Police Bhavan Kalaburagi

Police Bhavan Kalaburagi

Friday, February 8, 2013

GULBARGA DISTRICT REPORTED CRIMES


ಜೂಜು ಅಡ್ಡೆಯ ಮೇಲೆ ದಾಳಿ 14 ಜನರ ಬಂಧನ3.5 ಲಕ್ಷ್ಯ ರೂಪಾಯಿಗಳ ಮೌಲ್ಯದ ನಗದು ಹಣಬಂಗಾರದ ಆಭರಣಗಳು, ಮೊಬೈಲ್ ಮತ್ತು ಮೋಟಾರ ಸೈಕಳಗಳ ಜಪ್ತಿ.
ಮಹಾತ್ಮ ಬಸವೇಶ್ವರ ಪೊಲೀಸ್ ಠಾಣೆ: ದಿನಾಂಕಃ 07/02/2013 ರಂದು ಗುಲಬರ್ಗಾ ನಗರದ ಎಂ.ಬಿ ನಗರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಬರುವ ಬಸವೇಶ್ವರ ಆಸ್ಪತ್ರೆಯ ಮುಂದುಗಡೆ ಕನಿಷ್ಕಾ ಬಾರ್ ರೆಸ್ಟೋರೆಂಟ್ ನಲ್ಲಿ ಜೂಜಾಟ ನಡೆದಿರುವ  ಬಗ್ಗೆ ಖಚಿತ ಮಾಹಿತಿ ಅನ್ವಯ ಮಾನ್ಯ ಎಸ್.ಪಿ ಸಾಹೇಬರು ಗುಲಬರ್ಗಾರವರುಮತ್ತು ಡಿ.ಎಸ್.ಪಿ ಬಿ ಉಪ ವಿಭಾಗ ಪ್ರಭಾರಿ ಗ್ರಾಮಾಂತರ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಶ್ರೀ ಎಸ್. ಅಸ್ಲಾಂ ಬಾಷಾ ಸಿ.ಪಿ.ಐ ಎಂ.ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಎಂ.ಬಿ ನಗರ ಠಾಣೆ ಹಾಗು ಸಿಬ್ಬಂದಿ ಜನರಾದ ಶ್ರೀಮಂತ ಹೆಚ್.ಸಿ, ಮತ್ತು ಪಿಸಿ ಜನರಾದ  ಶ್ರೀನಿವಾಸರೆಡ್ಡಿ,ಗಂಗಾಧರ,ಸಿದ್ರಾಮಯ್ಯ, ಪಂಡಿತರಾವ,ಮಸೂದ ಅಹ್ಮದ,ಸಿದ್ದಲಿಂಗಪ್ಪ ರವರೆಲ್ಲರೂ ಕನಿಷ್ಕಾ ಬಾರ್ ರೆಸ್ಟೋರೆಂಟ್ ನಲ್ಲಿ ಜೂಜಾಟದಲ್ಲಿ ತೊಡಗಿದ ಜೂಜುಕೋರ ಮೇಲೆ ದಾಳಿ ಮಾಡಿ ಜೂಜಾಟದಲ್ಲಿ ನಿರತರಾದ  ವಿಶೇತ ತಂದೆ ಶಿವಲಾಲಸಿಂಗ್ ಸಾಃ ಪ್ರಗತಿ ಕಾಲೋನಿ ಗುಲಬರ್ಗಾ, ವರ್ಧನ ತಂದೆ ಮಾರುತಿ ಹಡಗಿಲ ಸಾಃ ರಾಜಾಪೂರ ಗುಲಬರ್ಗಾ, ಶಕೀಲ ಅಹ್ಮದ ತಂದೆ ಶಫಿಯೂದ್ದಿನ ಅಹ್ಮದ ಸಾಃ ಆದರ್ಶ ನಗರ ಗುಲಬರ್ಗಾ, ಬಸವರಾಜ ತಂದೆ ಯಮನಪ್ಪಾ ಪಾಟೀಲ ಸಾಃ ಬಡೆಪೂರ ಕಾಲೋನಿ ಗುಲಬರ್ಗಾ, ಅಮಿತ ತಂದೆ ಶೇಖರ ಪಾಟೀಲ ಸಾಃಬ್ರಹ್ಮಪೂರ ಲಾಲಗಿರಿ ಗುಲಬರ್ಗಾ, ವಿಕಾಸ ತಂದೆ ಸುಭಾಷ ನೌರಂಗ ಸಾಃ ನೌರಂಗದಾಳ ಜಗತ್ ಗುಲಬರ್ಗಾ,ಮಂಜಲೆ ಸಾಬ ತಂದೆ ಚಾಂದಸಾಬ ಹಿರನಾಗಾಂವ್ ಸಾಃ ಹೆಬ್ಬಾಳ ಚಿಂಚೋಳಿ,ಚಂದ್ರಕಾಂತ ತಂದೆ ನಿಂಗಯ್ಯ ಗುತ್ತೆದಾರ ಸಾಃ ಹೆಬ್ಬಾಳ ಚಿಂಚೋಳಿ,ವಿರೇಶ ತಂದೆ ಜಗದೇವ ಪಾಟೀಲ ಸಾಃ ಬಡೆಪೂರ ಕಾಲೋನಿ ಗುಲಬರ್ಗಾ, ಸಿದ್ರಾಮಪ್ಪ ತಂದೆ ಜಗದೇವಪ್ಪ ಪಾಟೀಲ ಸಾಃ ಭಕ್ತಂಪೂರ ಗುಲಬರ್ಗಾ, ಕಲ್ಯಾಣಿ ತಂದೆ ಭಗವಂತಪ್ಪ ಸ್ವಂತ ತಾಃ ಗುಲಬರ್ಗಾ,  ಮಲ್ಲಿಕಾರ್ಜುನ, ತಂದೆ ಬಡೆಪ್ಪ ಜೀವಣಗಿ ಸಾಃ ಶಹಬಜಾರ ನಾಕಾ ಗುಲಬರ್ಗಾ, ವಿನೋದ ತಂದೆ ರಾಮಚಂದ್ರ ಸೇಡಂ ಸಾಃ ಸುಂದರ ನಗರ ಗುಲಬರ್ಗಾ, ಅನೀಲಕುಮಾರ ತಂದೆ ಶಿವಲಿಂಗಪ್ಪ ಬೊಮ್ಮ ಸಾಃ ಪ್ರಗತಿ ಕಾಲೋನಿ ಗುಲಬರ್ಗಾ,ರವರನ್ನು ದಸ್ತಗಿರಿ ಮಾಡಿ ಜೂಜಾಟದ ಪಣಕ್ಕೆ ಹಚ್ಚಿದ ನಗದು ಹಣ 92,054/- ರೂಪಾಯಿಗಳು, ಇಸ್ಪೇಟ್ ಎಲೆಗಳು,ಜೂಜಾಟಕ್ಕೆ ಉಪಯೋಗಿಸಿದ ಬಂಗಾರದ ಉಂಗುರ ಮತ್ತು ಚೈನ್ ಗಳು ಒಟ್ಟು ನಾಲ್ಕುವರೆ ತೊಲೆ ಅಃಕಿಃ 1,15,000/- ರೂ. 18 ಮೊಬೈಲ್ ಗಳು ಹಾಗೂ 5 ಮೋಟಾರ ಸೈಕಗಳು ನೇದ್ದವುಗಳು ಜಪ್ತಿ ಮಾಡಿಕೊಂಡಿದ್ದರಿಂದ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂ:21/2013 ಕಲಂ, 79, 80 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಪರವಾನಿಗೆ ಪಡೆಯದೆ ಕೇಬಲ್ ಚಾಲನಗಳ ಸಂಪರ್ಕ ಕಲ್ಪಿಸಿದ ಬಗ್ಗೆ:
ದೇವಲ ಗಾಣಗಾಪೂರ ಪೊಲೀಸ್ ಠಾಣೆ: ಶ್ರೀ ಸಂತೋಷ ತಂದೆ ಸುಭಾನರಾವ ಸಾ||ಬೆಳಗಾವ ರವರು  ನಾನು 3 ತಿಂಗಳನಿಂದ ಎಸ್.ಸಿ ಎಂಟರ ಪ್ರೇಸ್ಸನಲ್ಲಿ ಮ್ಯಾನೇಜರ ಅಂತಾ ಕೆಲಸ ಮಾಡಿಕೊಂಡಿರುತ್ತೇನೆ. ನಮ್ಮ ಕಂಪನಿಯ ಅಧೀಕೃತ ವಿತರಕರಾಗಿರುತ್ತೇವೆಎಂಟರ ಪ್ರೇಸ್ಸ್ ವ್ಯಾಪ್ತಿ ಬೆಳಗಾವಬಿಜಾಪೂರಬಾಗಲಕೋಟಗುಲಬರ್ಗಾಬೀದರ ಜಿಲ್ಲೆಗಳು ಬರುತ್ತವೆ. ಈ ಜಿಲ್ಲೆಗಳ ಕೇಬಲ್ ನೇಟ್ವರ್ಕ ಬಳಕೆದಾರರು ಮೇಡಿಯಾ ಪ್ರೋ ಕಂಪನಿಯಿಂದ ಟಿವ್ಹಿ ಚಾನಲ್ ಗಳ ಪರವಾನಿಗೆಗಾಗಿ ಹಣ ಪಾವತಿ ಮಾಡಿ ಬಿತ್ತರಿಸಲು ಪರವಾನಿಗೆ ಪಡೆದುಕೊಳ್ಳುತ್ತಾರೆಶಿವಾನಂದ ತಂದೆ ಬಸಪ್ಪ ಮಾಳಿ ಶ್ರೀ ಭಾಗ್ಯವಂತಿ ಕೇಬಲ ನೇಟ್ ವರ್ಕ ಇವನು ಗೊಬ್ಬೂರ[ಬಿ] ಗ್ರಾಮದಲ್ಲಿ ಮಾತ್ರ ಸುವರ್ಣಸ್ಟಾರ ಗೋಲ್ಡಜಿ ಕನ್ನಡಸ್ಟಾರ ಪ್ಲಸ್ಜಿ ಸಿನಿಮಾಜಿ ಟಿವ್ಹಿಚಲನಗಳನ್ನು ಬಿತ್ತರಿಸಲು ಮೇಡಿಯಾ ಪ್ರೋ ಕಂಪನಿಯಿಂದ ಪರವಾನಿಗೆ ಪಡೆದುಕೊಂಡಿದ್ದು ಇರುತ್ತದೆ. ದಿನಾಂಕ:28-01-2013 ರಿಂದ ಇವತ್ತಿನವರೆಗೆ ಗುಲಬರ್ಗಾ ಪಟ್ಟಣದ 17 ಕೇಬಲ್ ಆಪರೇಟರಗಳಿಗೆ ಗೊಬ್ಬೂರ[ಬಿ] ದಿಂದ ಮೇಡಿಯಾ ಪ್ರೋ ಪೇ ಚಲನಗಳಾದ ಸುವರ್ಣಸ್ಟಾರ ಗೋಲ್ಡಜಿ ಕನ್ನಡಸ್ಟಾರ ಪ್ಲಸ್ಜಿ ಸಿನಿಮಾಜಿ ಟಿವ್ಹಿಚಲನಗಳನ್ನು ಬಿತ್ತರಿಸುತಿದ್ದುಅವುಗಳಲ್ಲಿ ಗುಲಬರ್ಗಾ ಪಟ್ಟಣದ ಐವನಶಾಹಿಬ್ರಹ್ಮಪೂರಪಿ.ಎನ್.ಟಿ ಹೌಸಿಂಗ್ ಬೋಡ್ಗಾಂಧಿ ನಗರಎಮ್.ಬಿ.ನಗರ ಏರಿಯಾಗಳಲ್ಲಿ ಬಿತ್ತರಿಸಿದ ಬಗ್ಗೆ ವಿಡಿಯೋ ರಿಕಾರ್ಡ ಮಾಡಿಕೊಂಡಿದ್ದು ಇರುತ್ತದೆ. ಈ ಬಗ್ಗೆ ಮೇಡಿಯಾ ಪ್ರೊ ಕಂಪನಿಯವರು ಶಿವಾನಂದ ಮಾಳಿ ಇವನಿಗೆ ನೋಟಿಸ ನೀಡಿ, ಗೊಬ್ಬೂರ[ಬಿ] ಗ್ರಾಮದಿಂದ ಗುಲಬರ್ಗಾ ಪಟ್ಟಣಕ್ಕೆ ಬಿತ್ತರಿಸುವುದು ಕಾನೂನು ಪ್ರಕಾರ ಅಪರಾದವಾಗುತ್ತದೆ ಅಂತಾ ತಿಳಿಸಿದರು ಸಹ ಶಿವಾನಂದ ಮಾಳಿ ಕಂಪನಿಯವರಿಂದ ಯಾವುದೆ ಪರವಾನಿಗೆ ಪಡೆಯದೆ ಗೊಬ್ಬೂರ[ಬಿ] ಗ್ರಾಮದಿಂದ ಮೇಡಿಯಾ ಪ್ರೊ ಕಂಪನಿಯ ಪೇ ಚಲನಗಳಾದ ಸುವರ್ಣಸ್ಟಾರ ಗೋಲ್ಡಜಿ ಕನ್ನಡಸ್ಟಾರ ಪ್ಲಸ್ಜಿ ಸಿನಿಮಾಜಿ ಟಿವ್ಹಿಚಲನಗಳನ್ನು ಪ್ರಸಾರ ಮಾಡಿ ಮೇಡಿಯಾ ಪ್ರೊ ಕಂಪನಿಗೆ ಮೋಸ ಮಾಡಿದ್ದು ಇರುತ್ತದೆ. ಆತನ ವಿರುದ್ದ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 14/2013 ಕಲಂ.66(B), 66(E) IT Act and 420 IPC ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.   

No comments: