ಕಳ್ಳತನ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ: ದಿನಾಂಕ:14/03/2013 ರಂದು ರಾತ್ರಿ 11-30 ಗಂಟೆಯಿಂದ ನಸುಕಿನ ಜಾವ 5-00 ಗಂಟೆಯ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ನಮ್ಮ ಮನೆಯಲ್ಲಿ ಯಾರೂ ಇರಲಾರದ ಸಮಯ ಸಾಧಿಸಿ ಮನೆಯ ಬಾಗಿಲ ಕೀಲಿ ಮುರಿದು ಮನೆಯಲ್ಲಿಟ್ಟಿದ ಬಂಗಾರದ ಆಭರಣಗಳು ಹಾಗೂ ನಗದು ಹಣ 11,500/- ರೂಪಾಯಿಗಳು ಕಳ್ಳತನ ಮಾಡಿರುತ್ತಾರೆ ಅಂತಾ ಶ್ರೀಮತಿ ಶಾಂತಾಬಾಯಿ ಗಂಡ ಬಾಬುರಾವ ಜುಂಜೆ ಸಾ: ಹಿರೋಳ್ಳಿ ತಾಃ ಆಳಂದ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 24/2013 ಕಲಂ: 457, 380 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಹಲ್ಲೆ ಜಾತಿ ನಿಂದನೆ ಪ್ರಕರಣ:
ಯಡ್ರಾಮಿ ಪೊಲೀಸ್ ಠಾಣೆ:ದಿನಾಂಕ:14-03-2013 ರಂದು ನನ್ನ ಅಣ್ಣನ ಮಗನಾದ ಮಲ್ಲು ಇತನು ಅಂಗಡಿಗೆ ಹೋಗುವಾಗ ನಮ್ಮ ಗ್ರಾಮದ ಕಬ್ಬಲಿಗ ಜನಾಂಗದವನಾದ ಬಾಬು ತಂದೆ ಪರಸಪ್ಪ ಕಡಕಲ್ ಇತನು ನಮ್ಮ ಅಣ್ಣನ ಮಗನಿಗೆ ನಿಮ್ಮ ಪ್ರಕಾಶನದ್ದು ಬಾಳ ಆಗ್ಯಾದ ಅವನು ನನಗೆ ಬೈಯುತ್ತಿದ್ದಾನೆ. ಇನ್ನು ಮುಂದೆ ಬೈದರೆ ಹೊಡಿತಿನಿ ಅಂತಾ ಹೇಳು ಎಂದು ಹೇಳಿದ್ದಾನೆ ಅಂತಾ ಮಲ್ಲು ಬಂದು ನನಗೆ ತಿಳಿಸಿದನು ನಾನು ಮತ್ತು ನಮ್ಮ ಅಣ್ಣ ಇಬ್ಬರೂ ಕೂಡಿಕೊಂಡು ಬಾಬುಗೆ ಹೋಗಿ ವಿಚಾರಿಸಿದಾಗ ಅವನ ಮತ್ತು ನಮ್ಮ ಮಧ್ಯ ಬಾಯಿ ಮಾತಿನ ಜಗಳವಾಯಿತು. ಮಧ್ಯಾಹ್ನ 2-30 ಗಂಟೆ ಸುಮಾರಿಗೆ ಮನೆಯ ಹತ್ತಿರ ಇದ್ದಾಗ ಪರಸಪ್ಪ ತಂದೆ ಅಡಿವೆಪ್ಪ ಕಡಕಲ್, ಬಾಬು ತಂದೆ ಪರಸಪ್ಪ ಕಡಕಲ್, ಮತ್ತು ಮಲಕಪ್ಪ ತಂದೆ ನಿಂಗಪ್ಪ ಗುಂಡಕನಾಳ ಮೂವರು ಸೇರಿ ಮನೆಯ ಹತ್ತಿರ ಬಂದು ಜಾತಿ ನಿಂದನೆ ಮಾಡಿ ಸಲುಕೆಯಿಂದ ನನ್ನ ಎಡ ಕಪಾಳದ ಕೀವಿ ಹತ್ತಿರ ಜೋರಾಗಿ ಹೊಡೆದಿರುತ್ತಾರೆ ಅಂತಾ ಶ್ರೀ, ಪ್ರಕಾಶ ತಂದೆ ನಿಂಗಪ್ಪ ತಳಕೇರಿ ಸಾ: ಕಣಮೇಶ್ವರ ತಾ: ಜೇವರ್ಗಿ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:49/2013 ಕಲಂ 341,324,504,506,ಸಂಗಡ 34 ಐಪಿಸಿ ಮತ್ತು 3 (1), (10) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ 1989 ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ,
No comments:
Post a Comment