Police Bhavan Kalaburagi

Police Bhavan Kalaburagi

Tuesday, February 5, 2013

GULBARGA DISTRICT REPORTED CRIME


ಅಪಘಾತ ಪ್ರಕರಣ:
ಸೇಡಂ ಪೊಲೀಸ್ ಠಾಣೆ :ದಿನಾಂಕ:05-02-2013 ರಂದು ಬೆಳಗ್ಗೆ 8-00 ಗಂಟೆಗೆ ನನ್ನ ಮಗ ರಾಹುಲ್ ಮತ್ತು ನನ್ನ ಅಣ್ಣನ ಮಗಳಾದ ಜಯಶ್ರೀ ತಂದೆ ಮೋಹನ್ ಹರಿಹರ ಕೂಡಿಕೊಂಡು ಕೋಚಿಂಗ್ ಕ್ಲಾಸಗೆ ನಮ್ಮ ಕೈನೆಟಿಕ್ ಹೊಂಡಾ ನಂ-ಕೆಎ-32 ಹೆಚ್-8056 ನೇದ್ದರ ಮೇಲೆ ಬಜಾರ ರಸ್ತೆ ಸೇಡಂದಲ್ಲಿ ನಿಧಾನವಾಗಿ ಹೋಗುತ್ತಿರುವಾಗ ಹಿಂದಿನಿಂದ ಕೆಎ-31/4332 ನೇದ್ದರ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಹಾಗೂ ನಿಷ್ಕಾಳಜಿತನದಿಂದ ನಡೆಯಿಸಿಕೊಂಡು ಬಂದು ನನ್ನ ಮಗನ ಮೋಟಾರ ಸೈಕಲಗೆ ಡಿಕ್ಕಿ ಪಡಿಸಿದ್ದರಿಂದ ನನ್ನ ಮಗನು ರೋಡಿನ ಮೇಲೆ ಬಿದ್ದುದ್ದರಿಂದ ಅವನ ತಲೆಯ ಮೇಲೆ ಲಾರಿ ಹಾಗೆಯೇ ನಡೆಯಿಸಿಕೊಂಡು ಹೋಗಿದ್ದರಿಂದ ಅವನ ತಲೆಯು ಪೂರ್ತಿ ಚಪ್ಪಟೆಯಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾನೆ. ಜಯಶ್ರೀ ಇವಳಗೆ ತರಚಿದ ಗಾಯಗಳಾಗಿದ್ದು, ಲಾರಿ ಚಾಲಕ ತನ್ನ ಲಾರಿ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಶ್ರೀ ದಶರತ ತಂದೆ ಶಂಕರ ಅಂಕಲಕರ್ ಸಾ:ಕೊಡ್ಲಾ ಕ್ರಾಸ್ ಸೇಡಂ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:31/2013 ಕಲಂ,279,337,304(ಎ) ಐಪಿಸಿ ಸಂಗಡ 187 ಐ.ಎಮ್.ವ್ಹಿ. ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: