆಡ್ಡಿಸಿದ್ರಾಮಯ್ಯಗಂಗಾಧರ, ನದಾಫತಾರಾಸಿಂಗ, ಸಂಜೀವಕುಮಾರಪಂಡಿತ ಮತ್ತು ಶಿವಪ್ಪ ಮುಖ್ಯ ಪೇದೆಗಳು ಡಿ.ಎಸ್.ಬಿ ಘಟಕರವರು ಎಲ್ಲರೂ ಕೂಡಿಕೊಂಡು 7 ಜನ ದರೋಡೆಕೋರರ ಮೇಲೆ ದಾಳಿ ಮಾಡಿ,  1) ಗಜಾನಂದ ತಂದೆ ಅರುಣಕುಮಾರ ದೇಶಪಾಂಡೆ ವ:25ವರ್ಷ ಉ:ವಿದ್ಯಾರ್ಥಿ, ಸಾ|| ರಾಮನಗರ ಹತ್ತಿರ ಗುಲಬರ್ಗಾ,  2) ಪ್ರಶಾಂತ ಸೋನು  @  ಡಾಬರ ತಂದೆ ಮಹೇಶ ಹಳ್ಳಿ ವ:19 ವರ್ಷ ಜ್ಯಾತಿ:ಲಿಂಗಾಯತ ಉ: ವಿದ್ಯಾರ್ಥಿ, ಸಾ:ಕೆ.ಎಚ್.ಬಿ ಕಾಲೋನಿ ಗುಲಬರ್ಗಾ, 3) ಮಹ್ಮದ ಇಸಾಮುದ್ದೀನ್ ತಂದೆ ಮಹ್ಮದ ದಸ್ತಗೀರ ಶೇಖ್ ವ:19 ವರ್ಷ ಜ್ಯಾತಿ:ಮುಸ್ಲಿಂ ಉ:ವಿಧ್ಯಾರ್ಥಿ, ಸಾ:ವಿದ್ಯಾ ನಗರ ಗುಲಬರ್ಗಾ, 4) ಅಭಿಶೇಕ ಅಭಿ ತಂದೆ ಪ್ರಭುರಾವ ಹೊಸಮನಿ ವ:18 ವರ್ಷ ಜ್ಯಾತಿ: ಎಸ್.ಸಿ ಉ:ವಿಧ್ಯಾರ್ಥಿ, ಸಾ:ಕೋಟನೂರ (ಡಿ) ಗುಲಬರ್ಗಾ, 5) ರಾಜಶೇಖರ ರಾಜು ತಂದೆ ಧಾನಪ್ಪ ಮಾಳಗಿ ವ:25 ವರ್ಷ ಜ್ಯಾತಿ: ಲಿಂಗಾಯತ ಉ:ವಿಧ್ಯಾರ್ಥಿ, ಸಾ:ಎನ್.ಜಿ.ಓ ಕಾಲೋನಿ ಗುಲಬರ್ಗಾ, 6) ನಾಗರಾಜ ತಂದೆ ವೆಂಕಟೇಶ ಯಾಧವ ವ:19 ವರ್ಷ ಜ್ಯಾತಿ:ಯಾಧವ ಸಾ:ಜಿ.ಡಿ.ಎ ಕಾಲೋನಿ ಗುಲಬರ್ಗಾ, 7) ಜಗತಸಿಂಗ ತಂದೆ ಸುರೇಂದ್ರಸಿಂಗ  ವ:30 ವರ್ಷ ಸಾ:ಪಂಚಶೀಲ ನಗರ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು, ಅವರ ವಶದಿಂದ 1 ನಾಡ ಪಿಸ್ತುಲು9 ತಲವಾರಗಳು, 1 ಟಾಟಾ ಇಂಡಿಕಾ ವಿಸ್ತಾ ಕಾರ ನಂ.ಕೆಎ:33 ಎಮ್-1759, 3 ಮೋಟಾರ ಸೈಕಲಗಳು3 ಬಡಿಗೆಗಳು ಹಾಗೂ 39,000/-ರೂ ನಗದು ಹಣ ಹೀಗೆ ಒಟ್ಟು 4,00,000/- ರೂಪಾಯಿಗಳ  ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿರುತ್ತಾರೆ.  ಈ ಆರೋಪಿತರು ಗುಲಬರ್ಗಾ ನಗರದ ನಿರ್ಜನ ಪ್ರದೇಶದಲ್ಲಿ ಮತ್ತು ಹೊರ ವಲಯದಲ್ಲಿ ತಿರುಗಾಡುತ್ತಿದ್ದ ಸಾರ್ವಜನಿಕರನ್ನು ಲಾಂಗಮಚ್ಚುಗಳಿಂದ ಹೆದರಿಸಿ ಹಣ ಲೂಟಿ ಮಾಡುವುದು ಮತ್ತು ಹೊಲ ಮತ್ತು ಪ್ಲಾಟಗಳಿಗೆ ಸಂಬಂಧಪಟ್ಟಂತೆ ವ್ಯಾಜ್ಯಗಳನ್ನು ನಾವೇ ಬಗೆಹರಿಸುತ್ತೇವೆ ಅಂತಾ ಹೆದರಿಸಿ ಹಣ ವಸೂಲು ಮಾಡುವುದು, ಮತ್ತು ವಾಯು ವಿಹಾರಕ್ಕೆ ದಂಪತಿಗಳು ಹೋದಾಗ ಅವರನ್ನು ಹೆದರಿಸಿ ಹಣ ವಸೂಲು ಮಾಡುತ್ತಿದ್ದ ಬಗ್ಗೆ ವಿಚಾರಣೆಯಲ್ಲಿ ತಿಳಿದು ಬಂದಿರುತ್ತದೆ. ಮಾನ್ಯ ಶ್ರೀ ಎನ್.ಸತೀಶಕುಮಾರ ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು, ಈ ತನಿಖಾ ತಂಡಗಳ ಕಾರ್ಯವನ್ನು ಶ್ಲಾಘಿಸಿರುತ್ತಾರೆ.

No comments: