ಕಾಣೆಯಾದ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ದಿನಾಂಕ:04-02-2013 ರಂದು ನನ್ನ ಮಗನಾಧ ಪ್ರತಾಪಕುಮಾರ @ ರಾಜು ವಯಸ್ಸು 22 ವರ್ಷ ಇತನು ಎಂ.ಎಸ. ರಾಮಯ್ಯ ಇಂಜಿನಿರಿಂಗ ಕಾಲೇಜದಲ್ಲಿ ಬೆಂಗಳೂರದಲ್ಲಿ ಇಂಜಿನಿಯರಿಂಗ 5 ನೇ ಸೇಮಿಸ್ಟರದಲ್ಲಿ ವ್ಯಾಸಾಂಗ ಮಾಡುತ್ತಿದ್ದು, 5ನೇ ಸೇಮ ನಲ್ಲಿ 7 ವಿಷಯಗಳಲ್ಲಿ ಅನುತಿರ್ಣವಾಗಿದ್ದರಿಂದ ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ದಿನಾಂಕ:05/02/2013 ರಂದು ಮನೆ ಬಿಟ್ಟು ಹೋದವನು ಮರಳಿ ಮನೆಗೆ ಬಂದಿರುವುದಿಲ್ಲಾ. ನಾವು ನಮ್ಮ ಸಂಬಂಧಿಕರಿಗೆ ಮತ್ತು ನಮ್ಮ ಪರಿಚಯಸ್ಥರ ಮನೆಗಳಿಗೆ ವಿಚಾರಿಸಿದರು ಕೂಡ ಇದುವರೆಗೂ ಅತನ ಬಗ್ಗೆ ಮಾಹಿತಿ ಇರುವದಿಲ್ಲ ಅಂತಾ ಶ್ರೀ ಪಶುಪತಿ ತಂದೆ ತಿಮ್ಮಪ್ಪಾ ಬೀಮನ್ ಸಾ:ಪ್ಲಾಟ ನಂ: 134 ಲಕ್ಷ್ಮಿ ನಿಲಯ ಸಿಐಬಿ ಕಾಲೋನಿ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 20/2013 ಕಲಂ, ಹುಡಗ ಕಾಣೆಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಳ್ಳಲಾಗಿದೆ. ಕಾಣೆಯಾದ ಹುಡಗ ವಿವರ: ಹೆಸರು: ಪ್ರತಾಪಕುಮಾರ @ ರಾಜು ಇತನ ವಯಾ|| 22 ,ಸಾದಾಗಪ್ಪು ಮೈಬಣ್ಣ, ತೆಳ್ಳನೆ ಮೈಕಟ್ಟು,ದುಂಡು ಮುಖ, ನಿಟ್ಟಾದ ಮೂಗು, ಕಪ್ಪು ಕೂದಲು, ಬಾಯಿಯಲ್ಲಿ ಮುಂದಿನ ಹಲ್ಲಿನ ಸಂದು ಜಾಸ್ತಿ ಇರುತ್ತದೆ. ಕಪ್ಪು ಬಣ್ಣದ ಜಿನ್ಸ ಪ್ಯಾಂಟ, ನೀಲಿ ಬಣ್ಣದ ಟೀಶರ್ಟ ಧರಿಸಿರುತ್ತಾನೆ. ಕನ್ನಡ, ಹಿಂದಿ, ಇಂಗ್ಲೀಷ ಭಾಷೆ ಬಲ್ಲವನಾಗಿರುತ್ತಾನೆ. ಇತನ ಬಗ್ಗೆ ಸುಳಿವು ಸಿಕ್ಕಲ್ಲಿ ಅಶೋಕ ನಗರ ಪೊಲೀಸ್ ಠಾಣೆ ದೂರವಾಣಿ ಸಂ: 08472/263617 ಅಥವಾ 9480803545, ಗುಲಬರ್ಗಾ ಕಂಟ್ರೋಲ್ ರೂಮ್ ನಂ:08472-263604 ನೇದ್ದಕ್ಕೆ ಸಂಪರ್ಕಿಲು ಕೋರಲಾಗಿದೆ.
ಅತೀಥಿ ಶಿಕ್ಷಕನಿಂದ ವಿಧ್ಯಾರ್ಥಿನಿಗೆ ಆಕ್ರಮ ತಡೆ :
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ದಿನಾಂಕ:04-02-2013 ರಂದು ಮಧ್ಯಾಹ್ನ 1=00 ಗಂಟೆಗೆ ರವಿ ತಂದೆ ಸಿದ್ದಾರಾಮ ಕುಡಕೆ ಅತಿಥಿ ಶಿಕ್ಷಕರು ಸ.ಹಿ.ಪ್ರಾ.ಶಾಲೆ ಸಾ:ಕಿಣ್ಣಿ ಅಬ್ಬಾಸ ಇತನು ನನ್ನ ಮನೆಯಲ್ಲಿ ಯಾರು ಇರಲಾರದ ಸಮಯದಲ್ಲಿ ಮನೆಗೆ ಬಂದು, ಅವಾಚ್ಯವಾಗಿ ಬೈದು ನನ್ನ ಮಾನ ಮರ್ಯಾದೆ ಹರಾಜು ಮಾಡಿದ್ದಿ ನೀನು ಇನ್ನು ಮುಂದೆ ಹ್ಯಾಂಗ ಶಾಲೆಗೆ ಹೋಗುತ್ತಿ ನಾನು ನೋಡಿಕೊಳ್ಳುತ್ತಿನಿ. ನಿನಗೆ ಮತ್ತು ನಿನ್ನ ಕುಟುಂಬದವರಿಗೆ ಎಲ್ಲರಿಗೂ ಕೊಡಲಿಯಿಂದ ಕಡಿತ್ತೀನಿ ಅಂತಾ ಅವಾಚ್ಯ ಶಬ್ಬಗಳಿಂದ ಬೈದು ಬೇದರಿಕೆ ಹಾಕಿರುತ್ತಾನೆ. ಅಂತಾ ನಂದಿತಾ (ಹೆಸರು ಬದಲಾಯಿಸಿದೆ) ಅನ್ನುವ ವಿಧ್ಯಾರ್ಥಿನಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 13/13 ಕಲಂ:341,504,506 ಐ.ಪಿ.ಸಿ.ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ದಿನಾಂಕ:05/02/2013 ರಂದು ಬೆಳಿಗ್ಗೆ 11-00 ಗಂಟೆಯ ಸುಮಾರಿಗೆ ನಮ್ಮ ಮನೆಯ ಪಕ್ಕದವರಾದ ದತ್ತಪ್ಪ ಕೊಚಿ ಇತನು ನಮ್ಮ ಮನೆಯ ಮುಂದಿನ ಕಲ್ಲುಗಳು ಕಿತ್ತಿ ತೆಗೆಯುತ್ತಿದ್ದನು. ನಾನು ಅವನಿಗೆ ಕಲ್ಲುಗಳು ಯಾಕೆ ತೆಗೆಯುತ್ತಿದ್ದಿ ಅಂತಾ ಕೇಳಿದಾಗ ದತ್ತಪ್ಪ,,ಹವಳಪ್ಪ,ಬೋಗಪ್ಪ ,ಸಂಜುಕುಮಾರ,ಭೀಮಪ್ಪ,ಕಲಾವತಿ,,ಗುರುಬಾಯಿ ಗಂಡ ಭೋಗಪ್ಪ ಇವರೆಲ್ಲರೂ ಬಂದು ನೀನು ಏನು ಕೇಳುತ್ತಿ ನಿನಗೆ ಸೋಕ್ಕು ಬಹಳ ಬಂದಿದೆ ಅಂತಾ ಬೈದು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ. ಜಗಳ ಬಿಡಿಸಲು ಬಂದ ನನ್ನ ಮಗ ರಾಜಶೇಖರನಿಗೂ ಹೊಡೆ ಬಡೆ ಮಾಡಿರುತ್ತಾರೆ. ನಮಗೆ ಹೊಡೆ-ಬಡೆ ಮಾಡಿದವರ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಶ್ರೀಮತಿ.ಶರಣಮ್ಮ ಗಂಡ ದುಂಡಪ್ಪ ಕೊಚಿ ಸಾ|| ಝಳಕಿ (ಕೆ) ರವಳು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ.ನಂ:14/2013 ಕಲಂ: 143,147,323,324,354,341,504,506 ಸಂಗಡ 149 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment