Police Bhavan Kalaburagi

Police Bhavan Kalaburagi

Thursday, March 21, 2013

GULBARGA DISTRICT REPORTED CRIMES

ಕಳ್ಳತನ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ಶ್ರೀ ಚಂದ್ರಶೇಖರ ತಂದೆ ಸಾಯಿಬಣ್ಣಾ ದೊಡ್ಡಮನಿ ಸಾ:ಕೆಲ್ಲೂರ ತಾ:ಜೇವರ್ಗಿ ರವರು ನನ್ನ ಮನೆಯ ಮುಂದೆ ಅಂಗಳದಲ್ಲಿ ಟ್ರಾಕ್ಟರ ಟ್ರ್ಯಾಲಿ ನಂ ಕೆಎ-32-ಟಿಎ-2925 ನೇದ್ದನ್ನು ದಿನಾಂಕ:22/2/2013 ರಂದು ರಾತ್ರಿ 9-00 ಗಂಟೆಗೆ ನಿಲ್ಲಿಸಿದ್ದು, ದಿನಾಂಕ:22/2/13 ರಂದು ರಾತ್ರಿ 9-00 ಗಂಟೆಯಿಂದ ದಿನಾಂಕ:23/2/2013 ರಂದು ಬೆಳಗಿನ ಜಾವ  6-00 ಗಂಟೆಯ ಅವದಿಯಲ್ಲಿ ಯಾರೋ ಟ್ರಾಕ್ಟರ ಟ್ರಾಲಿ ಅ.ಕಿ 80,000/- ರೂ ನೇದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆ ಕಳುವಾದ ದಿನದಿಂದ ಇಲ್ಲಿಯವರೆಗೆ ಹುಡಾಕಾಡಿದರು ಪತ್ತೆಯಾಗಿರುವದಿಲ್ಲಾ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:42/2013 ಕಲಂ, 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ನೆಲೋಗಿ ಪೊಲೀಸ ಠಾಣೆ:ಭೀಮಯ್ಯ ತಂದೆ ಹಣಮಯ್ಯ ವಡ್ಡರ ಸಾ|| ಕಲ್ಲ ಹಂಗರಗಾ ತಾ|| ಜೇವರ್ಗಿ ರವರು    ನನ್ನ ಮಗನಿಗೆ ಮತ್ತು  ಹೆಂಡತಿಗೆ ಕೆಲವು ದಿವಸಗಳ ಹಿಂದೆ ಡಾ|| ಯಲಪ್ಪ ತಂದೆ ಜಗಲೆಪ್ಪಾ ಸಾಲಿ, ಸಂಗಪ್ಫಾ ತಂದೆ ಗುಂಡಪ್ಪ ತಳಕೇರಿ, ಬಸವರಾಜ @ ಬಸು ಸರ್ದಾ ತಂದೆ ನಿಂಗಣ್ಣ ಮತ್ತು ಸಿದ್ದಣ್ಣ ಗೌಡ  ರವರು ನಾನು ಮನೆಯಲ್ಲಿ ಇರಲಾರದ ಸಮಯದಲ್ಲಿ ಮನೆಯ ಹತ್ತಿರ ಬಂದು ಜಾತಿ ನಿಂದನೆ ಮಾಡಿ ಊರಿನಲ್ಲಿ ರಾಜಕೀಯ ಮಾಡುತ್ತಿರಾ ಅಂತಾ ಅವಾಚ್ಯವಾಗಿ ನಿಂದನೆ ಮಾಡಿರುತ್ತಾರೆ ಅಂತಾ ಭೀಮಯ್ಯ ನವರು ಮಾನ್ಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರಿಂದ ಮಾನ್ಯ ನ್ಯಾಯಾಲಯದ ಆದೇಶದ ಮೇರೆಗೆ ಠಾಣೆ ಗುನ್ನೆ ನಂ: 35/2013 ಕಲಂ, 504, 506, 307, ಸಂಗಡ 120 ಐಪಿಸಿ ಮತ್ತು 3 (1) (10) ಎಸಸಿ/ಎಸಟಿ ಪಿಎ ಆಕ್ಟ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.

No comments: