ಅತ್ಯಾಚಾರ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ನನ್ನ ತಂದೆ-ತಾಯಿಯವರು ಕೂಲಿ ಕೆಲಸ ಹೋದ ವೇಳೆಯಲ್ಲಿ ನಾನೋಬ್ಬಳೆ ಮನೆಯಲ್ಲಿರುತ್ತಿರುವಾಗ ನನ್ನ ತಂದೆಯ ಸಹೋದರ ಮಾವನ ಮಗನಾದ ಶಿವಲಿಂಗ ತಂದೆ ದೇವಂದ್ರಪ್ಪ ಜುಮ್ಮಾನೋರ ಸಾ|| ಧೋಟಿಕೋಳ ಇತನು ನಮ್ಮ ಮನೆಗೆ ಬಂದು ನನಗೆ (ಹೆಸರು ಸೂಚಿಸಿರುವದಿಲ್ಲ) ಎರಡು (2) ತಿಂಗಳುಗಳಿಂದ ಜಬರ ದಸ್ತಿಯಿಂದ ಸಂಭೋಗ ಮಾಡುತ್ತಾ ಬಂದಿರುತ್ತಾನೆ. ಈ ವಿಷಯ ನನ್ನ ತಂದೆ-ತಾಯಿಯವರಿಗೆ ಹೇಳಿದರೆ ಬೈಯ್ಯುತ್ತಾರೆ ಅಂತಾ ತಿಳಿದು ಯಾರ ಹತ್ತಿರವು ಹೇಳಿರುವುದಿಲ್ಲ. ದಿನಾಂಕ:15-02-2013 ರಂದು ಮಧ್ಯಾಹ್ನ 3.00 ಗಂಟೆಗೆ ಮತ್ತೆ ನಾನೋಬ್ಬಳೇ ಮನೆಯಲ್ಲಿದ್ದಾಗ ಶಿವಲಿಂಗ ಇತನು ತನ್ನ ಅಣ್ಣನ ಮನೆಗೆ ನನಗೆ ಕರೆದುಕೊಂಡು ಹೋಗಿ ನಾನು ಬೇಡ ಅಂದರು ಜಬರ ದಸ್ತಿಯಿಂದ ಸಂಭೋಗ ಮಾಡಿದನು. ದಿನಾಂಕ:23.02.2013 ರಂದು ಬೆಳೆಗ್ಗೆ ಸಮಯದಲ್ಲಿ ವಾಂತಿಯಾಗುತ್ತಿರುವದರಿಂದ ನನ್ನ ತಾಯಿಯೊಂದಿಗೆ ಆಸ್ಪತ್ರೆಗೆ ಹೋದಾಗ ವೈಧ್ಯಾಧಿಕಾರಿಗಳು ಗರ್ಭಿಣಿಯಿರುವ ಬಗ್ಗೆ ತಿಳಿಸಿರುತ್ತಾರೆ. ಈ ವಿಷಯ ಗುರು ಹಿರಿಯರಲ್ಲಿ ವಿಚಾರಿಸಿ ದೂರು ಕೊಡಲು ತಡವಾಗಿರುತ್ತದೆ ಅಂತಾ ನೊಂದ ಯುವತಿ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ:32/2013 ಕಲಂ,448,376 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಚೌಕ ಪೊಲೀಸ್ ಠಾಣೆ:ದಿನಾಂಕ:25.02.2013 ರಂದು ಮಧ್ಯಾಹ್ನ 12;50 ಗಂಟೆಯ ಸಮಯಕ್ಕೆ ಕಾರ್ಪೊರೇಷನ್ ಬ್ಯಾಂಕಿನಿಂದ 9,50,000=00 ರೂಪಾಯಿಗಳು ಡ್ರಾ ಮಾಡಿಕೊಂಡು ಸರಾಫ ಬಜಾರದಲ್ಲಿ ತನ್ನ ಸುಜಕಿ ಎಕ್ಸಸ್ ಮೊಟಾರ ಸೈಕಲ ಡಿಕ್ಕಿಯೊಳಗಡೆ ಇಟ್ಟು ಸರಾಫ ಬಜಾರದಲ್ಲಿರುವ ನನ್ನ ಸ್ನೇಹಿತನಾದ ನಾಗೇಂದ್ರ ಪಾಟೀಲ ಇವರ ಸಂಗಡ ಮಾತನಾಡಿ ಮರಳಿ ಬಂದು ನೋಡಲಾಗಿ ಡಿಕ್ಕಿಯೊಳಗಡೆ ಇಟ್ಟಿರುವ ಹಣ ಇರಲ್ಲಿಲ ಯಾರೋ ಕಳ್ಳರು ನನ್ನ ಸುಜಕಿ ಎಕ್ಸಸ ಡಿಕ್ಕಿಯೊಳಗಿನ 9 ಲಕ್ಷ 50 ಸಾವಿರ ರೂಪಾಯಿಗಳು ಹಾಗೂ ಅದರ ಜೋತೆಗಿದ್ದ ನಾಲ್ಕು ಚೆಕ್ಕ ಬುಕ್ಕ ಗಳು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ಬಸವರಾಜ ತಂದೆ ರೇವಪ್ಪಾ ಏರಿ ವಯಾ||45 ಉ|| ದಾಲ್ ಮಿಲ್ ವ್ಯಾಪಾರ್ ಸಾ|| ಬ್ಯಾಂಕ್ ಕಾಲೋನಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:52/2013 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment