Police Bhavan Kalaburagi

Police Bhavan Kalaburagi

Friday, March 15, 2013

GULBARGA DISTRICT


ಪತ್ರಿಕಾ ಪ್ರಕಟಣೆ
ಇತ್ತಿಚಿಗೆ ಜರುಗಿದ ಮಹಾನಗರ ಪಾಲಿಕೆಯ ಚುನಾವಣೆ ಹಿನ್ನಲೆಯಲ್ಲಿ ಸುಗಮ ಸಂಚಾರ ದೃಷ್ಠಿಯಿಂದ ಹಾಗೂ ರಸ್ತೆ ಕಾಮಗಾರಿ ಇದ್ದುದ್ದರಿಂದ ಜಿಲ್ಲಾ ಸರ್ಕಾರಿ ಆಸ್ಪತ್ರೆ ವೃತ್ತದಿಂದ ಪೊಲೀಸ ಭವನದ ಮೂಲಕ ಹಾದು ಹೋಗುವ ಮಾರ್ಗವನ್ನು ತಾತ್ಕಾಲಿಕವಾಗಿ ಸಾರ್ವಜನಿಕರಿಗೆ ಉಪಯೋಗಿಸಲು ಬಂದ ಮಾಡಲಾಗಿತ್ತು. ಸದ್ಯಕ್ಕೆ ಮಹಾನಗರ ಪಾಲಿಕೆ ಚುನಾವಣೆಗಳು ಶಾಂತಿಯುತವಾಗಿ ಮುಕ್ತಾಯಗೊಂಡಿದ್ದರಿಂದ ಮತ್ತೆ ಈ ಮಾರ್ಗವನ್ನು ಸಾರ್ವಜನಿಕರ ಸಂಚಾರ ಕುರಿತು ಮುಕ್ತಗೊಳಿಸಲಾಗಿದೆ. 
          ಮುಂಬರುವ ವಿಧಾನಸಭಾ ಚುನಾವಣೆ ನಿಮಿತ್ಯ ಹಾಗೂ ಡಿ.ಎ.ಆರ್ ಕೇಂದ್ರ ಸ್ಥಾನದಲ್ಲಿರುವ ಶಸ್ತ್ರಾಸ್ತ್ರ ಸಂಗ್ರಹ ಭದ್ರತೆ ದೃಷ್ಠಿಯಿಂದ ಈ ಮಾರ್ಗವನ್ನು ಏಕ ಮುಖ ರಸ್ತೆ ಅಂತ ಘೋಷಿಸಲು ಹಾಗೂ ರಾತ್ರಿ 10-00 ಗಂಟೆಯಿಂದ ಬೆಳಿಗ್ಗೆ 06-00 ಗಂಟೆಯವರೆಗೆ ಸಾರ್ವಜನಿಕರ ಸಂಚಾರಕ್ಕೆ ನಿರ್ಭಂಧ ಮಾಡುವ ಕುರಿತು ಸಾರ್ವಜನಿಕರ ಅಭಿಪ್ರಾಯದ ಮೇರೆಗೆ ಮಾನ್ಯ ಜಿಲ್ಲಾಧಿಕಾರಿಗಳಲ್ಲಿ ವರದಿ ಸಲ್ಲಿಸಿ ಕ್ರಮ ಜರುಗಿಸಲಾಗುವದು.  ಅಲ್ಲದೇ ಈ ಮಾರ್ಗದಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಸುಗಮ ಸಂಚಾರ ಕುರಿತು ಕುಳಗೇರಿ ಕ್ರಾಸ ಹತ್ತಿರ ಇರುವ ಕೆ.ಇ.ಬಿ ಟ್ರಾನ್ಸಫಾರ್ಮರನ್ನು ತೆರೆವುಗೊಳಿಸಿ ಸದರಿ ವೃತ್ತವನ್ನು ಅಗಲಿಕರಣ ಮಾಡಿ ಐವಾನ-ಈ-ಶಾಹಿ ಕಡೆ ಹೋಗುವ ರಸ್ತೆಯನ್ನು ದುರಸ್ತಿ ಹಾಗೂ ಡಾಂಬರಿಕರಣ ಮಾಡಲು ಮಹಾನಗರ ಪಾಲಿಕೆಯವರಿಗೆ ತಿಳಿಸಲಾಗುವುದು ಅಂತಾ ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಪ್ರಕಟಣೆ ಮೂಲಕ ಕೋರಿರುತ್ತಾರೆ.

                                       ಸಹಿ/-
                              ಪೊಲೀಸ್ ಅಧೀಕ್ಷಕರು,
                                     ಗುಲಬರ್ಗಾ. 

No comments: