Police Bhavan Kalaburagi

Police Bhavan Kalaburagi

Saturday, March 2, 2013

GULBARGA DISTRICT REPORTED CRIME


ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ: ಶ್ರೀಮತಿ ನಾಗಮ್ಮ ಗಂಡ ಚಂದ್ರಕಾಂತ ಸಾ:ತಾರಪೈಲ ಗುಲಬರ್ಗಾ ರವರು ನನಗೆ 6 ವರ್ಷಗಳ ಹಿಂದೆ ಶಹಾಪೂರ ತಾಲ್ಲೂಕಿನ  ಕಾಡಮಗೇರಿ ಗ್ರಾಮದ  ಚಂದ್ರಕಾಂತ ತಂದೆ ಶಿವಬಸಪ್ಪ ಹುಡೆದವರ ಜೋತೆ ಮದುವೆ ಮಾಡಿದ್ದು, ಮದುವೆಯಲ್ಲಿ ವರದಕ್ಷಿಣೆ  ಅಂತಾ 25,000/- ರೂಪಾಯಿಗಳು, 2 1/2 ತೊಲೆ ಬಂಗಾರ  ಮತ್ತು ಇತರೆ ವಸ್ತುಗಳನ್ನು ನೀಡಿ ಮದುವೆ ಮಾಡಿಕೊಡಲಾಗಿತ್ತು. ಮದುವೆಯಾದ ನಂತರ ಇನ್ನೂ 50.000/- ರೂಪಾಯಿಗಳು ತರುವಂತೆ ಗಂಡ ಮತ್ತು ಗಂಡನ ಮನೆಯವರು ಪಿಡಿಸುತ್ತಿದ್ದರು. ನನ್ನ ತಂದೆ ತಾಯಿ ಬಡವರಾಗಿದ್ದರಿಂದ ತವರಿನಿಂದ ಹಣ ತರಲು ಆಗುತ್ತಿಲ್ಲ ಗಂಡ ಚಂದ್ರಕಾಂತ, ಅತ್ತೆ ಶಿವಲಿಂಗಮ್ಮ, ಮಾವ ಶಿವಬಸಪ್ಪ ಮೈದುನ ಮರಿಲಿಂಗಪ್ಪ ಮತ್ತು ನಾದಿನಿ ನಾಗಮ್ಮ  ನನಗೆ ಬೈಯುವುದು ಅವಮಾನಿಸುವದು ಮಾಡುತ್ತಿದ್ದಾರೆ. ನನ್ನ ಎರಡೂವರೆ ವರ್ಷದ ಮಗನ ಭವಿಷ್ಯದ ದೃಷ್ಟಿಯಿಂದ ಎಲ್ಲವನ್ನು ಸಹಿಸಿಕೊಂಡು ಬರುತ್ತಿದ್ದೆ, ನೀನು  50.000/- ರೂಪಾಯಿಗಳು ನಿನ್ನ ತವರು ಮನೆಯಿಂದ ತಂದರೆ ಮಾತ್ರ ಮನೆಯಲ್ಲಿ ಇರಬೇಕು ಇಲ್ಲವಾದರೆ ಬೇರೊಂದು ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಹೇದರಿಸಿ ಮನೆಯಿಂದ ಹೋರ ಹಾಕಿರುತ್ತಾರೆ. ದಿನಾಂಕ:17-1-2013 ರಂದು ಮಧ್ಯಾಹ್ನ ಸುಮಾರಿಗೆ ನನ್ನ ಗಂಡ ಅತ್ತೆ ನಾದಿನಿ  ಮಾವ  ಮೈದುನ ಎಲ್ಲರೂ ದುಡ್ಡು ತರದೆ ಇರುವದಕ್ಕೆ ಅವಾಚ್ಯವಾಗಿ ಬೈದು ಕೈಯಿಂದ ಹೊಡೆಬಡೆ ಮಾಡಿ ಜಬರದಸ್ತಿಯಿಂದ ನನ್ನ 2 ವರ್ಷದ ಮಗನನ್ನು ತೆಗೆದುಕೊಂಡು ಹೋಗಿರುತ್ತಾರೆ. ಇವತ್ತಲ್ಲ ನಾಳೆ ನನ್ನ ಗಂಡ ತಿದ್ದುಕೊಳ್ಳಬಹುದು ಅಂತಾ ಸಹಕರಿಸಿಕೊಂಡು ಬಂದಿರುತ್ತೆನೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ  ಠಾಣೆ  ಗುನ್ನೆ ನಂ:12/2013 ಕಲಂ 498(ಎ),323,504,506,363 ಸಂಗಡ 34 ಐಪಿಸಿ ಮತ್ತು 3 &4 ಡಿಪಿ ಆಕ್ಟ್ಯ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: