Police Bhavan Kalaburagi

Police Bhavan Kalaburagi

Monday, February 4, 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ:03-02-2013 ರಂದು ರಾತ್ರಿ  8-30 ಗಂಟೆಯ ಸುಮಾರಿಗೆ ಹುಸೇನಿ ಗಾರ್ಡನ ಹಿಂದುಗಡೆ ರಿಂಗರೋಡ ಹತ್ತಿರ ಒಬ್ಬ ಮಹಿಳೆಗೆ  ಅಪಘಾತವಾಗಿದ್ದು, ತಲೆಗೆ ಭಾರಿ ಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾಳೆ  ಅಂತಾ ರೋಡಿಗೆ ಹೋಗಿಬರುವ  ಜನರು ಮಾತಾಡುವದು ಕೇಳಿ ನಾನು ಸಹ ಸ್ಥಳಕ್ಕೆ ಹೋಗಿ ನೋಡಲಾಗಿ ಮಹಿಳೆಯ ತಲೆಗೆ ಭಾರಿ ರಕ್ತಗಾಯವಾಗಿ, ಮೂಗಿನಿಂದ, ಕಿವಿಯಿಂದ ರಕ್ತಸ್ರಾವವಾಗಿರುತ್ತದೆ. ಅಪರಿಚಿತ ಮಹಿಳೆಯು ಯಾವುದೋ ಮೋಟಾರ ಸೈಕಲ್ ಮೇಲೆ  ಹಿಂದೆ ಕುಳಿತು ಹೋಗುವಾಗ ಬಿದ್ದಿರಬಹುದೋ, ಅಥವಾ ನಡೆದುಕೊಂಡು ಹೋಗುತಿರುವಾಗ ಯಾವುದೋ ವಾಹನ ಚಾಲಕ ಡಿಕ್ಕಿ ಹೊಡೆದು ತಲೆಗೆ ಭಾರಿಗಾಯಗೊಳಿಸಿ ಹೋಗಿರುವ ಬಗ್ಗೆ ಕಂಡು ಬರುತ್ತದೆ. ಅಪಘಾತ ಮಾಡಿದ  ವಾಹನ ಮತ್ತು  ಚಾಲಕನನ್ನು ಪತ್ತೆ ಸೂಕ್ತ ಕಾನೂನು  ಕ್ರಮ ಜರುಗಿಸಬೇಕು ಅಂತಾ  ಶ್ರೀ. ನಜಮೊದ್ದಿನ ತಂದೆ ಇಸಾಮೋದ್ದಿನ ಇನಮದಾರ ಸಾ||ಗಾಲಿಬ್ ಕಾಲೋನಿ ಎಂ.ಎಸ್.ಕೆ.ಮಿಲ್ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:75/2013 ಕಲಂ. 279, 304 (ಎ) ಐಪಿಸಿ. ಸಂಗಡ 187 ಐಎಂವಿ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ:03/02/2013 ರಂದು ಸಾಯಂಕಾಲ 4:45 ಗಂಟೆ ಸುಮಾರಿಗೆ ಗ್ರಾಮೀಣ ವೃತ್ತ ನಿರಿಕ್ಷಕರ ರವರ ನೇತೃತ್ವದಲ್ಲಿ , ರಾಣೇಶ ಪೀರ ದರ್ಗಾದ ಹತ್ತಿರ ಇರುವ ವಿಶ್ವನಾಥ ಇವರ ಶೆಡ್ಡಿನ ಪಕ್ಕದಲ್ಲಿಯ ಖುಲ್ಲಾ ಜಾಗೆಯಲ್ಲಿ 9 ಜನರಾದ ವಿಶ್ವನಾಥ ತಂದೆ ತುಳಜಪ್ಪ ನೀಲೂರ  ವ:30 ವರ್ಷ ಉ:ಫೈನಾನ್ಸ  ಗುತ್ತೆದಾರ ಜಾತಿ ಲಿಂಗಾಯತ  ಸಾ: ಸಂತೋಷಕಾಲನಿ ಗುಲಬರ್ಗಾ,ಕಂಠಯ್ಯ ತಂದೆ ಶಾಂತಯ್ಯ ಮಠ ವ:30 ವರ್ಷ ಉ: ಟಂಟಂ ಚಾಲಕ ಜಾತಿ ಜಂಗಮ ಸಾ: ಕೈಲಾಸ ನಗರ ಗುಲಬರ್ಗಾ,ಸಂಗಮನಾಥ ತಂದೆ ಶಂಕರರಾವ ಪಾಟೀಲ ವ:38 ವರ್ಷ ಉ:ಒಕ್ಕಲುತನ ಜಾತಿ ಲಿಂಗಾಯತ ಸಾ: ಬ್ರಹ್ಮಪೂರ ಗುಲಬರ್ಗಾ, ಹಣಮಂತ ತಂದೆ  ಮಲ್ಲೇಶ ಮಲ್ಲಿಕಾರ್ಜುನ ವ:32 ವರ್ಷ ಉ: ಹಮಾಲಿ ಕೆಲಸ ಜಾತಿ  ಲಿಂಗಾಯತ ಸಾ: ಬ್ರಹ್ಮಪೂರ ಕುಂಬಾರ ಗಲ್ಲಿ ಗುಲಬರ್ಗಾ,ರವೀಂದ್ರ ತಂದೆ ರುಕ್ಕಣ್ಣಾ ಮಡಿವಾಳ ವ:26 ವರ್ಷ ಉ: ಒಕ್ಕಲುತನ  ಜಾತಿ ಅಗಸರ ಸಾ: ಅಂಬಿಕಾ ನಗರ ಗುಲಬರ್ಗಾ,ಸಿದ್ಧಣ್ಣಾ ತಂದೆ ಮಾಣಿಕರಾವ ಅಳ್ಳಿ ವ:30 ವರ್ಷ ಉ: ಆಟೋಚಾಲಕ ಜಾತಿ ಲಿಂಗಾಯತ ಸಾ: ಶಿವಾಜಿ ನಗರ ಗುಲಬರ್ಗಾ,ಅಮಿತ ತಂದೆ ಅಣ್ಣಾರಾವ ಹೊಸಗೌಡ ವ:26 ವರ್ಷ ಉ: ಫೈನಾನ್ಸ ಕೆಲಸ ಜಾತಿ ಲಿಂಗಾಯತ ಸಾ: ನೀಲೂರ ಗ್ರಾಮ,ಸಂಗಮನಾಥ ತಂದೆ ನೀಲಕಂಠ ವ:36 ವರ್ಷ ಉ: ಪೋಟೋಗ್ರಾಫರ ಜಾತಿ ಜಂಗಮ ಸಾ: ನೀಲರೂ ಗ್ರಾಮ ಸಧ್ಯ ಸಂತೋಷ ಕಾಲನಿ ಗುಲಬರ್ಗಾ,ನಾಗರಾಜ ತಂದೆ ಚಂದ್ರಕಾಂತ ರಂಗಾರಿ ವ:32 ವರ್ಷ ಉ:ಕಾರ ಚಾಲಕ ಜಾತಿ ಮರಾಠಾ ಸಾ:ಅಫಜಲಪೂರ ಹಾ:ವ:ವಿದ್ಯಾ ನಗರ ಗುಲಬರ್ಗಾ ರವರೆಲ್ಲರೂ ಅಂದರ ಬಾಹರ ಜೂಜಾಟವಾಡುತ್ತಿದ್ದಾಗ ದಾಳಿ ಮಾಡಿ ಜೂಜಾಟಕ್ಕೆ ಬಳಸಿದ ನಗದು ಹಣ 16,210/- ರೂ & ಇಸ್ಪೇಟ ಎಲೆಗಳು ಜಪ್ತಿ ಮಾಡಿಕೊಂಡು ಸರ್ಕಾರಿ ತರ್ಪೆಯಾಗಿ ಶ್ರೀ ಆನಂದರಾವ ಪಿ.ಎಸ.ಐ ರವರು ಠಾಣೆ ಗುನ್ನೆ : 74/2013 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಬಸವರಾಜ ತಂದೆ ನಿಂಗಪ್ಪಾ ಕಂಬರಡಗಿ ಸಾ||ಗೋಳಾ (ಕೆ) ರವರು ದಿನಾಂಕ:03/02/2013 ರಂದು ರಾತ್ರಿ 9.00 ಗಂಟೆ ಸುಮಾರಿಗೆ ನನ್ನ ತಮ್ಮ ಸುರೇಶ ಇತನು ಮನೆಯ ಮುಂದೆ ನಿಂತಾಗ ನಮ್ಮೂರ ಸೋಮಣ್ಣಾ ತಂದೆ ಮಲ್ಕಪ್ಪಾ ಹೊಸಮನಿ, ಶರಣಪ್ಪಾ ತಂದೆ ಸೋಮಣ್ಣಾ ಹೊಸಮನಿ ಹಾಗೂ ರಾಜು ತಂದೆ ಸೋಮಣ್ಣಾ ಇವರ ಜೊತೆಗೆ ನನ್ನ ತಮ್ಮನು ಮಾತನಾಡುತ್ತಾ ನಿಂತಾಗ ನನ್ನ ತಮ್ಮನಿಗೂ ಮತ್ತು ಸದರಿಯವರಿಗೆ ಯಾವುದೋ ಕಾರಣಕ್ಕಾಗಿ ಬಾಯಿಮಾತಿನ ಜಗಳ ಮಾಡುತ್ತಿದ್ದಾಗ ನಾನು ಮತ್ತು ನನ್ನ ತಾಯಿ ಗೌರಮ್ಮ ಯಾಕೆ ಜಗಳ ಮಾಡುತ್ತಿದ್ದಿರಿ ಅಂತಾ ಕೇಳಿದ್ದಕ್ಕೆ, ಅವಾಚ್ಯವಾಗಿ ಬೈದು  ನಿನ್ನ ತಮ್ಮನ ಮೇಲೆ ಎತ್ತಿಕಟ್ಟಿ ಬರುತ್ತಿ ಅಂತಾ ಹೊಡೆ ಬಡೆ ಮಾಡಿ ಒಳ ಪೆಟ್ಟು ಮಾಡಿರುತ್ತಾರೆ.  ನನ್ನ ತಾಯಿ ಗೌರಮ್ಮ ಇವಳು ಬಿಡಿಸಲು ಬಂದಾಗ ನನ್ನ ತಾಯಿಯನ್ನು ಹಿಡಿದು ಎಳೆದಾಡಿ ಆಕೆಯ ಮಾನಭಂಗ ಮಾಡಲು ಪ್ರಯತ್ನ ಮಾಡಿರುತ್ತಾರೆ ಹಾಗೂ ಬಡಿಗೆಯಿಂದ ಹೊಡೆದು ಒಳಪೆಟ್ಟು ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 12/2013 ಕಲಂ:323,324,504,354 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಸೋಮಣ್ಣಾ ತಂದೆ ಮಲ್ಕಪ್ಪಾ ಹೊಸಮನಿ ಸಾ||ಗೋಳಾ (ಕೆ) ರವರು ನಾನು ದಿನಾಂಕ:03/02/2013 ರಂದು ರಾತ್ರಿ 9.00 ಪಿಎಂಕ್ಕೆ ವಾಡಿ ಎಸಿಸಿ ಕಂಪನಿಯಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದಾಗ ಬಸವರಾಜ ಕಮರಡಗಿ ರವರ ಮನೆಯ ಹತ್ತಿರ ಬಂದಾಗ ಸುರೇಶ ಇತನು ಬಂದು ಅವಾಚ್ಯವಾಗಿ ಬೈದು ನಾನು ಕುಡಿಯುತ್ತೇನೆ ಅಂತಾ ಊರಲೆಲ್ಲಾ ಅಪಪ್ರಚಾರ ಮಾಡುತ್ತಿಯಾ ಅಂತಾ ಅಂದವನೆ ಕೈಯಿಂದ ಬೆನ್ನಿಗೆ ಹೊಡೆದನು.ಜಗಳದ ಸಪ್ಪಳ ಕೇಳಿ ಜಗಳ ಬಿಡಿಸಲು ಬಂದ ನನ್ನ ಹೆಂಡತಿ ನಿಂಗಮ್ಮಾ ಇವಳಿಗೆ ಅಲ್ಲಿಯೇ ಬಿದ್ದಿದ್ದ ಕಟ್ಟಿಗೆಯಿಂದ ಎಡಗೈ ಮುಂಗೈಗೆ ಹೊಡೆದು ರಕ್ತಗಾಯ ಪಡಿಸಿದನು ಹಾಗೂ ನನ್ನ ಹೆಂಡತಿಗೆ ಮಾನಭಂಗ ಮಾಡಲು ಪ್ರಯತ್ನ ಮಾಡುತ್ತಿರುವಾಗ ಸುರೇಶನ ಹೆಂಡತಿ ಸರೂಬಾಯಿ, ಸುರೇಶನ ಅಣ್ಣ ಬಸವರಾಜ ತಾಯಿ ಗೌರಮ್ಮರವರು ಕೂಡಿ ಬಂದು ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ನನ್ನ ಹೆಂಡತಿಗೆ ಬೆನ್ನಿಗೆ ಹೊಡೆದು ಒಳಪೆಟ್ಟು ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 13/2013 ಕಲಂ:323,324,504,354 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.

No comments: