ಕೊಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ದಿನಾಂಕ:15/02/13 ರಂದು 5.45 ಎಎಂ ಸುಭಾಸ ತಂದೆ ಶರಣಪ್ಪಾ ಅನ್ನುವವರು ಪೋನ ಮಾಡಿ, ನಿಮ್ಮ ತಮ್ಮ ಚಂದ್ರಕಾಂತ ಇತನಿಗೆ ಯಾರೋ ದುಷ್ಕರ್ಮಿಗಳು ಮಾಲಗತ್ತಿ ಗ್ರಾಮದ ಹೊಡ್ಡಿನಮನಿ ಸಂಧಿಯಲ್ಲಿ ಎರಡು ಪರ್ಸಿಕಲ್ಲು ತುಕಡಿಗಳಿಂದ ತಲೆಯ ಮೇಲೆ ಹೊಡೆದು ತಲೆಯಲ್ಲಿ ಭಾರಿ ರಕ್ತಗಾಯವಾಗಿ ಮತ್ತು ಹಣೆಯ ಮೇಲೆ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ ಅಂತಾ ತಿಳಿಸಿದ ಮೇರೆಗೆ ನಾನು ಮತ್ತು ಪ್ರಕಾಶ ತಂದೆ ಶರಣಪ್ಪ ಹಾಗೂ ಹೊನ್ನಪ್ಪ ತಂದೆ ಸಂಗಣ್ಣಾ ಕೂಡಿ ಹೋಗಿ ನೋಡಲಾಗಿ ನನ್ನ ತಮ್ಮನ ಶವವು ಮಾಲಗತ್ತಿ ಗ್ರಾಮದ ಹೊಡ್ಡಿನ ಮನಿ ಸಂಧಿಯಲ್ಲಿ ಅಂಗಾತವಾಗಿ ಬಿದ್ದಿದ್ದು ಎಡಗೈ ಭುಜದವರೆಗೆ ಮಡಚಿದ್ದು, ಬಲಗೈ ಮಗ್ಗಲಲ್ಲಿ ಚಾಚಿದ್ದು ಎರಡು ಕಾಲುಗಳು ಸೀದಾ ಇದ್ದು ಹಣೆಯ ಮೇಲೆ 2 ಇಂಚು ಉದ್ದ ಮತ್ತು ½ (ಅರ್ಧ) ಇಂಚ ಅಗಲದಷ್ಟು ಸಿಳಿದಂತೆ ಕಂಡು ಬರುತ್ತಿದ್ದು ತಲೆಯ ಮೇಲಿಂದ ಹಣೆಯ ಮೇಲಿಂದ ರಕ್ತ ಬರುತ್ತಿದ್ದು ರಕ್ತದ ಮಡುವಿನಲ್ಲಿ ತಲೆಯ ಕಂಡುಬರುತ್ತಿದ್ದನನ್ನು ನೋಡಿರುತ್ತೆನೆ. ನನ್ನ ತಮ್ಮನಿಗೆ ಕೊಲೆ ಮಾಡಿದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಜರುಗಿಸಬೇಕೆಂಬ ಅಂತಾಶ್ರೀ ಬಸವರಾಜ ತಂದೆ ನಾನಾಸಾಬ ಮಡಿವಾಳ ಉ:ಕೆ.ಎಸ್.ಆರ್.ಟಿ.ಸಿ ಮೆಕ್ಯಾನಿಕ್ ಕಾಳಗಿ ಡಿಪೋ ಸಾ:ಮಾಲಗತ್ತಿ ಹಾ:ವ:ಚನ್ನವೀರ ನಗರ ಪಿಲ್ಟರ ಬೇಡರೋಡ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ: 20/2013 ಕಲಂ, 302 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ರುಕ್ನೋದ್ದಿನ ತಂದೆ ಅಬ್ದುಲ ಹಮೀದ ಮಜಾವರ ಸಾ||ಹೊನಗುಂಟಾ ರವರು ದಿನಾಂಕ:11-02-2013 ರಂದು ಮಧ್ಯಾಹ್ನ 2.30 ಗಂಟೆ ಸುಮಾರಿಗೆ ನಾನು ಶಹಾಬಾದದ ಮೇನ ಬಜಾರದ ಡಾ||ಕೋರಿ ದವಾಖಾನೆ ಮೇಡಿಕಲ್ ಅಂಗಡಿ ಎದುರಿಗೆ ನಿಂತಾಗ ಮಲ್ಲಣ್ಣಾ ಗೋಳಾ ಅಂಗಡಿ ಕಡೆಯಿಂದ ಆಟೋ ನಂ.ಕೆಎ-32/3352 ನೇದ್ದರ ಚಾಲಕ ತನ್ನ ವಾಹನವನ್ನು ಅತಿವೇಗ ಮತ್ತು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ನಾನು ನನ್ನ ಮೋಟಾರ ಸೈಕಲ ನಂ.ಕೆಎ-32/ಎಲ್-9627 ನೇದ್ದರ ಹತ್ತಿರ ನಿಂತಿರುವಾಗ ಡಿಕ್ಕಿ ಪಡಿಸಿದ್ದರಿಂದ ನನಗೆ ಕಪಾಳ ಮೇಲೆ ಹಾಗೂ ಮೇಲಕಿನ ಹತ್ತಿರ ಮತ್ತು ಬಲಗೈ ಕಿರುಬೆರಳು ಮುರಿದಿದೆ ಹಾಗೂ ಎಡಭಾಗ ಹಲ್ಲುಗಳಿಗೆ ತೊಂದರೆಯಾಗಿದೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 21/2013 ಕಲಂ, 279, 337, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸೇಡಂ ಪೊಲೀಸ ಠಾಣೆ: ಶಿವಕುಮಾರ ತಂದೆ ಅನಂತಪ್ಪ ಗೋಟಗಿ ಸಾ:ಹಾಬಾಳ (ಟಿ) ಗ್ರಾಮ ತಾ:ಸೇಡಂ ರವರು ನಾನು ಮತ್ತು ನಮ್ಮ ಗೆಳೆಯರಾದ ರಾಜು ತಂದೆ ಕಲ್ಲಪ್ಪ ಹೆಳೂರ,ಸಿದ್ದು ತಂದೆ ತಂದೆ ನರಸಪ್ಪ ವಡ್ಡರ, ರಾಜು ತಂದೆ ಹಣಮಂತ ಸಿನಿಮಾದೊರ ಹಾಗೂ ರಾಜು ಹೆಳೂರ ಇತನ ಸಂಭಂದಿಕರು ಕೂಡಿಕೊಂಡು ದಿನಾಂಕ:15-02-2013 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಹಣಮಂತ ತಂದೆ ಕಲ್ಲಪ್ಪ ಹೆಳೂರ ಇತನ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ದಂತಾಪೂರ ಗ್ರಾಮಕ್ಕೆ ಎರಡು ಮೋಟಾರು ಸೈಕಲಗಳು, ಹಾಗೂ ಕ್ರೂಸರ್ ಜೀಪನಲ್ಲಿ ಹೋಗಿ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿಕೊಂಡು ಮರಳಿ ಊರಿಗೆ ಬರುತ್ತಿರುವಾಗ ರಾತ್ರಿ 9-30 ಗಂಟೆ ಸುಮಾರಿಗೆ ಮೋಟಾರು ಸೈಕಲ್ ನಂ- ಕೆಎ-32 ಇಬಿ-1883 ನೇದ್ದು ಸಿದ್ದು ವಡ್ಡರ ನಡೆಸುತ್ತಿದ್ದನು. ನಾನು ಮತ್ತು ರಾಜು ಮೊಟಾರು ಸೈಕಲ್ ನಂ-ಕೆಎ-32 ಎಕ್ಸ್-7432 ನೇದ್ದರ ಮೇಲೆ ಅವರ ಹಿಂದೆ ಹೋಗುತ್ತಿದ್ದೆವು. ಸಿದ್ದು ಇತನು ತನ್ನ ಮೋಟಾರ ಸೈಕಲನ್ನು ಅತೀವೇಗದಿಂದ ಹಾಗೂ ನಿಷ್ಕಾಳಜಿತನದಿಂದ ಚಲಾಯಿಸಿ ರಂಜೋಳ ಗ್ರಾಮದ ನಂತರ ರೋಡ ಸಲುವಾಗಿ ಹಾಕಿದ ಕಂಕರಗಳು (ಕರಿಕಲ್ಲುಗಳು) ಇದ್ದುದ್ದರಿಂದ ಸಿದ್ದು ಇತನು ಮೋಟಾರು ಸೈಕಲಗೆ ಒಮ್ಮೆಲೆ ಬ್ರೇಕ್ ಹಾಕಿದಾಗ ಮೋಟಾರು ಸೈಕಲ್ ಒಮ್ಮೆಲೆ ಸ್ಕಿಡ್ ಆಗಿ ಬಿತ್ತು ಸಿದ್ದು ವಡ್ಡರ ಹಾಗೂ ರಾಜು ತಂದೆ ಕಲ್ಲಪ್ಪ ಹೆಳೂರ ಇಬ್ಬರೂ ಕೆಳಗೆ ಬಿದ್ದರು ನಂತರ ನೋಡಲು ರಾಜು ಹೇಳೂರ ಇತನಿಗೆ ತಲೆಗೆ ಭಾರಿ ರಕ್ತಗಾಯವಾಗಿ ಎರಡೂ ಕಿವಿಗಳಿಂದ ರಕ್ತ ಬರುತ್ತಿತ್ತು ಮತ್ತು ಬಲಗಾಲಿನ ಹಿಮ್ಮಡಿಗೆ ಸಹ ಭಾರಿ ರಕ್ತಗಾಯವಾಗಿತ್ತು ಆತನು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಸಿದ್ದು ವಡ್ಡರ ಇತನಿಗೆ ಭಾರಿ ರಕ್ತಗಾಯವಾಗಿತ್ತು, ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಸೇಡಂಕ್ಕೆ ತೆಗೆದುಕೊಂಡು ಬಂದಾಗ ರಾಜು ಹೆಳೂರ ಇತನು ಮೃತಪಟ್ಟಿರುತ್ತಾನೆ ಅಂತ ವೈದ್ಯಾಧಿಕಾರಿಗಳು ತಿಳಿಸಿದರು. ವೈದ್ಯಾಧಿಕಾರಿಗಳು ಸಿದ್ದು ವಡ್ಡರ ಇತನು ಮಾತನಾಡುವ ಸ್ಥಿತಿಯಲ್ಲಿರದ ಕಾರಣ ಆತನಿಗೆ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾಕ್ಕೆ ತೆಗೆದುಕೊಂಡು ಹೋಗಿರುತ್ತಾರೆ ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:42/2013 ಕಲಂ-279, 337, 338, 304(ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆಗೆ ಪ್ರಯತ್ನ ಪ್ರಕರಣ:
ಶಹಾಬಾದ ನಗರ ಪೊಲೀಸ್ ಠಾಣೆ: ನನ್ನ ಅಣ್ಣ ಮಹಮದ ಇಸೂಫ ಇತನಿಗೆ ನಾನು 2010 ನೇ ಸಾಲಿನಲ್ಲಿ ರೂ.1,40,000/- ಹಣವನ್ನು ಮನೆಯ ಅಡಚಣೆ ಸಲುವಾಗಿ ಕೊಟ್ಟಿದ್ದು, ಸದರಿ ಹಣವನ್ನು ಮರಳಿ ಕೊಡು ಅಂತಾ ಕೇಳಿದ್ದಕ್ಕೆ ದಿನಾಂಕ:16/02/2013 ರಂದು ಮಧ್ಯರಾತ್ರಿ 00.30 ಗಂಟೆ ಸುಮಾರಿಗೆ ಟವೇರಾ ವಾಹನ ನಂ.ಕೆಎ-01/ಎಮ್-9226 ನೇದ್ದರಲ್ಲಿ, ಮೊಹ್ಮದ ಇಸೂಫ ತಂದೆ ಹಾಜೀಕರೀಮ,ಮೊಹ್ಮದ ರಿಯಾಜ ತಂದೆ ಹಾಜಿ ಕರೀಮ, ಸಿದ್ದೀಕ ತಂದೆ ಇಸೂಫಸಾಬ, ಮೊಹ್ಮದ ಮೇರಾಜ ತಂದೆ ಹಾಜೀಕರೀಮ,ಹಾಜಿ ಕರೀಮ ತಂದೆ ಅಲಿಸಾಬಶೇಖ ಹಾಗೂ ಶಾಹೇದ ಬೇಗಂ ಗಂಡ ಸೈಯಸದರೋದ್ದಿನ ರವರು ಕೂಡಿಕೊಂಡು ಬಂದು ಅವಾಚ್ಯವಾಗಿ ಬೈದು ಬಡಿಗೆಯಿಂದ ಮತ್ತು ಕೈಯಿಂದ ಎಡಗಾಲ ಮೊಳಕಾಲಿನ ಕೆಳಗೆ ಹೊಡೆದು ಒಳಪೆಟ್ಟು ಮಾಡಿದ್ದು ಅಲ್ಲಿಯೇ ಬಿದ್ದ ಕಲ್ಲಿನಿಂದ ಮನೆಯ ಕಿಟಕಿ ಗ್ಲಾಸಗಳಿಗೆ ಹೊಡೆದು ಪುಡಿಮಾಡಿದರು. ನನ್ನ ಅಣ್ಣ ಪಿರೋಜ ಖಾನ ಮತ್ತು ತಮ್ಮ ಮಹ್ಮದ ಫಯಾಜ ಇವರು ಜಗಳ ಬಿಡಿಸಲು ಬಂದಾಗ ಕೊಲೆ ಮಾಡುವ ಉದ್ದೇಶದಿಂದ ಚಾಕುವಿನಿಂದ ತಿವಿಯಲು ಬಂದಾಗ ಬಲಗಡೆ ಕುತ್ತಿಗೆಗೆ ರಕ್ತಗಾಯವಾಗಿರುತ್ತದೆ ಬಲಗಡೆ ಭುಜಕ್ಕೆ ಚಾಕುವಿನಿಂದ ಚುಚ್ಚಿದ್ದರಿಂದ ರಕ್ತಗಾಯವಾಗಿರುತ್ತದೆ ಹಾಗೂ ಬಡಿಗೆಯಿಂದ ಎರಡು ಕೈಗಳ ಭುಜಕ್ಕೆ ಹೊಡೆದು ರಕ್ತಗಾಯ ಮತ್ತು ಒಳಪೆಟ್ಟು ಪಡಿಸಿರುತ್ತಾರೆ. ಶಾಹೀನ ಬೇಗಂ ಮತ್ತು ಫರಜಾನ ಬೇಗಂ ರವರಿಗೆ ಮಾನಭಂಗ ಮಾಡಲು ಪ್ರಯತ್ನ ಮಾಡಿ, ಕೈಯಿಂದ ಹೊಡೆದು ಬೈದಿರುತ್ತಾರೆ ಅಂತಾ ಶ್ರೀ ಮಹ್ಮದ ಅಮ್ಜದ ತಂದೆ ಹಾಜಿ ಕರೀಮ ಶೇಖ ಸಾ:ಮಜೀದ ಹಿಂದುಗಡೆ ಶಾಂತನಗರ ಭಂಕೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:22/2013 ಕಲಂ: 147,148,323,324,504,307,354 ಸಂ:149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment