ಹಲ್ಲೆ ಪ್ರಕರಣ:
ನಿಂಬರ್ಗಾ ಪೊಲೀಸ ಠಾಣೆ:ಶ್ರೀ ಹರಿಶ್ಚಂದ್ರ ತಂದೆ ಶಂಕರ ಚವ್ಹಾಣ ಸಾ||ಭೂಸನೂರ ತಾಂಡಾ ತಾ||ಆಳಂದ ರವರು ನಾನು ಮತ್ತು ನನ್ನ ಹೆಂಡತಿ ದುಮಕಾಬಾಯಿ ದಿನಾಂಕ:10-02-2013 ರಂದು ಮುಂಜಾನೆ 10-00 ಗಂಟೆಗೆ ಮನೆಯಲ್ಲಿದ್ದಾಗ ಮಲ್ಲಿನಾಥ ತಂದೆ ರಾಮದಾಸ , ವಾಸುದೇವ ತಂದೆ ರಾಮದಾಸ ಇಬ್ಬರೂ ನನ್ನ ಮನೆಯ ಒಳಗೆ ಬಂದು ಅವಾಚ್ಯವಾಗಿ ಬೈದು ಜಗದೇವಿ ಇವಳು ಕರೆಂಟ ಹಿಡಿದು ಸತ್ತಿರುವ ವಿಷಯದ ಸಂಬಂಧ ನಿನಾಗಲಿ ಮತ್ತು ನಿನ್ನ ಹೆಂಡತಿಯಾಗಲಿ ಸಾಕ್ಷಿ ಹೇಳಿದ್ದರೆ ? ನೋಡು ಬೇದಿರಿಕೆ ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.12/2013 ಕಲಂ 448, 323, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ದೇವಲಗಾಣಗಾಪೂರ ಪೊಲೀಸ್ ಠಾಣೆ:ದಿನಾಂಕ:10-02-2013 ರಂದು 00:30 ಗಂಟೆಗೆ ಸಂಗಾಪುರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆ ಮುಂದಿನ ಸಾರ್ವಜನಿಕ ಸ್ಥಳದಲ್ಲಿ 5 ಜನರು ಇಸ್ಪೇಟ ಆಡುತ್ತಿರುವ ಬಗ್ಗೆ ಭಾತ್ಮಿ ಬಂದ ಮೇರೆಗೆ ಪಿ.ಎಸ.ಐ ಪ್ರದೀಪ ಕೊಳ್ಳ ದೇವಲಗಾಣಗಾಪುರ ಠಾಣೆ ಮತ್ತು ಸಿಬ್ಬಿಂದಿಯವರು ಕೂಡಿಕೊಂಡು ದಾಳಿ ಮಾಡಿ ವಿಠ್ಠಲ ತಂದೆ ಸಿದ್ದಪ್ಪ ವಾಳಿ ಮತ್ತು ಇನ್ನೂ 4 ಜನರರಿಂದ ಜೂಜಾಟಕ್ಕೆ ಸಂಬಂಧಿಸಿದ ನಗದು ಹಣ 16,446-00 ರೂ ಮತ್ತು ಇಸ್ಪೇಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:15/2013 87 ಕೆಪಿ ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಪೊಲೀಸ್ ಠಾಣೆ:ಶ್ರೀ ಶೇರು ಖಾನ ತಂದೆ ಅಬ್ಬಾಸ ಖಾನ ಸಾ: ಹುದಾ ಮಜೀದ ಹತ್ತಿರ ರಹಿಮತ ನಗರ ಗುಲಬರ್ಗಾ ರವರು ನಾನು ದಿನಾಂಕ:09-02-2013 ರಂದು ರಾತ್ರಿ 11=00 ಗಂಟೆಗೆ ಎಸ್.ವಿ.ಪಿ.ಸರ್ಕಲ್ ದಿಂದ ರೇಲ್ವೆ ಸ್ಟೇಷನ ಕಡೆಗೆ ಮನೆಗೆ ಹೋಗುವ ನಡೆದುಕೊಂಡು ಹೋಗುತ್ತಿದ್ದಾಗ ಬಸವ ಭವನ ಖಾನಾವಳಿ ಹತ್ತಿರ ಅಟೋರೀಕ್ಷಾ ನಂಬರ ಕೆಎ-32 ಬಿ-6285 ರ ಚಾಲಕನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಹಿಂದಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಭಾರಿ ಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:11/2013 ಕಲಂ: 279,338 ಐ.ಪಿ.ಸಿ. ಸಂ 187 ಐ,ಎಮ್,ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಸಿಲೆಂಡರ್ ವಶ:
ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ:ದಿನಾಂಕ 08/02/2013 ರಂದು ಮಧ್ಯಾಹ್ನ ಶ್ರೀಮಂತ ಇಲ್ಲಾಳ ಪಿ.ಎಸ.ಐ (ಕಾ.ಸು) ಎಂ.ಬಿ ನಗರ ಪೊಲೀಸ ಠಾಣೆಯವರು ಅವರ ಪೆಟ್ರೋಲಿಂಗ್ ಕರ್ತವ್ಯಕ್ಕೆ ಹೋಗಿದ್ದಾಗ ಕೆ.ಎನ್.ಝಡ್ ಫಂಕ್ಷನ್ ಹಾಲ್ ಮುಂದುಗಡೆ ಮುಖ್ಯ ರಸ್ತೆಯ ಪಕ್ಕದಲ್ಲಿ 3 ಜನರು ನಿಂತಿದ್ದು, ಅದರಲ್ಲಿ ಒಬ್ಬನು ಸಿಲಿಂಡರ್ ಹಿಡಿದುಕೊಂಡು ನಿಂತಿದ್ದನ್ನು ಕಂಡು ಯಾಕೆ ನಿಂತಿರುತ್ತೀರಿ ಅಂತಾ ವಿಚಾರಿಸಲು ಸಮರ್ಪಕವಾದ ಉತ್ತರ ನೀಡಲಿಲ್ಲ. ಕೃಷ್ಣಯ್ಯ ತಂದೆ ಭೀಮಾಶಂಕರ್ ಗುತ್ತೇದಾರ,ಸಿದ್ದಯ್ಯ ತಂದೆ ಭೀಮಾಶಂಕರ ಗುತ್ತೆದಾರ ಶರಣಬಸಪ್ಪ ತಂದೆ ಭೀಮಶಾ ಗುತ್ತೆದಾರ ಎಲ್ಲರೂ ಸಾ||ಚುಂಗಿ ಗ್ರಾಮ ತಾಃ ಅಕ್ಕಲಕೋಟ್ ಜಿ||ಸೊಲ್ಲಾಪೂರ್ ಅಂತಾ ತಿಳಿದು ಬಂದಿದ್ದು, ಸದರಿಯವರ ಹತ್ತಿರವಿದ್ದ ಸಿಲಿಂಡರ್ ಬಗ್ಗೆ ಯಾವುದೇ ದಾಖಲಾತಿ ತೋರಿಸಲಿಲ್ಲ. ಸದರಿಯವರನ್ನು ವಶಕ್ಕೆ ತೆಗೆದುಕೊಂಡು ಠಾಣೆ ಗುನ್ನೆ ನಂ:22/2013 ಕಲಂ. 41(ಡಿ), 102 ಸಿ.ಆರ್.ಪಿ.ಸಿ ಹಾಗು 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡಿರುತ್ತಾರೆ. ಹಾಗೂ ಸದರಿಯವರು ಗುಲಬರ್ಗಾ ನಗರ ವ್ಯಾಪ್ತಿಯಲ್ಲಿ ಬರುವ ಆರ್.ಜಿ ನಗರ ಪೊಲೀಸ ಠಾಣೆಯ ಗುನ್ನೆಗಳಲ್ಲಿ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾದ ಬಗ್ಗೆ ವಿಚಾರಣೆ ವೇಳೆ ತಿಳಿದು ಬಂದಿರುತ್ತದೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ವೀರಭದ್ರ ತಂದೆ ರಾಮಚಂದ್ರ ಸಾವಳಗಿ ಸಾ:ಕಡಗಂಚಿ ತಾ||ಆಳಂದ ಜಿ||ಗುಲಬರ್ಗಾರವರು ನಾನು ನನ್ನ ತಮ್ಮನೊಂದಿಗೆ ದಿನಾಂಕ:10/2/2013 ರಂದು ಮೋಟಾರ ಸೈಕಲ್ ನಂಬರ ಕೆಎ-32 ಇಎ-1717 ನೇದ್ದರ ಮೇಲೆ ಕಡಗಂಚಿಗೆ ಹೊರಟಾಗ ಸುಂಟನೂರ ಕ್ರಾಸ ಸಮೀಪ ಕಾರ ನಂ ಕೆಎ-05 ಎಮ್‌ಎಪ್-2009 ನೇದ್ದರ ಚಾಲಕ ತನ್ನ ಕಾರನ್ನು ಅತೀವೇಗ ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿ ಕಾರ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 91/2013 ಕಲಂ, 279, 283, ಸಂಗಡ 187 ಐ.ಎಮ.ವಿ.ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ:10/02/2013 ರಂದು ಸಾಯಂಕಾಲ ಪಟ್ಟಣ್ಣ ಗ್ರಾಮದ ದತ್ತು ಹಂಗರಗಿ ಇವರ ಹೊಲದ ಹಳ್ಳದಲ್ಲಿ ಜೂಜಾಟ ಆಡುತ್ತಿದ್ದ ಭಾತ್ಮಿ ಬಂದ ಮೇರೆಗೆ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಶ್ರೀ, ಆನಂದರಾವ ಎಸ್ ಎನ್ ಪಿಎಸ್‌ಐ ಮತ್ತು ಅವರು ಸಿಬ್ಬಂದಿಯವರು ದಾಳಿ ಮಾಡಿ ನಾಗೇಶ ತಂದೆ ದತ್ತು ಸಾಬಸೂದೆ ಸಾ||ಶಹಾಬಜಾರ ಗುಲಬರ್ಗಾ ಸಂಗಡ ಇನ್ನೂ 11 ಜನರನ್ನು ವಶಕ್ಕೆ ತೆಗೆದುಕೊಂಡು ಜೂಜಾಟಕ್ಕೆ ಬಳಸಿದ ನಗದು ಹಣ 12330/- ರೂಪಾಯಿಗಳು ಮತ್ತು ಇಸ್ಪೇಟ ಎಲೆಗಳನ್ನು ಜಪ್ತಿ ಪಡಿಸಿಕೊಂಡು ಠಾಣೆ ಗುನ್ನೆ ನಂ: 92/2013 ಕಲಂ, 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
No comments:
Post a Comment