:: ಗುಲಬರ್ಗಾ ಜಿಲ್ಲಾ ಪೊಲೀಸರ ಕಾರ್ಯಚರಣೆ:
:: 4 ಜನ ಕುಖ್ಯಾತ ಅಂತರ ರಾಜ್ಯ ಕಳ್ಳರ ಬಂಧನ::
ಸುಲಿಗೆ, ಸರಗಳ್ಳತನ, ಕನ್ನಾ ಕಳವು, ಮೋಟಾರ ಸೈಕಲ್ ಗಳು ಮತ್ತು ಲಾರಿ ಕಳ್ಳತನ ಮಾಡಿದ 4 ಜನ ಆರೋಪಿತರ ಬಂಧನ, ಬಂಧಿತರಿಂದ 3,000,00 ಲಕ್ಷ ಮೌಲ್ಯದ 100 ಗ್ರಾಂ ಬಂಗಾರದ ಅಭರಣಗಳು, ನಗದು ಹಣ 6,50,000/- ರೂಪಾಯಿಗಳು, 3 ಮೋಟಾರ ಸೈಕಲಗಳು, ಹಾಗೂ ಲಾರಿ ಹೀಗೆ ಒಟ್ಟು 40,25,000/- ರೂಪಾಯಿಗಳ ಮಾಲು ಜಪ್ತಿ.
ಗುಲಬರ್ಗಾ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ವರದಿಯಾದ ಪ್ರಕರಣಗಳ ಆರೋಪಿಗಳ ಪತ್ತೆ ಕುರಿತು ಮಾನ್ಯ ಶ್ರೀ ಎನ್. ಸತೀಶಕುಮಾರ್. ಐ.ಪಿ.ಎಸ್.. ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಮಾನ್ಯ ಶ್ರೀ ಕಾಶಿನಾಥ ತಳಕೇರಿ ಅಪರ ಪೊಲೀಸ್ ಅಧೀಕ್ಷಕರು, ಗುಲಬರ್ಗಾರವರ ಸೂಕ್ತ ಮಾರ್ಗದರ್ಶನದಲ್ಲಿ, ಶ್ರೀ ಎ.ಡಿ.ಬಸಣ್ಣನವರ ಡಿ.ಎಸ್.ಪಿ “ಬಿ” ಉಪ-ವಿಭಾಗ ಗುಲಬರ್ಗಾರವರ ನೇತ್ರತ್ವದಲ್ಲಿ ಚೌಕ ಠಾಣೆಯ ಗುನ್ನೆಯಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಸದರಿ ತಂಡದಲ್ಲಿ ಶ್ರೀ,ಎಸ್. ಎಸ್. ಹುಲ್ಲೂರ, ಪೊಲೀಸ್ ಇನ್ಸಪೇಕ್ಟರ ಡಿಸಿಐಬಿ ಘಟಕ ಗುಲಬರ್ಗಾ, ಹಾಗೂ ಶ್ರೀ ಬಿ.ಬಿ ಭಜಂತ್ರಿ ಪೊಲೀಸ್ ಇನ್ಸಪೇಕ್ಟರ ಚೌಕ ಠಾಣೆ, ಶ್ರೀ, ಜೆ.ಎಚ.ಇನಾಮದಾರ ಪೊಲೀಸ್ ಇನ್ಸಪೇಕ್ಟರ ಸ್ಟೇಶನ ಬಜಾರ ಠಾಣೆ, ಬ್ರಹ್ಮಪೂರ ಠಾಣೆ ಶರಣಬಸವೇಶ್ವರ ಭಜಂತ್ರಿ ಪೊಲೀಸ್ ಇನ್ಸಪೇಕ್ಟರ, ಪಿ.ಎಸ.ಐ ಶ್ರೀ ಮಹಾಂತೇಶ ಡಿಸಿಐಬಿ ಘಟಕ ಗುಲಬರ್ಗಾ, ಪಿ.ಎಸ.ಐ ನಟರಾಜ ಲಾಡೆ, ವಿಜಯಕುಮಾರ ಪಿಎಸ.ಐ ಡಿಎಸಬಿ ಘಟಕ ರವರು ಹಾಗೂ ಡಿಸಿಐಬಿ ಘಟಕದ ಸಿಬ್ಬಂದಿಯವರಾದ ನಿಂಗಪ್ಪಾ, ಬಸವರಾಜ, ದತ್ತಾತ್ರಯ, ಎ.ಎಸ್. ಐ ರವರು ಹಾಗೂ ಶಿವಯೋಗಿ, ಅಣ್ಣಪ್ಪಾ, ಅಣ್ಣರಾಯ, ಲಕ್ಕಪ್ಪಾ, ಮಲ್ಲಣ್ಣಾ, ಪ್ರಕಾಶ, ಸುರೇಶ, ವಿಜಯಕುಮಾರ, ಅಶೋಕ, ಚಾಲಕರಾದ ಎ.ಪಿ.ಸಿ ವೀರಣ್ಣಾ, ಎ.ಎಚ.ಸಿ. ಶಿವರಾಜ, ರವರ ತಂಡ, ಮತ್ತು ಚೌಕ ಠಾಣೆಯ ಸಿಬ್ಬಂದಿಯವರಾದ ಶಿವಕುಮಾರ, ಸಿದ್ರಾಮ ಕಣ್ಣಿ, ಶಿವಾನಂದ ಸ್ವಾಮಿ, ಮಹಾಂತೇಶ, ವಿಶ್ವನಾಥ, ಮೋಹನ ರವರು, ಮತ್ತು ಅಶೋಕ ಕುಮಾರ, ಚನ್ನೆವಿರೇಶ ರವರು ಚೌಕ ಪೊಲೀಸ್ ಠಾಣೆ ವ್ಯಾಪ್ತಿಯ ಕಾಪೋರೇಶನ ಬ್ಯಾಂಕಿನಿಂದ ಹಣ ಕಳ್ಳತನ ಮಾಡಿದ ಆರೋಪಿತರು ವಾಡಿ ರೇಲ್ವೆ ಸ್ಟೇಶನ ಹತ್ತಿರ ಇರುವಿಕೆ ಬಗ್ಗೆ ಖಚಿತ ಭಾತ್ಮಿ ಮೇರೆಗೆ ಇಂದು ದಿನಾಂಕ:12-03-2013 ರಂದು ಬೆಳಿಗಿನ ಜಾವ ಆರೋಪಿತರಾದ ಬಸವರಾಜ @ ಬಸು @ ಬಿಡಿ ಬಸ್ಯಾ ತಂದೆ ಮರೆಪ್ಪಾ ವಯಾ|| 22. ಉ|| ಲಾರಿ ಕ್ಲೀನರ್, ಸಾ|| ಬಲರಾಮ ಚೌಕ ವಾಡಿ, 2) ಅನೀಲ @ ಅನ್ಯಾ ತಂದೆ ರಾಜುಲಾಲ ಶ್ರಾವಣ ವಯಾ|| 23 , ಉ|| ಪೇಟಿಂಗ್, ಸಾ|| ರೇಲ್ವೆ ಕಾಲೋನಿ ವಾಡಿ, 3) ಮನೋಜ @ ಪಿಂಟ್ಯಾ ತಂದೆ ರಾಯಗೊಂಡ ವಯಾ|| 24 ಉ|| ಗೌಂಡಿ ಕೆಲಸ, ಸಾ|| ಕೊಂಚೂರ ಪಟೇಲ್ ಬಿಲ್ಡಿಂಗ್ ವಾಡಿ, 4) ಕೋಮು @ ಅನೀಲ ತಂದೆ ಮೋತಿಲಾಲ ರಾಠೋಡ ವಯಾ|| 22, ಸಾ|| ತಲಾಬ ತಾಂಡ ವಾಡಿ ರವರನ್ನು ಕಳ್ಳತನ ಮಾಡಿದ ಮೋಟಾರ ಸೈಕಲ ಸಮೇತ ದಸ್ತಿಗಿರಿ ಮಾಡಿ ಕೂಲಂಕೂಶವಾಗಿ ವಿಚಾರಣೆಗೊಳಪಡಿಸಿದಾಗ ಚೌಕ ಪೊಲೀಸ್ ಠಾಣೆಯ 5 ಪ್ರಕರಣಗಳು, ಸ್ಟೇಶನ ಬಜಾರ ಠಾಣೆಯ 4 ಪ್ರಕರಣಗಳು, ಚಿಂಚೊಳಿ ಠಾಣೆಯ 6 ಪ್ರಕರಣಗಳು, ವಾಡಿ ಠಾಣೆಯ 1 ಪ್ರಕರಣ, ಚಿತ್ತಾಪೂರ ಠಾಣೆಯ-1 ಪ್ರಕರಣ, ಜೇವರ್ಗಿ ಠಾಣೆಯ-1 ಪ್ರಕರಣ, ಬ್ರಹ್ಮಪೂರ ಠಾಣೆಯ-1, ಮಹಾತ್ಮ ಬಸವೇಶ್ವರ ಠಾಣೆಯ-3 ಪ್ರಕರಣಗಳು, ರಾಘವೇಂದ್ರ ನಗರ ಠಾಣೆಯ-1 ಪ್ರಕರಣ, ವಿಶ್ವವಿದ್ಯಾಲಯ ಠಾಣೆಯ 1- ಪ್ರಕರಣ ಹೀಗೆ ಒಟ್ಟು 24 ಪ್ರಕರಣಗಳಲ್ಲಿ ಸುಲಿಗೆ, ಕಳ್ಳತನದಲ್ಲಿ ಭಾಗಿಯಾಗಿರುವದು ತನಿಖೆಯಿಂದ ತಿಳಿದು ಬಂದಿರುತ್ತದೆ.ಬಂಧಿತ ಆರೋಪಿತರಿಂದ ನಗದು ಹಣ 6,50,000/- ರೂಪಾಯಿಗಳು 3,00,000-00 ಮೌಲ್ಯದ 100 ಗ್ರಾಂ ಬಂಗಾರದ ಆಭರಣಗಳು, 1- ಲಾರಿ. 3 ಮೋಟಾರ ಸೈಕಲಗಳ ಮೌಲ್ಯ 30,75,000-00 ಹೀಗೆ ಒಟ್ಟು 40,25,000/- ಮೌಲ್ಯದ ಮಾಲು ಬಂಧಿತ ಆರೋಪಿತರಿಂದ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿತರು ಬ್ಯಾಂಕಗಳ ಮುಂದೆ ಹೊಂಚು ಹಾಕಿ ಕುಳಿತು ಬ್ಯಾಂಕಿನಿಂದ ಹಣ ತರುವವರ ಮೇಲೆ ನಿಗಾವಹಿಸಿ, ಹೊಂಚುಹಾಕಿ ಹಿಂಬಾಲಿಸಿ ಸುಲಿಗೆ ಮಾಡಿ, ಕಳ್ಳತನ ಮಾಡಿದ ಮೋಟಾರ ಸೈಕಲಗಳನ್ನು ಉಪಯೋಗಿಸಿ ನಂತರ ಬಿಸಾಕುವ ಹಾಗೂ ಕುಡಿದ ಅಮಲಿನಲ್ಲಿ ಸಮಯ ಸಾಧಿಸಿ ಹಣ ಹಾಗೂ ಬಂಗಾರ ದೋಚುವ ಪ್ರವ್ರತ್ತಿವುಳ್ಳರಾಗಿರುತ್ತಾರೆಂಬುದು ತನಿಖೆಯಿಂದ ತಿಳಿದು ಬಂದಿರುತ್ತದೆ.
ಗುಲಬರ್ಗಾ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಭಾಗಿಯಾದ 4 ಜನ ಆರೋಪಿತರನ್ನು ಪತ್ತೆ ಮಾಡಿದ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡಕ್ಕೆ ಮಾನ್ಯ ಶ್ರೀ ಎನ್. ಸತೀಷಕುಮಾರ ಐ.ಪಿ.ಎಸ್,. ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು ನಗದು ಬಹುಮಾನ ಘೋಷಿಸಿರುತ್ತಾರೆ.
*****
No comments:
Post a Comment