Police Bhavan Kalaburagi

Police Bhavan Kalaburagi

Wednesday, March 27, 2013

GULBARGA DISTRICT REPORTED CRIMES

ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂದನ,
ಒಟ್ಟು 1,50,240 ರೂಪಾಯಿಗಳ ಮೌಲ್ಯದ ಮಧ್ಯ ವಶ
ಬ್ರಹ್ಮಪೂರ ಪೊಲೀಸ್ ಠಾಣೆ:ದಿನಾಂಕ:26/03/2013 ರಂದು ಸಾಯಂಕಾಲ 7-00 ಗಂಟೆಯ ಸುಮಾರಿಗೆ ಮಧ್ಯ ಮಾರಾಟ ಆಗುತ್ತಿರುವ ಬಗ್ಗೆ ಭಾತ್ಜಿ ಬಂದ ಮೇರೆಗೆ ಶ್ರಿ, ಎ.ಡಿ ಬಸಣ್ಣವರ್ ಡಿ.ಎಸ್.ಪಿ 'ಬಿ' ಉಪ-ವಿಭಾಗ ಗುಲಬರ್ಗಾ ರವರ ನೇತ್ರತ್ವದಲ್ಲಿ ಶ್ರೀ.ಶರಣಬಸವೇಶ್ವರ ಬಿ ಪೊಲೀಸ ಇನ್ಸಪೆಕ್ಟರ್ ಬ್ರಹ್ಮಪೂರ ಪೊಲೀಸ ಠಾಣೆ ಗುಲಬರ್ಗಾರವರು ಮತ್ತು ಅವರ ಸಿಬ್ಬಂದಿ ಜನರಾದ ಮಾರುತಿ ಎ.ಎಸ್.ಐ, ನಿಜಲಿಂಗಪ್ಪ, ಅಶೋಕ ರವರು ಬಹುಮನಿ ಹೊಟೇಲದಲ್ಲಿ ಮಧ್ಯ ಮಾರಾಟ ಮಾಡುತ್ತಿದ್ದ ಶ್ರೀನಿವಾಸ ತಂದೆ ನಾಗೇಂದ್ರ ರಾಸೂರ, ವಯ|| 33, || ಹೊಟೇಲ ಮ್ಯಾನೇಜರ, ಸಾ|| ಬಿದ್ದಾಪೂರ ಕಾಲೋನಿ ಗುಲಬರ್ಗಾ ಇತನಿಂದ ಓರಿಜಿನಲ್ ಚಾಯ್ಸ್ನ ಬಾಟಲಿಗಳು,  ಓಲ್ಡ ಟಾವರಿನ ಬಾಟಲಿಗಳು ಹೀಗೆ ಇತರೆ ಮಧ್ಯದ ಬಾಟಲಿಗಳು  ||ಕಿ|| 1,50,240/- ರೂಪಾಯಿ ಬೆಲೆ ಬಾಳುವುದವುಗಳು ಜಪ್ತಿ ಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ:38/2013 ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆ ಮತ್ತು 188 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ದರೋಡೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ ಶೃದ್ದಾನಂದ ತಂದೆ ರೇವಣಸಿದ್ದಪ್ಪ ಕಾಳಗಿ ವ:63 ಜಾ: ಲಿಂಗಾಯತ ಸಾ: ಮನೆ ನಂ. 39 ಜನತಾ ಗೃಹ ನಿರ್ಮಾಣ ಹೌಸಿಂಗ ಸೋಸಾಯಿಟಿ ಕರುಣೇಶ್ವರ ನಗರ ಗುಲಬರ್ಗಾ ರವರು ನಾನು ಮತ್ತು ನನ್ನ ಪತ್ನಿ ದಿನಾಂಕ:25/03/2013  ರಂದು ಬೆಳಿಗ್ಗೆ 8-25 ಕ್ಕೆ ಮನೆಯಿಂದ ಕರುಣೇಶ್ವರ ಬಸ್ ನಿಲ್ದಾಣದಕ್ಕೆ ಆಟೋ ಮೂಲಕ ಹೋಗುವ ಸಲುವಾಗಿ ರಾಮ ಮಂದಿರ ಜೇವರ್ಗಿ ಕಾಲನಿ ಮುಖ್ಯ ರಸ್ತೆಯ ಮುಖಾಂತರ ಹೊರಟಾಗ ಮೋಟಾರ ಸೈಕಲ್ ಮೇಲೆ ಇಬ್ಬರು ಕುಳಿತಿದ್ದು, ಕ್ಷಣಾರ್ಧದಲ್ಲಿ ಹಿಂದೆ ಕುಳಿತಿರುವ ವ್ಯಕ್ತಿ ನನ್ನ ಪತ್ನಿಯ ಕೊರಳಿನಲ್ಲಿದ್ದ ಚಿನ್ನದ ಮಾಂಗಲ್ಯ ಸರ್ 15 ಗ್ರಾಂ ಮತ್ತು ಚಿನ್ನದ ಲಾಕೇಟ ಸರ್ 14 ಗ್ರಾಂ  ಕಿತ್ತುಕೊಂಡು ಮೋಟರ ಸೈಕಲ್ ನಂಬರ ನೋಡುವಷ್ಟರಲ್ಲಿ ಅತೀವೇಗದಿಂದ ಮೋಟಾರ ಸೈಕಲ್ ಚಲಾಯಿಸಿದರು.ಬಂಗಾರದ ಒಟ್ಟು ಆಭರಣಗಳ ಕಿಮ್ಮತ್ತು 75,000/- ರೂಪಾಯಿಗಳು ಆಗಬಹುದು ಅಂತಾ ಶೃದ್ದಾನಂದ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 46/2013 ಕಲಂ. 392 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: