Police Bhavan Kalaburagi

Police Bhavan Kalaburagi

Thursday, March 28, 2013

GULBARGA DISTRICT REPORTED CRIMES


ಅತ್ಯಾಚಾರ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ದಿನಾಂಕ:27/03/2013 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ಝಳಕಿ (ಕೆ) ಗ್ರಾಮದ 35 ವರ್ಷದ ಗೃಹಿಣಿಯು ಅಣ್ಣಪ್ಪ ಐರೊಡಗಿ ರವರ ಹೊಲದ ಮೆಟಗಿಯ ಹಿಂದುಗಡೆಯಿಂದ ಹೋಗುತ್ತಿದ್ದಾಗ ಶಿವಪ್ಪ ತಂದೆ ಅಣ್ಣಪ್ಪ ಐರೊಡಗಿ ಸಾ:ಹಡಲಗಿ ಇತನು ಬಂದು ಜಬರ ದಸ್ತಿಯಿಂದ ಆ ಗೃಹಿಣೆ ಸಂಗಡ  ತೆಕ್ಕೆ ಕುಸ್ತಿಗೆ ಬಿದ್ದು, ನೆಲಕ್ಕೆ ಕೆಡವಿ  ಜಬರಿ ಸಂಭೋಗ ಮಾಡಿರುತ್ತಾನೆ.ಈ ವಿಷಯ ಯಾರಿಗಾದರೂ ಹೇಳಿದರೆ ನೀನ್ನ ಜೀವ ಸಹಿತ ಬೀಡುವುದಿಲ್ಲಾ ಅಂತಾ ಅವಾಚ್ಯವಾಗಿ ಬೈದು ಜಾತಿ ನಿಂದನೆ ಮಾಡಿರುತ್ತಾನೆ ಅಂತಾ ಝಳಕಿ (ಕೆ) ಗ್ರಾಮದ ಅತ್ಯಚಾರಕ್ಕೊಳಗಾದ ಗೃಹಿಣಿಯೊಬ್ಬರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 25/2013 ಕಲಂ: 341,376,504,506 ಐಪಿಸಿ ಮತ್ತು 3 (1) (10) ಎಸಸಿ/ಎಸಸಿ ಪಿಎ ಆಕ್ಟ 1989  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ ಠಾಣೆ:ದಿನಾಂಕ:27-03-2013 ರಂದು ಮಧ್ಯಾಹ್ನ 1-30 ಗಂಟೆಗೆ ಸುಮಾರಿಗೆ ನಾನು ಹೋಳಿ ಹಬ್ಬ ಆಚರಣೆ ಮಾಡಿ ಮನೆಗೆ ಹೋಗುತ್ತಿರುವಾಗ  ಕಮಲಾಪೂರ ಗ್ರಾಮದ ನಗರೇಶ್ವರ ಪುಂಡಲಿಕ ಮಾಸ್ತರ, ಮತ್ತು ಭೂನೇಶ್ವರ ರವರು ನನಗೆ ಅವಾಚ್ಯವಾಗಿ  ಬೈದು ಬಡಿಗೆಯಿಂದ ಹೋಡೆ ಬಡೆ ಮಾಡಿ ಹಾಗೂ ಬೀಡಿಸಲು ಬಂದ ಸತೀಷ ಇತನಿಗೂ ಸಹ   ಹೋಡೆ ಬಡೆ ಮಾಡಿರುತ್ತಾರೆ ಅಲ್ಲದೇ ಲಲಿತಾಬಾಯಿ ಇತಳಿಗೆ ಕೂದಲು ಹಿಡಿದು ಎಳೆದಾಡಿ ಹೋಡೆ ಬಡೆ ಮಾಡಿರುತ್ತಾರೆ ಅಂತಾ ನವಿಂದ್ರ ತಂದೆ ಗುಂಡಪ್ಪಾ ದೇವರಮನಿ ಸಾ|| ಕಮಲಾಪೂರ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:25/2013 ಕಲಂ.341.323.324.354.504.506 ಸಂಗಡ 34 ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ,
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ವಿಜಯಕುಮಾರ ತಂದೆ ಅಮಾಂತಪ್ಪ ನಾಟೀಕಾರ                                                    ಉ:ಇಂಜನಿಯರ್  ಸಾ:ಮಾಣಿಕೇಶ್ವರಿ ಗುಡಿ ಎದುರು ಚೌಡೇಶ್ವರಿ  ಕಾಲೋನಿ ಗುಲಬರ್ಗಾರವರು  ದಿನಾಂಕ: 26-03-2013 ರಂದು  ರಾತ್ರಿ 9=45 ಗಂಟೆಗೆ  ಫಿರ್ಯಾದಿಯು ತನ್ನ ಮೋಟಾರ ಸೈಕಲ್ ನಂ:ಕೆಎ-32 ಎಲ್ 2356 ನೇದ್ದರ ಮೇಲೆ ರೈಲ್ವೆ ಸ್ಟೇಶನಗೆ ಹೋಗುವ  ಕುರಿತು ಲಾಲಗೇರಿ ಕ್ರಾಸ್ ದಿಂದ ಎಸ್.ವಿ.ಪಿ.ಸರ್ಕಲ್ ಕಡೆಗೆ ಬರುತ್ತಿದ್ದಾಗ ಎನ್.ವಿ. ಕಾಲೇಜ್ ಕಾಂಪ್ಲೇಕ್ಸನಲ್ಲಿರುವ ಮೇಗಾ ದರ್ಶನಿ ಹೊಟೇಲ ಎದುರು ರೋಡಿನ ಮೇಲೆ ಹಿಂದಿನಿಂದ ಮೋಟಾರ ಸೈಕಲ್ ನಂ:ಕೆಎ 32 ಇಸಿ  5410 ರ ಸವಾರ ವಿರೇಶ ಇತನು ತನ್ನ ಮೋಟಾರ ಸೈಕಲ್ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮೋಟಾರ ಸೈಕಲ್ ಕ್ಕೆ   ಡಿಕ್ಕಿ ಪಡಿಸಿ ಅಪಘಾತಮಾಡಿ ಭಾರಿ ಗಾಯಗೊಳಿಸಿ ತಾನು ಗಾಯಹೊಂದ್ದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ:21/2013 ಕಲಂ: 279,338  ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ಶ್ರೀ, ವಿಠಲ್ ತಂದೆ ಗುಂಡಪ್ಪಾ ಕೋಹಿರ ಸಾ|| ಐನೊಳ್ಳಿ ತಾ|| ಚಿಂಚೋಳಿ ರವರು ನಾನು ಸೇಂಟ್ರಿಂಗ್ ಕೆಲಸಕ್ಕೆಂದು ಚಿಂಚೋಳಿಗೆ ಬಂದು ಕೆಲಸ ಮುಗಿಸಿಕೊಂಡು ಸಿಮೆಂಟ್ ಲೋಡ ಇರುವ ಲಾರಿ ನಂ. ಎಮ್.ಎಚ-12, ಹೆಚಡಿ-7321 ನೇದ್ದರಲ್ಲಿ ರಾತ್ರಿ 8-00 ಗಂಟೆ ಸುಮಾರಿಗೆ ನಾನು ಮತ್ತು ನನ್ನ ಪರಿಚಯದವನಾದ ಅಕ್ರಮ್ ತಂದೆ ಅಮೀರ ಅಲಿ , ಜಾಫರಖಾನ ಪಠಾಣ, ಖಾಜಾ ಚಿಟಗುಪ್ಪಾ , ಅರ್ಜುನ ಅಣ್ಣಾಜಿ, ಮನೋಜ ಲೊಂಡೆ, ಎಲ್ಲರೂ ಸದರಿ ಲಾರಿ ಕ್ಯಾಬಿನಲ್ಲಿ ಕುಳಿತುಕೊಂಡು ಹೋರಟಿದ್ದು, ಲಾರಿಯು ಚಿಂಚೋಳಿಯ ಹೊಸ ಊರ ಕ್ರಾಸ್ ದಾಟಿದ ನಂತರ ಲಾರಿ ಚಾಲಕನಾದ ಕಾಶಿನಾಥ ತಂದೆ ಮಲ್ಲೇಶಿ ಸೀರೂರ ಎಂಬುವವನು ಅತೀವೇಗದಿಂದ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ ಪ್ರೀನ್ಸ್ ದಾಬಾ ಸಮೀಪ ಪಲ್ಟಿ ಮಾಡಿದನು. ಓಳಗಡೆ ಕುಳಿತವರಿಗೆ ಹಾಗೂ ಲಾರಿ ಕ್ಲಿನರ ಮತ್ತು ಚಾಲಕನಿಗೆ ಸಾದಾ ಭಾರಿ ರಕ್ತ ಮತ್ತು ಗುಪ್ತಗಾಯಗಳಾಗಿರುತ್ತವೆ. ಅಕ್ರಮ ತಂದೆ ಅಮೀರ ಅಲಿ ಕೂಸಗಿ ವ:40 ವರ್ಷ ಸಾ: ನಾಗಾಯಿದ್ಲಾಯಿ ತಾ:ಚಿಂಚೋಳಿ ಎಂಬುವವನಿಗೆ ಉಪಚಾರ ಕುರಿತು ಆಸ್ಪತ್ರೆಗೆ ಕರೆದುಕೊಂಡು ಹೊಗುವಾಗ ಮಾರ್ಗ ಮದ್ಯದಲ್ಲಿ ಮೃತ ಪಟ್ಟಿರುತ್ತಾನೆ. ಅಂತಾ ವಿಠಲ್ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 62/2013 ಕಲಂ. 279, 337, 338, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: