Police Bhavan Kalaburagi

Police Bhavan Kalaburagi

Wednesday, January 9, 2013

GULBARGA DISTRICT


5 ಜನ ದರೋಡೆಕೋರರ ಬಂಧನ.
ಶ್ರೀ ಸತೀಶಕುಮಾರ ಐ.ಪಿ.ಎಸ್,. ಪೊಲೀಸ್ ಅಧೀಕ್ಷಕರು ಗುಲಬರ್ಗಾರವರ ಮತ್ತು ಶ್ರೀ ಕಾಶಿನಾಥ ತಳಕೇರಿ ಅಪರ ಎಸ್.ಪಿ ಗುಲಬರ್ಗಾಶ್ರೀ ಭೂಷಣ ಬೋರ್ಸೆ ಎ.ಎಸ್.ಪಿ (ಎ) ಉಪ-ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ದಿನಾಂಕ:06-01-2013 ರಂದು ಗುಲಬರ್ಗಾ ನಗರದ ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯಲ್ಲಿ, ಶ್ರೀ ಜಮೀರ ಅಹ್ಮದ ತಂದೆ ಮಸ್ತಾನಸಾಬ ಭಾಗವಾನ ಸಾ|| ಲಕ್ಷ್ಮಿ ನಗರ ಡಬರಾಬಾದ ಗುಲಬರ್ಗಾ ಇತನಿಂದ ಹಣ ಮತ್ತು ಮೋಬಾಯಿಲ್ ದರೋಡೆ ಮಾಡಿದ ಆರೋಪಿಗಳ ಪತ್ತೆ ಕುರಿತು, ಶ್ರೀ ಬಿ.ಬಿ ಭಜಂತ್ರಿಪಿ.ಐ ಚೌಕ ಠಾಣೆಶ್ರೀ ನಾರಾಯಣಪ್ಪ ಪಿ.ಐ ರೋಜಾ ಠಾಣೆಶ್ರೀ ಶರಣಬಸವೇಶ್ವರ ಪಿ.ಐ ಬ್ರಹ್ಮಪೂರ ಠಾಣೆಶ್ರೀ ನಟರಾಜ್ ಪಿ.ಎಸ್.ಐ ಚೌಕ ಠಾಣೆಸಿಬ್ಬಂದಿಯವರಾದ ಶ್ರೀ ಸಿದ್ದಪ್ಪ ಎ.ಎಸ್.ಐಮಾರುತಿ ಎ.ಎಸ್.ಐ. ಪಾಂಡುರಂಗಪಂಡಿತಪ್ರಕಾಶಮಹಾಂತೇಶಶಿವಪ್ರಕಾಶದೇವಿಂದ್ರಪ್ಪ ರವರನ್ನೊಳಗೊಂಡ ವಿಶೇಷ ತನಿಖಾ ತಂಡ ರಚಿಸಿದ್ದುಸದರಿ ತನಿಖಾ ತಂಡವು 5 ಜನ ಆರೋಪಿತರಾದ ವಾಹಿದ ಪಟೇಲ್ ತಂದೆ ರುಕ್ಮುದ್ದಿನ್ ಪಟೇಲ್ನಮೀರಖಾನ ತಂದೆ ಯುಸೂಫಖಾನ,ಮಹೆಬೂಬ ತಂದೆ ಹುಸೇನಸಾಬ ಲದಾಫ,ಬಾಬಾ ತಂದೆ ಮಹ್ಮದ ಸಲಿಂ ಸೈಯ್ಯದ,ರಹಮತ್ ತಂದೆ ಮಹ್ಮದ ಫಕ್ರುದ್ದಿನ್ ಸಾ|| ಎಲ್ಲರು ಗುಲಬರ್ಗಾ ಇವರುಗಳನ್ನು ಬಂದಿಸಿದ್ದು,  ಬಂಧಿತ ಅರೋಪಿಗಳಿಂದ ನಗದು ಹಣಸ್ಯಾಮ್ಸಾಂಗ್ ಮೊಬೈಲ್ ಹಾಗು ಕೃತ್ಯಕ್ಕೆ ಉಪಯೋಗಿಸಿದ ಆಯುಧ ಜಪ್ತಿಪಡಿಸಿಕೊಳ್ಳಲಾಗಿದೆ. ಸದರಿ ಆರೋಫಿತರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ. ಪತ್ತೆ ಕಾರ್ಯ ಕೈಕೊಂಡ ತಂಡಕ್ಕೆ ಮಾನ್ಯ ಶ್ರೀ ಸತೀಶಕುಮಾರ ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು ಶ್ಲಾಘಿಸಿರುತ್ತಾರೆ.


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀಮತಿ ರಶೀದಾಬೇಗಂ  ಗಂಡ ಅಜೀಮಖಾನ ಸಾ|| ಬೀ ಗಲ್ಲಿ ಹುಮನಾಬಾದ ಜಿ|| ಬೀದರರವರು ನಾನು ಮತ್ತು ನನ್ನ ಗಂಡ ಅಜೀಮಖಾನ ಕೂಡಿಕೊಂಡು ದಿನಾಂಕ:08-01-2013 ರಂದು  9-30 ಪಿ.ಎಂ.ಕ್ಕೆ ಮಹಮ್ಮದ ರಫೀಕ ಚೌಕ ಹತ್ತಿರ ರಿಂಗರೋಡ ಬದಿಗೆ ನಾವು ನಡೆದುಕೊಂಡು ಹೋಗುತ್ತಿರುವಾಗ ಆಟೊರಿಕ್ಷಾ ನಂ.ಕೆಎ-32/ಎ-3436. ನೇದ್ದರ ಚಾಲಕ ತನ್ನ ಆಟೋ ರಿಕ್ಷಾವನ್ನು ಅತೀವೇಗ ಮತ್ತು ನಿಸ್ಕಾಳಜಿತನ ನಡೆಯಿಸಿಕೊಂಡು ಬಂದು ನನ್ನ ಗಂಡ ಮಹಮ್ಮದ  ಅಜಿಮಖಾನ ಇವರಿಗೆ ಜೋರಾಗಿ ಡಿಕ್ಕಿ ಹೋಡೆದು ತಲೆಗೆ ಭಾರಿ ಗಾಯಗೊಳಿಸಿರುತ್ತಾನೆ. ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಬರುವಾಗ ಮಾರ್ಗ  ಮದ್ಯದಲ್ಲಿ ಮೃತಪಟ್ಟಿರುತ್ತಾನೆ. ಸದರಿ ಅಟೊ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ  ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:18/2013 ಕಲಂ. 279,304 (ಎ)  ಐಪಿಸಿ ಸಂಗಡ 187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  

No comments: