Police Bhavan Kalaburagi

Police Bhavan Kalaburagi

Monday, January 7, 2013

GULBARGA DISTRICT


:: ಗುಲಬರ್ಗಾ ಜಿಲ್ಲಾ ಪೊಲೀಸ್ ರ ಕಾರ್ಯಚರಣೆ ::
:: ರಿಯಲ್ ಎಸ್ಟೆಟ್ ಏಜೆಂಟೆನನ್ನು  ಕೊಲೆ ಮಾಡಿದ ಆರೋಪಿ ಬಂದನ ::
        ದಿನಾಂಕ:02-01-2013 ರಂದು ಬಾಲಕ್ರೀಷ್ಣ ಕುಲಕರ್ಣಿ ರಿಯಲ್ ಎಸ್ಟೇಟ ಏಜೆಂಟ ಸಾ|| ಎನ್.ಜಿ.ಓ ಕಾಲೋನಿ ಗುಲಬರ್ಗಾ ಇತನನ್ನು ಜೇವರ್ಗಿ ಪೊಲೀಸ ಠಾಣೆ ಹದ್ದಿಯಲ್ಲಿ ಕೊಲೆಯಾಗಿದ್ದರ ಬಗ್ಗೆ ಪ್ರಕರಣ ದಾಖಲಾಗಿದ್ದು, ಪ್ರಕರಣ ತನಿಖೆ ಕೈಕೊಂಡ ಶ್ರೀ ಆರ. ವಿ.ಸಾವಳಗಿ ಸಿಪಿಐ ಜೇವರ್ಗಿ ರವರು ಅರೋಪಿಯನ್ನು ದಿನಾಂಕ:06-01-2013 ರಂದು ಮಾಹಾರಾಷ್ಟ ರಾಜ್ಯದ ಕೊಲ್ಲಾಪೂರ ನಗರದಲ್ಲಿ ಬಂದಿಸಿ ವಿಚಾರಣೆ ಮಾಡಿದಾಗ, ವಿಜಯಕುಮಾರ ಇತನು ಬಾಲಕ್ರೀಷ್ಣ ಇತನಿಗೆ ಗುಲಬರ್ಗಾ ನಗರದ ಹೌಸಿಂಗ್ ಬೋರ್ಡ ಕಾಲೋನಿಯಲ್ಲಿರುವ ಪ್ಲಾಟ ವಿಷಯಕ್ಕೆ ಸಂಬಂಧಿಸಿದಂತೆ, ಬಿಜಾಫೂರದ ಮಲ್ಲೇಶಪ್ಪಾ ತುಪ್ಪದ ಎಂಬುವವರಿಗೆ ಕೆ.ಎಚ.ಬಿ ಪ್ಲಾಟ ಮಂಜೂರಾಗಿದ್ದು, ಸದರಿಯವರು ಹಣ ಕಟ್ಟಲಾರದಕ್ಕೆ  ಪ್ಲಾಟ ಹಾಗೆ ಉಳಿದಿತ್ತು, ಆರೋಪಿತನು ಮಲ್ಲೇಶಪ್ಪ ತುಪ್ಪದ ಇವರಿಗೆ ಸಂಪರ್ಕಿಸಿ  ಆ ಪ್ಲಾಟನ್ನು ಬೇರೆಯವರಿಗೆ ಮಾರಾಟ ಮಾಡಿ ನಿಮಗೆ ಕಮಿಶನ್ ಕೊಡಿಸುತ್ತೆನೆ ಅಂತಾ ಹೇಳಿ ಪ್ಲಾಟ ತೆಗೆದುಕೊಳ್ಳಲು ಬಾಲಕ್ರೀಷ್ಣ ರವರಿಗೆ ಹೇಳಿದ್ದೆನು. ಬಾಲಕ್ರೀಷ್ಣ ಇವರು 23  ಲಕ್ಷ ರೂಪಾಯಿಗಳಿಗೆ ಪ್ಲಾಟ ಖರೀದಿ ಪ್ರಯುಕ್ತ  ಶಂಕರ ರಾಠೋಡ ಇವರ ಹತ್ತಿರದಿಂದ 21 ಲಕ್ಷ ರೂಪಾಯಿಗಳು ಪಡೆದುಕೊಂಡು ಆರೋಪಿತನಿಗೆ ಕೊಟ್ಟಿದ್ದರು, ಮಲ್ಲೇಶಪ್ಫಾ ಇತನು 10 ತಿಂಗಳಾದರು ರಜಿಸ್ಟರ ಮಾಡಿಸಿಕೊಡುವದಕ್ಕೆ ಬರೆದ ಇರುವದರಿಂದ ಬಾಲಕ್ರೀಷ್ಣ ಇವರಿಗೆ ಪ್ಲಾಟ ಕೊಡಲು ಆಗಿರುವದಿಲ್ಲ. ಬಾಲಕೃಷ್ಣ ಇವರು ನನ್ನ ಹೆಸರಿಗೆ ಪ್ಲಾಟ ಮಾಡು ಇಲ್ಲವಾದರೆ ನಾನು ಕೊಟ್ಟಿರುವ ಹಣ ಕೊಡು ಅಂತಾ ಬಹಳ ತಕರಾರು ಮಾಡುತ್ತಿದ್ದನು. ಬಾಲಕ್ರಿಷ್ಣ ಇತನಿಗೆ ತೆಗೆದುಕೊಂಡ ಹಣ ವಾಪಸ್ ಕೊಡಲು ಆಗುತ್ತಿಲ್ಲವಾದ್ದುದರಿಂದ, ದಿನಾಂಕ;02-01-2013 ರಂದು ನಗರದ ಕೋಠಾರಿ ಭವನದ ಹತ್ತಿರ ಭಾಡಿಗೆ ಕಾರು ಪಡೆದುಕೊಂಡು ಜೇವರ್ಗಿ ಕಡೆಗೆ ಹೋಗಿ ಪುನಃ ಅದೇ ಕಾರಿನಲ್ಲಿ ಗುಲಬರ್ಗಾಕ್ಕೆ ಬರುವಾಗ  ಚಾಲಕನಿಗೆ ಸೋಮನಾಥ ಹಳ್ಳಿ ಸಿಮೇಯ ಒಂದು ಹೋಲ ನೋಡಬೇಕಾಗಿದೆ ಅಂತಾ ಹೇಳಿದ್ದರಿಂದ,  ಸೋಮನಾಥ ಹಳ್ಳಿ ಸೀಮೇಯ ರೋಡಿನ ಒಳಗಡೆ ಕಾರು ತೆಗೆದುಕೊಂಡು ಹೋದಾಗ ಬಾಲಕ್ರಿಷ್ಣ ಇತನಿಗೆ ಕಾರಿನಲ್ಲಿಯೇ ಹರಿತವಾದ ಆಯುಧದಿಂದ ಹೊಡೆದು ಕೋಲೆ ಮಾಡಿರುತ್ತೆನೆ ಅಂತಾ ಒಪ್ಪಿಕೊಂಡಿದ್ದು, ಆರೋಪಿಯಿಂದ ಕೊಲೆ ಮಾಡಲು ಬಳಸಿದ ಹರಿತವಾದ ಆಯುಧ ಜಪ್ತಿ ಪಡಿಸಿಕೊಂಡು ಆರೋಪಿ ವಿಜಯಕುಮಾರ ಇತನನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ. ಕೊಲೆ ಪ್ರಕರಣ ಆರೋಪಿ ಪತ್ತೆ ಮಾಡಿದ ತಂಡಕ್ಕೆ ಮಾನ್ಯ ಎಸ.ಪಿ ಸಾಹೇಬರು ಶ್ಲಾಘಿಸಿರುತ್ತಾರೆ.


No comments: