ಗುಲಬರ್ಗಾ ಜಿಲ್ಲಾ ಪೊಲೀಸರ ಕಾರ್ಯಚರಣೆ
ಗುಲಬರ್ಗಾ ಜಿಲ್ಲಾ
ಪೊಲೀಸರಿಂದ ಅಂತರ ರಾಜ್ಯ ಕಳ್ಳನ ಬಂಧನ,
ಬಂಧಿತ ಬಾಬು @ ಮಸ್ತಾನ ಸಾ||
ನಾಗವಾರ, ಬೆಂಗಳೂರು ಇತನಿಂದ
600 ಗ್ರಾಂ ಬಂಗಾರ ಮತ್ತು
1135 ಗ್ರಾಂ ಬೆಳ್ಳಿ ಒಟ್ಟು 19,30,000/-
(ಹತ್ತೊಂಬತ್ತು ಲಕ್ಷ
ಮೂವತ್ತು ಸಾವಿರ) ರೂಪಾಯಿಗಳ ಮೌಲ್ಯದ ಆಭರಣಗಳು ವಶ.
ಮಾನ್ಯ ಶ್ರೀ ಎನ್. ಸತೀಷಕುಮಾರ ಐ.ಪಿ.ಎಸ್,. ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಮಾನ್ಯ ಶ್ರೀ ಕಾಶಿನಾಥ ತಳಕೇರಿ ಅಪರ್ ಪೊಲೀಸ್ ಅಧೀಕ್ಷಕರು ಗುಲಬರ್ಗಾರವರ ಮಾರ್ಗದರ್ಶನದಲ್ಲಿ, ಶ್ರೀ ಭೂಷಣ ಭೊರ್ಸೆ ಹಿರಿಯ ಸಹಾಯಕ ಎಸ್.ಪಿ. “ಎ” ಉಪ-ವಿಭಾಗ ಗುಲಬರ್ಗಾ, ಶ್ರೀ ಎ.ಡಿ. ಬಸವಣ್ಣನವರ್ ಡಿ.ಎಸ್.ಪಿ ‘ಬಿ’ ಉಪ-ವಿಭಾಗ ಗುಲಬರ್ಗಾ, ಶ್ರೀ ಹೆಚ. ತಿಮಪ್ಪಾ ಡಿ.ಎಸ.ಪಿ ಗ್ರಾಮಾಂತರ ಉಪ-ವಿಭಾಗ ಗುಲಬರ್ಗಾರವರ ನೇತ್ರತ್ವದ ತಂಡದಲ್ಲಿ ಶ್ರೀ ಎಸ್.ಎಸ್.ಹುಲ್ಲೂರ ಪೊಲೀಸ್ ಇನ್ಸಪೇಕ್ಟರ ಡಿಸಿಐಬಿ ಘಟಕ ಗುಲಬರ್ಗಾರವರು ಮತ್ತು ಸ್ಟೇಶನ ಬಜಾರ ಪೊಲೀಸ ಠಾಣೆಯ ಇನ್ಸಪೇಕ್ಟರ ಶ್ರೀ.ಜೆ.ಎಚ್.ಇನಾಮದಾರ, ಪಿ.ಎಸ.ಐ. ವಿಜಯ, ಪಿ.ಎಸ.ಐ.ಮುರಳಿ ಹಾಗೂ ಡಿಸಿಐಬಿ ಘಟಕದ ಸಿಬ್ಬಂದಿಯವರಾದ ಎ.ಎಸ.ಐ, ಬಸವರಾಜ, ದತ್ತಾತ್ರಯ, ಹೆಚ.ಸಿ.ಗಳಾದ ಅಣ್ಣರಾವ, ವಿಜಯಕುಮಾರ, ಲಕ್ಕಪ್ಪಾ, ಪ್ರಕಾಶ, ಶಿವಯೋಗಿ, ಅಣ್ಣಪ್ಪಾ, ಅಶೋಕ, ವೀರಣ್ಣಾ ಪಿಸಿ ರವರು ಹಾಗೂ ಸ್ಟೇಶನ ಬಜಾರ ಠಾಣೆಯ ಸಿಬ್ಬಂಧಿಯವರಾದ ಅಖಂಡಪ್ಪಾ ಎ.ಎಸ.ಐ, ಹುಸೇನಸಾಬ ಹೆಚ.ಸಿ ಹುಣಚಪ್ಪಾ ಪಿಸಿರವರ ತಂಡವು ಗುಲಬರ್ಗಾ ನಗರದಲ್ಲಿ 2007 ನೇ ಸಾಲಿನಿಂದ 2012 ನೇ ಸಾಲಿನವರೆಗೆ ಗುಲಬರ್ಗಾ ನಗರದ ವಿವಿಧ ಪೊಲೀಸ್ ಠಾಣೆಗಳ ಸರಹದ್ದುಗಳಲ್ಲಿ ಹಗಲು ಹೊತ್ತಿನಲ್ಲಿ ಮನೆಗೆ ಬೀಗ ಹಾಕಿ ಕೆಲಸಕ್ಕೆ ಹೋಗುತ್ತಿರುವಂತಹ ಒಂಟಿ ಮನೆಗಳನ್ನು ಗುರುತಿಸಿ ಹೊಂಚು ಹಾಕಿ ಹಗಲು ಕಳ್ಳತನ ಮಾಡಿದ ಅಪರಾಧಿ ಬಾಬು @ ಮಸ್ತಾನ ಸಾ||ನಾಗವಾರ ಬೆಂಗಳೂರು ಇತನು ಗುಲಬರ್ಗಾದಲ್ಲಿ ಹಗಲು ಕಳ್ಳತನ ಮಾಡಿದ ಕೆಲವು ಮನೆಗಳಲ್ಲಿ ದೊರೆತ ಬೆರಳು ಮುದ್ರೆಯ ಆಧಾರದ ಮೇಲೆ ಗುರುತಿಸಿ ಗುಲಬರ್ಗಾ ಜಿಲ್ಲಾ ಪೊಲೀಸರು ಮತ್ತು ಬೆಂಗಳೂರು ನಗರ ಪೊಲೀಸರ ಸಹಕಾರದೊಂದಿಗೆ ಜಂಟಿಯಾಗಿ ಕಾರ್ಯಚರಣೆ ಕೈಕೊಂಡು ಆರೋಪಿತನಾದ ಬಾಬು @ ಮಸ್ತಾನ ಇತನನ್ನು ಬೆಂಗಳೂರಿನಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ,
ಗುಲಬರ್ಗಾ ನಗರದ ಸ್ಟೇಷನ ಬಜಾರ ಠಾಣಾ ವ್ಯಾಪ್ತಿಯ ಪಿ & ಟಿ ಕಾಲೋನಿ, ರಹಿಮತ್ ನಗರ, ಚಂದ್ರಶೇಖರ ಪಾಟೀಲ ಕ್ರೀಡಾಂಗಣ ಹತ್ತಿರದ ಬ್ಯಾಂಕ ಕಾಲೋನಿ, ಗಾಬರೆ ಲೇಔಟ್, ರಾಘವೇಂದ್ರ ನಗರ ಠಾಣಾ ವ್ಯಾಪ್ತಿಯ ಗಾಲಿಬ್ ಕಾಲೋನಿ, ಏಕ್ಬಾಲ ಕಾಲೋನಿ. ಗ್ರಾಮೀಣ ಪೊಲೀಸ ಠಾಣೆಯ ವ್ಯಾಪ್ತಿಯ ಎಂ.ಕೆ.ನಗರ ಹಾಗರಗಾ ರೋಡ, ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಬಹಮನಿ ಚೌಕ, ಗಣೇಶ ನಗರ, ಠಾಣಾ ವ್ಯಾಪ್ತಿಯಲ್ಲಿ ಹಗಲು ಹೊತ್ತಿನಲ್ಲಿ ಮನೆಗಳ್ಳತನ ಮಾಡಿದ 10 ಗುನ್ನೆಗಳಲ್ಲಿಯ 600 ಗ್ರಾಂ ಬಂಗಾರ ಮತ್ತು 1135 ಗ್ರಾಂ ಬೆಳ್ಳಿ ಇವುಗಳ ಒಟ್ಟು ಅಂದಾಜು ಮೌಲ್ಯ 19,30,000/- (ಹತ್ತೊಂಬತ್ತು ಲಕ್ಷ ಮೂವತ್ತು ಸಾವಿರ) ರೂಪಾಯಿಗಳ ಮೌಲ್ಯದ ಬಂಗಾರದ ಮತ್ತು ಬೆಳ್ಳಿಯ ಆಭರಗಣಗಳನ್ನು ಆರೋಪಿತನಾದ ಬಾಬು @ ಮಸ್ತಾನ ಸಾ|| ನಾಗವಾರ ಬೆಂಗಳೂರು ಇತನಿಂದ ವಶಪಡಿಸಿಕೊಳ್ಳಲಾಗಿದೆ.
ಈ ಕಾರ್ಯಚರಣೆಯಲ್ಲಿ ಭಾಗಿಯಾದ ತಂಡದ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಯವರಿಗೆ ಮಾನ್ಯ ಶ್ರೀ ಎನ್. ಸತೀಷಕುಮಾರ ಐ.ಪಿ.ಎಸ್.. ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ನಗದು ಬಹುಮಾನ ಘೋಷಿಸಿರುತ್ತಾರೆ.
No comments:
Post a Comment