Police Bhavan Kalaburagi

Police Bhavan Kalaburagi

Sunday, March 10, 2013

GULBARGA DISTRICT REPORTED CRIMES


ಕಳ್ಳತನ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ದಿನಾಂಕ:09-03-2013 ರಂದು ರಾತ್ರಿ 10-00 ಗಂಟೆಯ ಸುಮಾರಿಗೆ ನಾವು ಮನೆಯರೆಲ್ಲರೂ ಊಟ ಮಾಡಿಕೊಂಡು ಮಲಗಿಕೊಂಡಿದ್ದು ರಾತ್ರಿ 11-45 ಗಂಟೆಯ ಸುಮಾರಿಗೆ ಮನೆಯಲ್ಲಿನ ಬಿಸಿ ವಾತಾವರಣದಿಂದ ಮತ್ತು ಸೊಳ್ಳೆಗಳಿಂದ ಮನೆಯ ಮಾಳಿಗೆ ಮೇಲೆ ಮಲಗಿಕೊಳ್ಳಲು ಹೋಗಿರುತ್ತಾರೆ. ಮಧ್ಯರಾತ್ರಿ 00-10 ಗಂಟೆಯಿಂದ ನಸುಕಿನ ವೇಳೆ 5-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಮನೆಯಲ್ಲಿರುವ ಅಲಮಾರ ಚಾವಿ ಮುರಿದು ಆಲಮಾರಿಯಲ್ಲಿಟ್ಟಿದ್ದ  ನಗದು ಹಣ 1,90,000=00 ರೂಪಾಯಿಗಳು ತೆಗೆದುಕೊಂಡು,   ಮನೆಯಲ್ಲಿರುವ ಹಳೆಯ ಕಟ್ಟಿಗೆಯ ಪೆಟ್ಟಿಗೆಯನ್ನು ತಗೆದುಕೊಂಡು ಹೋಗಿ ಚಂದ್ರಶಾ ಕಾಬಾ ಇವರ ಹೊಲದಲ್ಲಿ ಸದರಿ ಪೆಟ್ಟಿಗೆ ಒಡೆದು ಅದರಲ್ಲಿಟಿದ್ದ ಬಂಗಾರದ ಆಭರಣಗಳು ಬೆಳ್ಳಿಯ ಸಾಮಾನುಗಳು, ಮತ್ತು ಲಾವಾ ಕಂಪನಿಯ ಮೊಬೈಲ್ ಹೀಗೆ ಒಟ್ಟು 2,08150=00 ರೂಪಾಯಿಗಳ ಮೌಲ್ಯದ್ದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಬಸವರಾಜ ತಂದೆ ಶಿವಪ್ಪಾ ಹರಳಯ್ಯ ಸಾ|| ಹೊನ್ನ ಕಿರಣಗಿ ಗ್ರಾಮ ತಾ|| ಜಿ|| ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 32/2013 ಕಲಂ, 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: