ಕೊಲೆ ಪ್ರಕರಣ:
ಸೇಡಂ ಪೊಲೀಸ್ ಠಾಣೆ: ಶ್ರೀ, ಕಮಲಮ್ಮ ಗಂಡ ಭೀಮಣ್ಣಾ ಯದಲಾಪೂರ ಸಾ|| ಕೊಡ್ಲಾ ಗ್ರಾಮ, ತಾ||ಸೇಡಂ ರವರು ನನ್ನ ಮಗಳು ಖಣಿ ಕೆಲಸಕ್ಕೆಂದು ಹೋದಾಗ ಈಶಪ್ಪ ತಂದೆ ಪರವತಪ್ಪ ಹೊನ್ನೇಕ ಇತನು ನನ್ನ ಮಗಳನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾ ನನ್ನ ಮಗಳಿಗೆ ಚುಡಾಯಿಸುವದು ಮಾಡುತ್ತಿದನು. ನನ್ನ ಮಗ ಲಕ್ಷ್ಮಣ ಇತನು ಈಶಪ್ಪನಿಗೆ ಹೀಗೆಲ್ಲಾ ಮಾಡಬೇಡ ಅಂತ ತಿಳಿ ಹೇಳಿದ್ದನು. ಆದರೂ ಸಹ ಹಾಗೆಯೇ ಚುಡಾಯಿಸುವದು ಮಾಡುತ್ತಿದ್ದನು. ಮೂರು ದಿನಗಳ ಹಿಂದೆ ನಮ್ಮ ಅಕ್ಕಳಿಗೆ ಕೆಟ್ಟ ದೃಷ್ಟಿಯಿಂದ ಯಾಕೆ ನೋಡುತ್ತಿ ಅಂತ ನನ್ನ ಮಗ ಕೇಳಿದ್ದಕ್ಕೆ ನನ್ನ ಮಗನೊಂದಿಗೆ ತಕರಾರು ಮಾಡಿ ಅವಾಚ್ಯವಾಗಿ ಬೈದು ಈ ವಿಷಯದಲ್ಲಿ ಕೇಳಲು ಬಂದರೆ ಬಿಡುವದಿಲ್ಲ ಹೊಡೆದು ಖಲಾಸ ಮಾಡುತ್ತೇನೆ ಅಂತ ಜೀವದ ಬೆದರಿಕೆ ಹಾಕಿದ್ದನು. ದಿ:04-02-2013 ರಂದು ರಾತ್ರಿ 9-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಮಗಳು ಇಬ್ಬರೂ ಕೂಡಿ ನಮ್ಮೂರ ಬಜಾರದಲ್ಲಿರುವ ಬಸವಣ್ಣ ಗುಡಿ ಹತ್ತಿರದಿಂದ ಮನೆ ಕಡೆಗೆ ಬರುತ್ತಿದ್ದಾಗ ಈಶಪ್ಪ ಇತನು ವಿನಾಕಾರಣ ನನ್ನ ಮಗಳಿಗೆ ಮಾತನಾಡಿಸಿ ಚುಡಾಯಿಸುತ್ತಿದ್ದಾಗ ಅಲ್ಲಿಯೇ ಇದ್ದ ನನ್ನ ಮಗನು,ಈಶಪ್ಪನಿಗೆ ನಮ್ಮ ಅಕ್ಕಳಿಗೆ ವಿನಾ:ಕಾರಣ ಮಾತನಾಡಿಸಿ ಯಾಕೆ ಚುಡಾಯಿಸುತ್ತಿದ್ದಿ ಅಂತ ಕೇಳಿದ್ದಕ್ಕೆ, ಈಶಪ್ಪ ಇತನು ನನ್ನ ಮಗನೊಂದಿಗೆ ಕುಸ್ತಿಗೆ ಬಿದ್ದನು. ನಾನು ಮತ್ತು ನನ್ನ ಮಗಳು ಯ್ಯಾಕೆ ಜಗಳ ಮಾಡುತ್ತಿದ್ದಿ ಅಂತ ಕೇಳಿದ್ದಕ್ಕೆ ಈಶಪ್ಪ ಇತನು ನನ್ನ ಮಗಳಿಗೆ ಮಾನಭಂಗ ಮಾಡಲು ಪ್ರಯತ್ನಿಸಿ ಕೈಯಿಂದ ಎಡಕಪಾಳಕ್ಕೆ ಹೊಡೆದು ಮತ್ತು ಕುತ್ತಿಗೆ ಹತ್ತಿರ ಹಿಡಿದು ಗುಪ್ತಗಾಯ ಪಡಿಸಿದನು. ಮತ್ತು ನನ್ನ ಮಗ ಲಕ್ಷ್ಮಣ ಇತನಿಗೆ ಜೋರಾಗಿ ಗುಪ್ತ ಅಂಗಾಗಕ್ಕೆ ಒದ್ದು ಭಾರಿ ಗುಪ್ತಗಾಯ ಪಡಿಸಿದಾಗ ನನ್ನ ಮಗ ಚೀರುತ್ತಾ ನೆಲಕ್ಕೆ ಬಿದ್ದು ಸ್ಥಳದಲ್ಲಿಯೇ ಒದ್ದಾಡಿ ಮೃತ ಪಟ್ಟನು. ನನ್ನ ಮಗಳಿಗೆ ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆಬಡೆ ಮಾಡಿ ಗುಪ್ತಗಾಯ ಪಡಿಸಿ ಮಾನಭಂಗ ಮಾಡಲು ಪ್ರಯತ್ನಿಸಿದಾಗ ಕೇಳಲು ಹೋದ ನನ್ನ ಮಗನಿಗೆ ಹೊಡೆದು ಕೊಲೆ ಮಾಡಿದ ಈಶಪ್ಪನ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:30/2013 ಕಲಂ, 323, 354, 504, 302 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ಶ್ರೀ ಶಂಕರರಾವ ತಂದೆ ಚನ್ನಬಸಪ್ಪ ಮೂಲಗೆ ಸಾ||ಸಕ್ಕರಗಾ ತಾ||ಆಳಂದ ರವರು ನನ್ನ ಮನೆಯಲ್ಲಿ ದಿನಾಂಕ:03/02/2013 ರಂದು ಮಧ್ಯಾಹ್ನ 3 ಗಂಟೆಯಿಂದ ಸಾಯಂಕಾಲ 6 ಗಂಟೆಯ ಮಧ್ಯದ ಅವಧಿಯಲ್ಲಿ ಮನೆಯಲ್ಲಿಟ್ಟಿದ್ದ ನಗದು ಹಣ 30,000/-, ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ಹೀಗೆ ಒಟ್ಟು 2,67,000/- ಕಿಮ್ಮತ್ತಿನದು ಯಾರೋ ಕಳ್ಳರು ನಾವು ಮನೆಯಲ್ಲಿ ಇರಲಾರದು ಸಮಯ ಸಾಧಿಸಿ ಆಭರಣಗಳು ಇಟ್ಟಿರುವ ಪೆಟ್ಟಿಗೆ ಸಮೇತ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಕಳ್ಳತನ ಮಾಡಿದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಹೇಳಿಕೆ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:12/2013 ಕಲಂ:454, 380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅನಧಿಕೃತವಾಗಿ ವಾಸವಾಗಿರುವ ಬಗ್ಗೆ.
ಅನಧಿಕೃತವಾಗಿ ವಾಸವಾಗಿರುವ ಬಗ್ಗೆ.
ರೋಜಾ ಪೊಲೀಸ್ ಠಾಣೆ:ಶ್ರೀ ಸೈಯ್ಯದ ಅಬ್ದುಲ ಹಮೀದ್ ಜಿಲ್ಲಾ ವಕ್ಫ ಅಧಿಕಾರಿಗಳು ಹಾಗೂ ತಹಶೀಲ್ದಾರರೂ ಕರ್ನಾಟಕ ರಾಜ್ಯ ವಕ್ಫ ಮಂಡಳಿ ಬೆಂಗಳೂರು ರವರು ದರ್ಗಾ ಶರೀಫ ಹಜರತ್ ಖಾಜಾ ಬಂದೆನವಾಜ ಗುಲಬರ್ಗಾ ಇವರಿಗೆ ಸಂಬಂದ ಪಟ್ಟ ಮನೆ ನಂ:5-89. 1750 ಚ.ಅ. ಸುತ್ತಳತೆಯ ಜಾಗೆಯಲ್ಲಿ ಕಳೆದ 40 ವರ್ಷಗಳ ಹಿಂದೆ ದರ್ಗಾದಲ್ಲಿ ಸೇವಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸೈಯ್ಯದ ಹಬೀಬುಲ್ಲಾಜಿಯಾ ಅನ್ನುವವರಿಗೆ ವಾಸಮಾಡಲು ದರ್ಗಾ ಕಮೀಟಿ ವತಿಯಿಂದ ಕಡಿಮೆ ಬಾಡಿಗೆ ರೂಪದಲ್ಲಿ ನೀಡಲಾಗಿತ್ತು. ದರ್ಗಾದಲ್ಲಿಯ ಸೇವಕನಾಗಿರುವ ಹಬೀಬುಲ್ಲಾಜಿಯಾ ಇವರು ಮರಣ ಹೊಂದಿದ ನಂತರ ದರ್ಗಾಕ್ಕೆ ಸಂಬಂದಪಟ್ಟ ಜಾಗೆಯನ್ನು ಖಾಲಿ ಮಾಡುವಂತೆ ಅವರ ಸಂಬಂಧಿಕರಿಗೆ, ದರ್ಗಾದ ಅಧಿಕಾರಿಗಳು ವಿನಂತಿಸಿಕೊಂಡಿದ್ದರೂ ಸಹ ಮನೆಯನ್ನು ಖಾಲಿಮಾಡದೇ ಇರುವದರಿಂದ ದರ್ಗಾ ಶರೀಫ ಹಜರತ್ ಖಾಜಾ ಬಂದೆನವಾಜರ ಆಡಳಿತ ಮಂಡಳಿಯವರು ಕರ್ನಾಟಕ ಪಬ್ಲಿಕ್ ಪ್ರೆಮಿಸೆಸ್ {ಎವಿಕ್ಷನ್ ಆಫ ಅನ್ ಅಥಸೈಸ್ ಅಕ್ಯೂಪಮೆಂಟ ಆಕ್ಟ್ 1974} ನೇದ್ದರ ಅಡಿಯಲ್ಲಿ ಮನೆ ಖಾಲಿ ಮಾಡಿಸಿಕೊಡಲು ದಾವೆ ಹೂಡಿದ್ದು, ಈ ದಾವೆ ವಿಚಾರಣೆ ನಡೆದು ಅನಧೀಕೃತವಾಗಿ ವಾಸವಾಗಿರುವ ಶ್ರೀಮತಿ ರಹಿಮತ ತಯ್ಯಬಾ ಬೇಗಂ ಗಂಡ ದಿವಂಗತ. ಸೈಯ್ಯದ ಹಬಿಬುಲ್ಲಾಜಿಯಾಯಿ ಇವರಿಗೆ ಕರ್ನಾಟಕ ಪಬ್ಲಿಕ್ ಪ್ರೆಮಿಸೆಸ್ {ಎವಿಕ್ಷನ್ ಆಫ ಅನ್ ಅಥಸೈಸ್ ಅಕ್ಯೂಪಮೆಂಟ ಆಕ್ಟ್ 1974} ಈ ನ್ಯಾಯಾಲಯದಿಂದ 45 ದಿವಸದ ಒಳಗಾಗಿ ಮನೆ ಖಾಲಿಮಾಡಿ ದರ್ಗಾಕ್ಕೆ ಕಬ್ಜೆಕೊಡುವಂತೆ ಆದೇಶ ಮಾಡಿದರು. ನಾನು ದಿನಾಂಕ:04/02/2013 ರಂದು ಬೆಳಿಗ್ಗೆ ಗುಲಬರ್ಗಾಕ್ಕೆ ಬಂದು 12:30 ಗಂಟೆಗೆ ಸದರಿ ಮನೆಗೆ ಖುದ್ದಾಗಿ ಭೇಟಿ ಮಾಡಿ ಕೋರ್ಟ ಆದೇಶ ಇದೆ ನೀವು ಈ ಮನೆಯನ್ನು ಖಾಲಿಮಾಡಿ ಕೊಡಬೇಕೆಂದು ಅನಧೀಕೃತವಾಗಿ ವಾಸವಾಗಿರುವ ಶ್ರೀಮತಿ ರಹಿಮತ ತಯ್ಯಾಬ ಬೇಗಂ ಮತ್ತು ಅವರ ಮನೆಯಲ್ಲಿಯ ಎಲ್ಲಾ ಸದಸ್ಯರಿಗೆ ತಿಳುವಳಿಗೆ ನೀಡಲು ಆ ಮನೆಯ ನಿವಾಸಿಗಳು ಏಕವಚನದಲ್ಲಿ ಮಾತನಾಡಿ ನಾವು ಮನೆ ಖಾಲಿ ಮಾಡುವುದಿಲ್ಲಾ ಹ್ಯಾಗೆ ಮನೆ ಖಾಲಿ ಮಾಡುತ್ತೀರಿ ನೋಡುತ್ತೇವೆ ’ ಅಂತಾ ಅತಿರೇಕತನದಿಂದ ಮಾತನಾಡಿರುತ್ತಾರೆ. ಪೊಲೀಸ್ ಬಂದೋಬಸ್ತ ಪಡೆದುಕೊಂಡು ಖಾಲಿ ಮಾಡಿಸಲು ಮುಂದಾದಾಗ ಸದರಿ ಅನಧಿಕೃತವಾಗಿ ವಾಸವಾಗಿರುವ ಮನೆಯವರು ಚೀರುತ್ತಾ ಕೈಯಲ್ಲಿ ಹಿಡಿಗಾತ್ರದ ಕಲ್ಲು ಹಿಡಿದುಕೊಂಡು ಅವಾಚ್ಯವಾಗಿ ಕಲ್ಲು ಮೈಮೇಲೆ ತೂರಿರುತ್ತಾರೆ. ಶ್ರೀಮತಿ ರಹಿಮತ ತಯ್ಯಬ ಬೇಗಂ ಅಲ್ಲದೇ ಅವರ ಮನೆಯಲ್ಲಿದ್ದ ಇನ್ನೂಳಿದ ಮನೆಯ 10 ಸದಸ್ಯರು ಎಲ್ಲರೂ ಸೇರಿಕೊಂಡು ಬಡಿಗೆಯಿಂದ ಮತ್ತು ಕಲ್ಲುಗಳಿಂದ ಹೊಡೆದು ಗುಪ್ತಗಾಯ ಪಡೆಸಿ ಪೊಲೀಸ್ ಕರ್ತವ್ಯಕ್ಕೆ ಅಡೆ ತಡೆ ಮಾಡಿರುತ್ತಾರೆ. ಅಲ್ಲದೇ ಅವರ ಸಮವಸ್ತ್ರಗಳನ್ನು ಸಹ ಜಗ್ಗಾಡಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ನನಗೂ ಸಹ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ದರ್ಗಾಕ್ಕೆ ಸಂಬಂದ ಪಟ್ಟ ಮನೆ ನಂ. 5-89 ನೇದ್ದನ್ನು THE COMPETENT OFFICER UNDER THE KARNATAKA PUBLIC PREMISES ( EVICTION OF UNAUTHORISED OCCUPANTS ) ACT 1974 ನೇದ್ದರ ಆದೇಶ ನಂ. PP/100/GBA/2010 DATE 20/11/2012 & DATE 01/02/2013 ನೇದ್ದರ ಅನ್ವಯ ಮನೆ ಖಾಲಿ ಮಾಡಿಸಲು ಹೋದ ವೇಳೆಯಲ್ಲಿ ನಮ್ಮ ಕರ್ತವ್ಯಕ್ಕೆ ಅಡೆತಡೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಪೊಲೀಸ್ ಅಧಿಕಾರಿಯವರಿಗಳ ಮೇಲೆ ಹಲ್ಲೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.13/2013 ಕಲಂ. 143,147,148,323,324,504,506,353, ಸಂ.149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಸ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಸಿದ್ದಪ್ಪ ತಂದೆ ಯಶವಂತರಾಯ ವಾರದ ಸಾ|| ಆರ್ ಎಸ್ ಕಾಲನಿ ಗುಲಬರ್ಗಾರವರು ನಾನು ದಿನಾಂಕ:15-02-10 ರಂದು ಹುಮನಾಬಾದ ತಾಲೂಕಿನ ಮೊಳಕೇರಾ ಗ್ರಾಮದ ಸರ್ವೆ ನಂ. 25/2 ನೇದ್ದರಲ್ಲಿ 5 ಎಕರೆ 8 ಗುಂಟೆ ಜಮೀನನ್ನು ಎ ಗೋಪಾಲರೆಡ್ಡಿ ತಂದೆ ವೀರರೆಡ್ಡಿ ಸಾ: ಮಣಮ ಸಿ 185 ಎಮ್‌ಐಜಿ 2 ನೇ ಹಂತ ಸೌಭಾಗ್ಯ ನಗರ ಸಾಹೇಬ ನಗರ ವನಸತಲಿಪುರಂ ಸೈಬರಾಬಾದ ಆಂದ್ರಪ್ರದೇಶ ರವರ ಕಡೆಯಿಂದ 55 ಲಕ್ಷ ರೂ.ಗೆ ಖರೀದಿ ಮಾಡಿದ ಬಗ್ಗೆ ದಿನಾಂಕ:12-02-2010 ರಂದು 20 ಲಕ್ಷ ರೂ. ಮುಂಗಡವಾಗಿ ಕೊಟ್ಟು ಇನ್ನುಳಿದ ಹಣವನ್ನು 3 ತಿಂಗಳೊಳಗಾಗಿ ಕೊಟ್ಟ ನಂತರ ಜಮೀನಿನ ಕಾಗದ ಪತ್ರಗಳನ್ನು ನನ್ನ ಹೆಸರಿನಿಂದ ಮಾಡಿಸಿಕೊಡುವಂತೆ ಸೇಲ ಡೀಡ ಪತ್ರ ಮಾಡಿಕೊಳ್ಳಲಾಗಿತ್ತು. ದಿನಾಂಕ 01-03-10 ರಂದು 8 ಲಕ್ಷ ರೂ. ಚೆಕ್ಕ ನಂಬರ 062247 ನೇದ್ದನ್ನು ಕೊಟ್ಟಿದ್ದು ಮುಂದೆ ಕಾರಣಾಂತರದಿಂದ ವ್ಯವಹಾರವನ್ನು ರದ್ದಾದ ಕಾರಣ ನಾನು ಕೊಟ್ಟ ಹಣ ಮತ್ತು ಚೆಕ್ಕನ್ನು ವಾಪಸ್ಸು ಕೊಡಿಸುವಂತೆ ಕೇಳಿದಾಗ ಸದರಿಯವರು ಚೆಕ್ಕು ಕಳೆದು ಹೋಗಿರುತ್ತದೆ ಅಂತಾ ತಿಳಿಸಿರುತ್ತಾರೆ. ದಿನಾಂಕ 12-03-10 ರಂದು ಸದರಿ ಜಮೀನಿನ್ನು ನಾನು ಜಗನಾಥ ದಮ್ಮೊರ ಇವರಿಗೆ ಮಾರಾಟ ಮಾಡಿದ್ದು, ಆದಾದ 6 ತಿಂಗಳ ನಂತರ ದಿನಾಂಕ:04-08-10 ರಂದು ಕೊಟ್ಟಿರುವ ಚೆಕ್ಕ ನಂಬರ 062247 ನೇದ್ದನ್ನು ವಿದ್ಯಾ ನಗರ ಎಸ್.ಬಿ.ಎಚ. ಬ್ಯಾಂಕ ಗುಲಬರ್ಗಾದಲ್ಲಿ ಬ್ಯಾಂಕಿನಲ್ಲಿ ಹಾಕಿದ್ದು, ಚೆಕ್ಕು ಡಿಸ್ಸ ಆನರ ಆಗಿರುತ್ತದೆ ನಾನು ಚೆಕ್ಕ ನಂಬರ 062251 ಸಹಿ ಮಾಡಿದ ಕೊಟ್ಟ ಚೆಕ್ಕನ್ನು ದಿನಾಂಕ:14-02-11 ರಂದು ಹಾಜರಪಡಿಸಿ ಮೋಸ ವಂಚನೆ ಮಾಡಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 76/13 ಕಲಂ 405,420,425, 463 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
No comments:
Post a Comment