Police Bhavan Kalaburagi

Police Bhavan Kalaburagi

Saturday, March 30, 2013

GULBARGA DISTRICT


:: ಎಮ್.ಬಿ ನಗರ ವೃತ್ತ ಪೊಲೀಸರ ಕಾರ್ಯಾಚರಣೆ ::

:: ಶರಣಬಸಪ್ಪ ಚಕ್ಕಿ ಪೊಲೀಸ ಕಾನ್ಸಟೇಬಲ್ ಕೊಲೆಗಾರರ ಬಂಧನ ::
          ದಿನಾಂಕ:23-24/10/2012 ರಂದು ರಾತ್ರಿ ವೇಳೆಯಲ್ಲಿ ಅಬಕಾರಿ ಮತ್ತು ಲಾಟರಿ ನಿಷೇದ ದಳದ ವಿಶೇಷ ಪೊಲೀಸ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶರಣಬಸಪ್ಪ ಚಕ್ಕಿ ಪೊಲೀಸ ಕಾನ್ಸಟೇಬಲ್ ಇವನನ್ನು ಬ್ರಹ್ಮಪುರ ಪೊಲಿಸ ಠಾಣೆಯ ಹಿಂಭಾಗದಲ್ಲಿ ಮಾರಾಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದ ಗಂಭಿರತೆ ಮತ್ತು ಪತ್ತೆ ಮಾಡಲು ಶ್ರೀ ಎನ್.ಸತೀಶಕುಮಾರ ಐಪಿಎಸ್ ಜಿಲ್ಲಾ ಪೊಲೀಸ ಅಧೀಕ್ಷಕರು ಗುಲಬರ್ಗಾರವರು ಒಂದು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಈ ತನಿಖಾ ತಂಡದಲ್ಲಿ ಶ್ರೀ ಎಸ್.ಅಸ್ಲಂ ಭಾಷ ಸಿಪಿಐ ಎಂ.ಬಿ ನಗರ ವೃತ್ತ ಗುಲಬರ್ಗಾ, ಶ್ರೀ ಶರಣಬಸವೇಶ್ವರ ಭಜಂತ್ರಿ ಪಿಐ ಬ್ರಹ್ಮಪುರ ಪೊಲೀಸ ಠಾಣೆ, ಶ್ರೀ ಶ್ರೀಮಂತ ಇಲ್ಲಾಳ ಪಿ.ಎಸ್.ಐ ಎಂ.ಬಿ ನಗರ ಠಾಣೆ, ಶ್ರೀ ಗೋಪಾಲ ರಾಠೋಡ ಪಿ.ಎಸ್.ಐ ವಿಶ್ವವಿದ್ಯಾಲಯ ಪೊಲೀಸ ಠಾಣೆ ಹಾಗೂ ಸಿಬ್ಬಂದಿಯವರಾದ ಮಾರುತಿ ಎ.ಎಸ್.ಐ, ವೇದರತ್ನಂ, ಶಿವಪ್ಪ ಕಮಾಂಡೋ, ಪ್ರಭಾಕರ, ಬಲರಾಮ, ಅರ್ಜುನ, ಮಸೂದ, ಶ್ರೀನಿವಾಸರೆಡ್ಡಿ, ಸಿದ್ರಾಮಯ್ಯಸ್ವಾಮಿ, ಗಂಗಾಧರ ಸ್ವಾಮಿ, ಶಿವಶರಣಪ್ಪ, ಮಶಾಕ, ಅಶೋಕ, ರಾಜಕುಮಾರ, ಸುಭಾಷ, ವೀರಶೇಟ್ಟಿ ರವರು ಕಾರ್ಯಚರಣೆ ನಡೆಸಿದ್ದು ರಹಸ್ಯವಾಗಿದ್ದ ಈ ಕೊಲೆ ಪ್ರಕರಣವನ್ನು ಭೇದಿಸಿ ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಆರೋಪಿತರಾದ        1) ಲಕ್ಷ್ಮಣ ತಂದೆ ಮಲ್ಲಪ್ಪ ಇಂಡಿ ಸಾಃ ಕರಜಗಿ ತಾಃ ಅಕ್ಕಲಕೊಟ, 2) ಶಿವಪ್ಪಾ ತಂದೆ ಗುರುಶಾಂತಪ್ಪಾ ಇಂಡಿ ಸಾಃ ಗುಲಬರ್ಗಾ, 3)  ನಾಗರಾಜ @ ನಾಗಪ್ಪಾ ಇಂಡಿ, 4)  ಚನ್ನಮಲ್ಲಪ್ಪ ತಂದೆ ಶಿವಶರಣಪ್ಪ ಕಿರಣಗಿ ಸಾಃ ಗುಲಬರ್ಗಾ ಇವರನ್ನು ಗುಲಬರ್ಗಾ ಮತ್ತು ಅಕ್ಕಲಕೊಟ ತಾಲೂಕಿನ ಕರಜಗಿ ಗ್ರಾಮ ಕಡೆ ದಾಳಿ ಮಾಡಿ ದಸ್ತಗಿರಿ ಮಾಡಿರುತ್ತಾರೆ.
          ಈ ಕೊಲೆಗೆ ಕಾರಣ ಕೊಲೆಯಾದ ಶರಣಬಸಪ್ಪ ಚಕ್ಕಿ ಪೊಲಿಸ ಕಾನ್ಸಟೇಬಲ್ ಇವನು 2001 ನೇ ಸಾಲಿನಲ್ಲಿ ಮಂಜುಳಾ ಸಾಃಸೇಡಂ ಎಂಬುವವಳೊಂದಿಗೆ ವಿವಾಹವಾಗಿದ್ದು, ತದನಂತರ 2003 ನೇ ಇಸವಿಯಲ್ಲಿ ತನ್ನ ಸೊದರ ಮಾವನಾದ ಮಲ್ಲಪ್ಪ ಇಂಡಿ ಮಗಳಾದ ಕವಿತಾಳೊಂದಿಗೆ ಗುಡ್ಡಾಪುರ ಗ್ರಾಮದ ಧಾನಮ್ಮ ದೇವಸ್ಥಾನದಲ್ಲಿ 2 ನೇ ಮದುವೆಯಾಗಿದ್ದು, 2 ತಿಂಗಳ ಕಾಲ ಕವಿತಾಳೊಂದಿಗೆ ಸಂಸಾರ ಮಾಡಿ ನಂತರ ಒಬ್ಬರಿಗೊಬ್ಬರಿಗೆ ಕಲಹ ಉಂಟಾಗಿ ತನ್ನ ತವರು ಮನೆಗೆ ಹೋಗಿದ್ದು, ನಂತರ ಅವಳು, ಕವಿತಾಳ ತಂದೆ ಹಾಗೂ ಕರಜಗಿ ಗ್ರಾಮದವರು ಹಲವಾರು ಸಲ ಶರಣಬಸಪ್ಪ ಚಕ್ಕಿ ಮತ್ತು ಅವನ ತಾಯಿ ಇತರರೊಂದಿಗೆ ಮಾತುಕತೆ ಮಾಡಿ ಕವಿತಾಳನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿ ಹೇಳಿದರು ಸಹಿತ ಶರಣಬಸಪ್ಪ ಚಕ್ಕಿ ಕವಿತಾಳನ್ನು ಕರೆದುಕೊಂಡಿರುವದಿಲ್ಲ. ಇದೇ ದ್ವೇಷವನ್ನು ಸಾಧಿಸುತ್ತಾ ಮಲ್ಲಪ್ಪ ಇಂಡಿ ಇತನು ತನ್ನ ಮನೆಯ ಸದಸ್ಯರೊಂದಿಗೆ ಈ ವಿಷಯವನ್ನು ಚರ್ಚಿಸುತ್ತಾ ನನ್ನ ಮಗಳ ಜೀವನ ಹಾಳು ಮಾಡಿ ಮೊಸ ಮಾಡಿ ಮದುವೆ ಮಾಡಿಕೊಂಡು ಮೊದಲನೇಯ ಹೆಂಡತಿಯನ್ನು ಬಿಟ್ಟು ತನ್ನ ಮಗಳನ್ನು ಇಟ್ಟುಕೊಂಡು ಸಂಸಾರ ಮಾಡಿಕೊಂಡು ಹೋಗುತ್ತೇನೆ ಅಂತಾ ಹೇಳಿ ಮೊಸ ಮಾಡಿರುತ್ತಾನೆ. ಇದಕ್ಕೆ ಹೇಗಾದರೂ ಮಾಡಿ ಪ್ರತಿಕಾರ ತೀರಿಸಿಕೊಳ್ಳಬೇಕು ಎಂದು ದ್ವೇಷ ಸಾಧಿಸುತ್ತಾ ಬಂದು ಮಲ್ಲಪ್ಪ ಇಂಡಿ ಮತ್ತು ಇತನ ಅಣ್ಣನಾದ ಶಿವಪ್ಪ ಇಂಡಿ, ಅಣ್ಣನ  ಮಗನಾದ ನಾಗರಾಜ @ ನಾಗಪ್ಪ ಇಂಡಿ ಮತ್ತು ಶರಣಬಸಪ್ಪ ಚಕ್ಕಿಯ ಆತ್ಮಿಯ ಗೆಳೆಯನಾದ ಚನ್ನಮಲ್ಲಪ್ಪ ಇವನನ್ನು ಸೇರಿಸಿಕೊಂಡು ಮಲ್ಲಪ್ಪಾ ತಂದೆ ಗುರುಶಾಂತಪ್ಪಾ ಇಂಡಿ, ಶಿವಪ್ಪಾ ತಂದೆ ಗುರುಶಾಂತಪ್ಪಾ ಇಂಡಿ, ನಾಗರಾಜ @ ನಾಗಪ್ಪಾ ಇಂಡಿ ಇವರು ಅಪರಾಧಿಕ ಒಳ ಸಂಚನ್ನು ರಚಿಸಿ ಮಲ್ಲಪ್ಪ ಇಂಡಿ ಮಗನಾದ ಲಕ್ಷ್ಮಣ ಇಂಡಿಯು ಇವರ ಮಾರ್ಗದರ್ಶನ ಮತ್ತು ಸೂಚನೆಯಂತೆ ಹಾಗು ಸಹಾಯದೊಂದಿಗೆ ಶರಣಬಸಪ್ಪ ಚಕ್ಕಿಯನ್ನು ಮಾರಕಾಸ್ತ್ರದಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುತ್ತಾನೆ.           ನಿಗೂಢವಾಗಿದ್ದ ಈ ಕೊಲೆ ರಹಸ್ಯ ಮತ್ತು ಆರೋಪಿತರನ್ನು ಮೇಲ್ಕಂಡ ತನಿಖಾ ತಂಡವು ಬೇಧಿಸುವಲ್ಲಿ ಮತ್ತು ಆರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುತ್ತಾರೆ. ಈ ತನಿಖಾ ತಂಡವು ಶ್ರೀ ಎನ್.ಸತೀಶಕುಮಾರ ಐಪಿಎಸ್ ಜಿಲ್ಲಾ ಪೊಲೀಸ ಅಧೀಕ್ಷಕರು, ಶ್ರೀ ಕಾಶಿನಾಥ ತಳಕೇರಿ ಅಪರ ಎಸ್.ಪಿ, ಶ್ರೀ ತಿಮ್ಮಪ್ಪ ಡಿ.ಎಸ್.ಪಿ ಗ್ರಾಮಿಣ, ಶ್ರೀ ಎ.ಡಿ ಬಸಣ್ಣನವರ ಡಿ.ಎಸ್.ಪಿ (ಬಿ) ಉಪವಿಭಾಗ ಇವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಪತ್ತೆ ಮಾಡಲಾಗಿದೆ.  

No comments: