Police Bhavan Kalaburagi

Police Bhavan Kalaburagi

Thursday, February 7, 2013

GULBARGA DISTRICT REPORTED CRIMES


ಜೂಜಾಟ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ: ದಿನಾಂಕ:06-02-2013 ರಂದು ಸಾಯಂಕಾಲ ಶಹಾಬಾದ ಠಾಣಾ ವ್ಯಾಪ್ತಿಯಲ್ಲಿ ಬರುವ ಮಿಲ್ಲತ ನಗರದ ವೆಂಕಟೇಶ ಕುಸಾಳೆರವರ ಮನೆಯ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತು ಅಂದರ ಬಾಹರ ಜೂಜಾಟ ಆಟ ಆಡುತ್ತಿದ್ದಾರೆ ಅಂತಾ ಖಚಿತ ಬಾತ್ಮಿ ಬಂದ ಮೇರೆಗೆ, ಶಹಾಬಾದ ನಗರ ಪಿಐ ರವರ ನೇತೃತ್ವದಲ್ಲಿ ಸಿಬ್ಬಂದಿಯವರಾದ ಬಸವಣಪ್ಪಾ,ವೀರಭದ್ರ,ಸುಭಾಸ,ಬಸವರಾಜ ರವರು ಕೂಡಿಕೊಂಡು ಜೂಜಾಟದಲ್ಲಿ ನಿರತರಾದ  ಮಹ್ಮದ ಗೂಡುಸಾಬ ತಂದೆ ದಾವಲಸಾಬ ಶೇಖ,ಮಹ್ಮದ ಅಸ್ಪಕ ತಂದೆ ಖಾಜಾ ಮೈನೋದ್ದಿನ ಚೌದರಿ, ಮಹ್ಮದ ರೀಯಾಜ ತಂದೆ ಮಹ್ಮದ ನಶೀರಸಾಬ ಶೇಖ,ಮಹ್ಮದ ಇಮ್ರಾನ ತಂದೆ ಬಾಬುಮೀಯ್ಯಾ ಇನ್ನೂ 2 ಜನ  ಸಾ:ಎಲ್ಲರೂ ಶಹಾಬಾದರವರಿಂದ  ಒಟ್ಟು 4,110/- ರೂಪಾಯಿಗಳು ಮತ್ತು ಇಸ್ಪೀಟ ಎಲೆಗಳು  ಜಪ್ತಿ ಮಾಡಿಕೊಂಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 15/2013 ಕಲಂ, 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಫರತಬಾದ ಪೊಲೀಸ್ ಠಾಣೆ: ಶ್ರೀ ದತ್ತಾತ್ರಯ ತಂದೆ ವೀರಣ್ಣಾ ವಾಲಿಕಾರ ಸಾ|| ದುತ್ತರಗಾಂವ ತಾ|| ಆಳಂದ ರವರು ನಾನು ಚಿದಾನಂದ ತಳಕೇರಿ ಹಾಗೂ ಪ್ರಕಾಶ ಭರಣೆ ಕೂಡಿಕೊಂಡು ದಿನಾಂಕ:05-02-2013 ರಂದು ರಾತ್ರಿ 9-00 ಗಂಟೆಯ ಸುಮಾರಿಗೆ ಕಾರ ನಂ: ಕೆಎ- 33 ಎಮ್-3151 ನೇದ್ದರಲ್ಲಿ ಕುಳಿತುಕೊಂಡು ಹಾರುತಿ ಹಡಗಿಲ ಗ್ರಾಮಕ್ಕೆ ಗುಲಬರ್ಗಾದಿಂದ ಹೊರಟಿದ್ದುಹಾರುತಿ ಹಡಗಿಲ ಕ್ರಾಸ ಇನ್ನೂ 1 ಕಿ.ಮೀ ಮುಂದೆ ಬ್ರೀಜ್ ಹತ್ತಿರ ರೋಡಿನ ಮೇಲೆ ರಾತ್ರಿ 9-45 ಗಂಟೆಯ ಸುಮಾರಿಗೆ ನಮ್ಮ ಕಾರ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ರಸ್ತೆಯ ಬಲಗಡೆ ಕಡೆಗೆ ಹೋಗಿ ಗಿಡಕ್ಕೆ ಡಿಕ್ಕಿಪಡಿಸಿದ್ದರಿಂದ ನನಗೆ ಮತ್ತು ಚಿದಾನಂದನಿಗೆ ಗಾಯಗಳಾಗಿರುತ್ತವೆ. ಕಾರ ಚಲಾಯಿಸುತ್ತಿದ್ದ ಪ್ರಕಾಶನು ಸಹ ಗಾಯಗಾಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:14/2013 ಕಲಂ, 279,337, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ:05-02-13 ರಂದು ರಾತ್ರಿ 11-30 ಗಂಟೆ ಸುಮಾರಿಗೆ ಮಂಜುನಾಥ ಇತನು ಹೀರೊ ಹೊಂಡಾ ಮೋಟಾರ ಸೈಕಲ ನಂ: ಕೆಎ-25 ಎ-440  ನೇದ್ದರ ಮೇಲೆ ಬೀದರ ಕ್ಕೆ ಹೊರಟಿದ್ದು ಅತಿವೇಗ  ಮತ್ತು ನಿಷ್ಕಾಳಜಿತನದಿಂದ ನಡೆಸುತ್ತಾ  ಬೀದರಕ್ಕೆ ಹೊರಟಾಗ ಅವರಾದ (ಬಿ) ಗ್ರಾಮದ ಹತ್ತಿರ ಸ್ವಾಮಿ ಸಮರ್ಥ ಗುಡ್ಡಾ  ಬ್ರೀಜ ಹತ್ತಿರ ವೇಗದ ಆಯ ತಪ್ಪಿ  ರೋಡ ಬದಿಗೆ ಇರುವ ಗೂಟಕಲ್ಲಿಗೆ ಡಿಕ್ಕಿ ಹೊಡೆದು ತನ್ನಷ್ಟಕ್ಕೆ ತಾನೇ ಬಿದ್ದಿದ್ದರಿಂದ ಭಾರಿರಕ್ತಗಾಯವಾಗಿರುತ್ತದೆ. ಅಂತಾ ಶ್ರೀ ವಿಶ್ವನಾಥ ತಂದೆ ವೆಂಕಪ್ಪ ರೆಡ್ಡಿ ಸಾ:ರಾಮನಗರ ಗುಲಬರ್ಗಾ ಹಾ:ವ:ನೀಲೂರ ತಾ:ಅಫಜಲಪೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 79/2013 ಕಲಂ, 279, 338 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗ್ರಾಮೀಣ ಪೊಲೀಸ್ ಠಾಣೆ: ಶ್ರೀಮತಿ ತುಳಜಮ್ಮ ತಂದೆ ರಾಯಪ್ಪ ನಾಕಮನ ಸಾ||ಮುತ್ಯಾನ ಬಬಲಾದ ತಾ||ಗುಲ್ಬರ್ಗಾ ರವರು ನಾನು  ದಿನಾಂಕ:06/02/2013 ರಂದು ಮಧ್ಯಾಹ್ನ ಗಂಟೆಯ ಸುಮಾರಿಗೆ ಮ್ಯಾಜಿಕ ಟೆಂಪೊ ನಂ ಕೆಎ-56/0645 ನೇದ್ದರಲಿ ಕುಳಿತುಕೊಂಡು ಗುಲಬರ್ಗಾಕ್ಕೆ ಬರುವಾಗ ಸ್ವಾಮಿ ಸರ್ಮಥ ಗುಡ್ಡದ ಹತ್ತಿರದ ಮುಂದಿನ ರಸ್ತೆಯ ಮೇಲೆ ಟೆಂಪೋ ಚಾಲಕ ತನ್ನ ವಾಹವನ್ನು ಅತೀವೇಗ ಅಲಕ್ಷತನದಿಂದ ನಡೆಯಿಸಿ ರಸ್ತೆಯ ಪಕ್ಕದಲ್ಲಿಯ ಎಡಭಾಗದ ಗೂಟದ ಕಲ್ಲಿಗೆ ಡಿಕ್ಕಿ ಪಡೆಯಿಸಿದ್ದರಿಂದ ವಾಹನ ಪಲ್ಟಿಯಾಗಿ ಗಾಯವಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 83/2013 ಕಲಂ, 279,337,ಸಂಗಡ 187 ಐ.ಎಮ.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: