ಅಪಘಾತ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ:ನಾನು ನನ್ನ ತಮ್ಮ ಭೀಮಣ್ಣ ವಯಾ|| 22 ವರ್ಷ, ಇಬ್ಬರು ಕೂಡಿಕೊಂಡು ಯಡ್ರಾಮಿ ಬಸ್ಸ್ ನಿಲ್ದಾಣದ ಹತ್ತಿರವಿರುವ ಕಟ್ಟಿಂಗ ಅಂಗಡಿ ಇದ್ದು, ದಿನಾಂಕ: 06-02-13 ರಂದು ಸಾಯಂಕಾಲ 7 ಗಂಟೆಗೆ ನನ್ನ ತಮ್ಮ ಹೊರಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಹೋದನು, ರಾತ್ರಿ 9 ಗಂಟೆ ಸುಮಾರಿಗೆ ದಯಾನಂದ ಸ್ವಾಮಿ ಎಂಬುವವರು ಅಂಗಡಿಗೆ ಬಂದು ನಿಮ್ಮ ತಮ್ಮ ಸುಂಬಡ ರೋಡಿಗೆ ಬಿದ್ದಿರುತ್ತಾನೆ ಅಂತಾ ಹೇಳಲು ನಾವು ಹೋಗಿ ನೋಡಲಾಗಿ ನನ್ನ ತಮ್ಮನ ಎಡ ಎದೆಗೆ ಭಾರಿ ಪೆಟ್ಟಾಗಿ ಸ್ಥಳದಲ್ಲಿಯ ಮೃಪತಟ್ಟಿರುತ್ತಾನೆ. ಯಾವುದೋ ಅಪರಿಚತ ವಾಹನವು 7-30 ಗಂಟೆಯಿಂದ 8-30 ಗಂಟೆಯ ಅವಧಿಯಲ್ಲಿ ಅತೀವೇಗ ಮತ್ತು ನಿಸ್ಕಾಳಜಿತನದಿಂದ ಡಿಕ್ಕಿ ಪಡೆಸಿ ತನ್ನ ವಾಹನವನ್ನು ಸಮೇತ ಓಡಿ ಹೋಗಿರುತ್ತಾನೆ. ಡಿಕ್ಕಿ ಪಡಿಸಿದ ಚಾಲಕ ಮತ್ತು ವಾಹನ ಪತ್ತೆ ಮಾಡಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಶರಣಪ್ಪ ತಂದೆ ಬಸವರಾಜ ಹಡಪದ ಸಾ:ಗೋಗಿ (ಕೆ) ತಾ:ಶಹಾಪೂರ ಹಾ||ವ||ಯಡ್ರಾಮಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 24/2013 ಕಲಂ, 279, 304 (ಎ) ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಅಸ್ಲಮ ಮೀಯಾ ತಂದೆ ಬಸೀರ ಅಹ್ಮದ ಸಾ:ನಂದಲ ಬೌಡಿ ಹತ್ತಿ ನಯಾ ಮೊಹಾಲ ಗುಲಬರ್ಗಾ ರವರು ನಾನು ದಿನಾಂಕ:06-02-2013 ರಂದು ರಾತ್ರಿ 9-45 ಗಂಟೆ ಸುಮಾರಿಗೆ ಮೋಟಾರ ಸೈಕಲ ನಂಬರ ಕೆಎ-32 ವಿ-8865 ನೇದ್ದರ ಮೇಲೆ ಸುಪರ್ ಮಾರ್ಕೆಟದಿಂದ ಜಗತ ಸರ್ಕಲ ಕಡೆಗೆ ಹೋಗುವಾಗ ಪಂಚಾಯತ್ ಆಫೀಸ ಎದುರುಗಡೆ ಕ್ರೋಜರ ಜೀಪ ನಂಬರ ಕೆಎ-40/ಎಮ್-0556 ಚಾಲಕನು ಜಗತ ಸರ್ಕಲ ಕಡೆಯಿಂದ ರಾಂಗ್ ಸೈಡಿನಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:09/2013 ಕಲಂ, 279, 337 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ವೀರಣ್ಣಾ ತಂದೆ ಗುರಣ್ಣಾ ಬಿರಾದಾರ ಸಾ:ಗಣೇಶ ನಗರ ಗುಲಬರ್ಗಾರವರು ನಾನು ದಿನಾಂಕ:06-02-2013 ರಂದು ರಾತ್ರಿ 8-30 ಗಂಟೆಗೆ ಮೋಟಾರ ಸೈಕಲ್ ನಂ:ಕೆಎ-32 ಇಬಿ-4278 ನೇದ್ದರ ಮೇಲೆ ನನ್ನ ಅತ್ತಿಗೆಯಾದ ಸರುಬಾಯಿ ಇವರಿಗೆ ಮೋಟಾರ ಹಿಂದುಗಡೆ ಕೂಡಿಸಿಕೊಂಡು ಸಿದ್ದಗಂಗಾ ಆಸ್ಪತ್ರೆಗೆ ಹೋಗಬೇಕೆಂದು ಸುಪರ ಮಾರ್ಕೇಟ ದಿಂದ ಎಸ್.ವಿ.ಪಿ.ಸರ್ಕಲ್ ಮೇನ ರೋಡಿನಲ್ಲಿ ಬರುವ ಕೆ.ಬಿ.ಎನ್. ಕಾಂಪ್ಲೆಕ್ಸ ಎದುರು ಹೋಗುತ್ತಿದ್ದಾಗ ಕೆ.ಎಸ್. ಆರ್.ಟಿ.ಸಿ ಬಸ್ ನಂ: ಕೆಎ-32 ಎಫ್ -1800 ನೇದ್ದರ ಚಾಲಕ ಜಗತ ಸರ್ಕಲ್ ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲ್ ಗೆ ಓವರ ಟೇಕ ಮಾಡಲು ಹೋಗಿ ನನ್ನ ಮೋಟಾರ ಸೈಕಲ್ ಗೆ ಡಿಕ್ಕಿ ಪಡಿಸಿದ್ದರಿಂದ ನಾನು ಮತ್ತು ನನ್ನ ಅತ್ತಿಗೆ ಮೋಟಾರ ಸೈಕಲ್ ಸಮೇತ ಕೆಳಗಡೆ ಬಿದ್ದೆವು. ಬಸ್ ಚಾಲಕ ಹಾಗೇ ಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 08/2013 ಕಲಂ, 279, 338 ಐಪಿಸಿ ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ:ಶ್ರೀ ವಿಶ್ವನಾಥ ತಂದೆ ಓಜಪ್ಪಾ ಇಟಗಿ ಸಾ||ಡೊಂಗರಗಾಂವ ನಾನು ಮತ್ತು ಸಂಜೀವಕುಮಾರ ಮೂಲಗಿ ಇಬ್ಬರೂ ಕೂಡಿಕೂಂಡು ದಿನಾಂಕ:06/2/2013 ರಂದು ಕೆಎ-32ಎ-7849 ನೇದ್ದ ಟಂಟಂ ತೆಗೆದುಕೊಂಡು ಮಹಾಗಾಂವ ಕ್ರಾಸದಲ್ಲಿರುವ ನನ್ನ ಅಣ್ಣನ ಗ್ಯಾರೇಜ ಹೋಗಿ ಸರ್ವಿಸಿಂಗ್ ಮಾಡಿಸಿಕೂಂಡು ಮರಳಿ ಊರಿಗೆ ಬರುತ್ತಿರುವಾಗ ನಮ್ಮೂರಿನ ನಾಗರಾಜ ತಂದೆ ರಾಜಣ್ಣ ಜನಕಟ್ಟಿ ಮತ್ತು ಮಲ್ಲಿಕಾರ್ಜುನ ಜನಕಟ್ಟಿ ಇವರು ತಮ್ಮ ಮೋಟಾರ ಸೈಕಲ ಸರ್ವಿಸಿಂಗ್ ಮಾಡಿಸಿಕೊಂಡು ನಮ್ಮ ಹಿಂದುಗಡೆ ತಮ್ಮ ಮೋಟಾರ ಸೈಕಲ ಮೇಲೆ ಬರುತ್ತಿದ್ದರು. ನಾನು ಟಂಟಂ ಚಲಾಯಿಸುತ್ತಿದ್ದು ನನ್ನ ಅಣ್ಣ ಕಾಶಿನಾಥ ಮತ್ತು ಸಂಜೀವಕುಮಾರ ಇವರು ಟಂಟಂ ಹಿಂದಿನ ಸೀಟಿನಲ್ಲಿ ಕುಳಿತಿದ್ದರು. 7-40 ಪಿಎಂ ಸುಮಾರಿಗೆ ನಾವದಗಿ ಸೇತುವೆ ದಾಟುತ್ತಿರುವಾಗ ಹಿಂದಿನಿಂದ ಕ್ರೋಜರ ಜೀಪ ನಂ.ಕೆಎ-26/4140 ನೇದ್ದರ ಚಾಲಕನಾದ ಶಂಕರ ತಂದೆ ಚಂದ್ರಪ್ಪಾ ಹಳ್ಳಿಖೇಡ ಇತನು ತನ್ನ ಕ್ರೋಜರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೂಂಡು ಬಂದು ನನ್ನ ಟಂಟಂಗೆ ಡಿಕ್ಕಿ ಪಡಿಸಿ ತನ್ನ ವಾಹನವನ್ನು ಸ್ದಳದಲ್ಲಿ ಬಿಟ್ಟು ಓಡಿ ಹೋದನು. ನನಗೆ ಮತ್ತು ಕಾಶಿನಾಥ ಇತನಿಗೆ ಸಾದಾ ಮತ್ತು ಭಾರಿಗಾಯಗಳಾಗಿರುತ್ತವೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:10/2013 ಕಲಂ.279,337,338 ಐಪಿಸಿ ಸಂ.187 ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment