Police Bhavan Kalaburagi

Police Bhavan Kalaburagi

Wednesday, February 13, 2013

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ದಿನಾಂಕ 11-02-2013 ರಂದು  ಮುಂಜಾನೆ  ಬಸವಕಲ್ಯಾಣಕ್ಕೆ  ಕೆಲಸದ ನಿಮಿತ್ಯ ನಾವು ಮನೆಯರೆಲ್ಲರೂ ಮನೆಗೆ ಕೀಲಿ ಹಾಕಿಕೊಂಡು ಹೋಗಿದ್ದು, ದಿನಾಂಕ:12-02-2013 ರಂದು ಬೆಳಿಗ್ಗೆ  ತುಮಕುಂಟಾದಿಂದ ತಮ್ಮ ಅಣ್ಣಾ ಅಂಬಣ್ಣ ಇವರು ಪೋನ ಮಾಡಿ  ರಾತ್ರಿ ವೇಳೆಯಲ್ಲಿ ಯಾರೋ ಕಳ್ಳರು ಮನೆಯ ಬಾಗಿಲು ಮುರಿದು, ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ತಿಳಿಸಿದ ಮೇರೆಗೆ ನಾನು ಗಾಬರಿಯಾಗಿ ಬಸವ ಕಲ್ಯಾಣದಿಂದ ಮನೆಗೆ ಬಂದು ನೋಡಲು ಹಲಮಾರಿಯಲ್ಲಿಟ್ಟಿದ್ದ ನಗದು ಹಣ 42,094 ರೂಪಾಯಿಗಳು, ಮತ್ತು ಬಂಗಾರ ಮತ್ತು ಬೆಳ್ಳಿಯ ಆಭರಣಗಳು ಹೀಗೆ ಒಟ್ಟು 50294/- ರೂಪಾಯಿಗಳ ಕಿಮ್ಮತ್ತಿನದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಶ್ರೀ ಜಗದೀಶ ತಂದೆ ಶರಣಪ್ಪ ಬೇಡರ್ ಸಾ: ತುಮಕುಂಟಾ ತಾ:ಚಿಂಚೋಳಿ ಜಿ:ಗುಲ್ಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:25/2013 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ಶ್ರೀ ಗೋವಿಂದ ತಂದೆ ಜಮಲು ರಾಠೋಡ ಸಾ||ಹಳೆಂಬರ ತಾಂಡಾ ತಾ:ಅವರಾದ ಜಿ:ಬೀದರ ರವರು ನಾನು ಮತ್ತು ನನ್ನ ಹೆಂಡತಿ ಮೊತುಬಾಯಿ, ಮಕ್ಕಳಾದ ಸಂತೋಷ, ಬಾಲಾಜಿ ಹಾಗೂ ಮಗಳು ಪಿಂಕಾಬಾಯಿ ನಮ್ಮ ಜೊತೆಯಲ್ಲಿ ಗೌಂಡಗಾಂವ ತಾಂಡಾದವರಾದ ಅಂಕೋಶ ಜಾದವ, ಲಕ್ಷ್ಮಣ ಜಾದವ  ರವರು ಕೂಡಿಕೊಂಡು ಕೊರ ಗ್ರೀನ್ ಸುಗರ್ ಫ್ಯಾಕ್ಟರಿ ವಡಗೇರಾ ವತಿಯಿಂದ ಕಬ್ಬು ಕಡಿಯಲು ಕೆಲಸಕ್ಕೆಂದು ಬಂದಿರುತ್ತೇವೆ. ದಿನಾಂಕ:13/2/2013 ರಂದು ಬೆಳಿಗ್ಗೆ 10-20 ಗಂಟೆಯ ಸುಮಾರಿಗೆ ಕುಡಿಯುವ ನೀರು ತರಲು ನಾನು ಮತ್ತು ನನ್ನ ಮಗಳು ಪಿಂಕಾಬಾಯಿ ಕೂಡಿ ರಾಷ್ಟ್ರೀಯ ಹೆದ್ದಾರಿ ದಾಟಿ ಫರತಬಾದ ಕರಿಗೊಳೇಶ್ವರ ಗುಡಿಯ ಹತ್ತಿರ ಇರುವ ನೀರಿನ ಗುಮ್ಮಿಗೆ ನೀರು ತರಲು ಹೋಗಿದ್ದು, ನೀರು ತುಂಬಿಕೊಂಡು ನನ್ನ ಮಗಳು ಪಿಂಕಾಬಾಯಿ ರೋಡ ದಾಟುತ್ತಿರುವಾಗ ಗುಲಬರ್ಗಾ ಕಡೆಯಿಂದ ಒಬ್ಬ ಬಿಳಿ ಬಣ್ಣದ ಕಾರ ಚಾಲಕನು ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗಳಿಗೆ ಡಿಕ್ಕಿ ಪಡಿಸಿ ಓಡಿ ಹೋಗಿರುತ್ತಾನೆ. ನನ್ನ ಮಗಳಿಗೆ ಡಿಕ್ಕಿ ಪಡಿಸಿದ ಕಾರು  ಮತ್ತು ಅದರ ಚಾಲಕನ ಪತ್ತೆ ಮಾಡಿ ಕ್ರಮ ಜರುಗಿಸಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:18/2013 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: