Police Bhavan Kalaburagi

Police Bhavan Kalaburagi

Thursday, April 4, 2013

GULBARGA DISTRICT REPORTED CRIME


ಸೋಸೆ ಮತ್ತು ಅತ್ತೆ ಸಾವು:
ಶಹಾಬಾದ ನಗರ ಠಾಣೆ: ಶ್ರೀ ಮಹೇಬೂಬಖಾನ ತಂದೆ ಅಬ್ದುಲ ಅನ್ನಾನ ವ:52 ಸಾ:ಖುರ್ಷಿದ ಮೊಹಲ್ಲಾ ಮಜೀದ ಚೌಕ ಶಹಾಬಾದ ರವರು ದಿನಾಂಕ:02/04/2013 ರಂದು ರಾತ್ರಿ 9.00 ಗಂಟೆ ಸುಮಾರಿಗೆ ನನ್ನ ಮಗಳು ತನ್ನ ಗಂಡನ ಮನೆಯಲ್ಲಿ ಅಡಿಗೆ ಮಾಡಿ ತನ್ನ ಗಂಡ ಅಬ್ದುಲ ರಹೇಮಾನ, ಮಾವ ಸೈಯದ, ಮೈದುನರಾದ ಅಬ್ದುಲ್ ಮಜೀದ, ರಸೀದ ರವರಿಗೆ ಊಟಕ್ಕೆ ಕರೆದಾಗ, ನನ್ನ ಅಳಿಯ ಅಬ್ದುಲ ರಹೇಮಾನ ಇತನು ಅಡುಗೆ ಮಾಡುವದರ ಬಗ್ಗೆ ಅವಾಚ್ಯವಾಗಿ ಬೈದು, ಊಟ ಮಾಡದೇ ಎಲ್ಲರೂ ಮನೆಯ ಹೊರಗಡೆ ನಿಂತು ಹೀಯಾಳಿಸಿ ಮಾತನಾಡಿ,  ನಾವು ಇಷ್ಟು ಬೈದರು ನಿನಗೆ ನಾಚಿಕೆಯಿಲ್ಲ ಸುಟ್ಟುಕೊಂಡು ಸಾಯಿ ಅಂತಾ ಅಂದ್ದಿದಕ್ಕೆ ನನ್ನ ಮಗಳು ರಾತ್ರಿ 9.30 ಗಂಟೆ ಸುಮಾರಿಗೆ ಸದರಿಯವರೆಲ್ಲರೂ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಿದ್ದರಿಂದ ಮೈಮೇಲೆ ಸೀಮೆ ಎಣ್ಣೆ ಹಾಕಿಕೊಂಡು ಮೈಗೆ ಬೆಂಕಿ ಹಚ್ಚಿಕೊಂಡು ಚಿರಾಡುತ್ತಿದ್ದಾಗ ಅವಳ ಅತ್ತೆ ಅಹಮದಬಿ ಇವಳು  ಮೊಮ್ಮಗಳಾದ ಬೀಬಿ ಫಾತಿಮಾ ಇವಳನ್ನು ಎತ್ತಿಕೊಂಡು ಬಂದು ಬೆಂಕಿ ಆರಿಸಲು ಹೋದಾಗ ಅಹಮದಬಿಗೆ ಎರಡು ಕಾಲಿಗೆ ಟೊಂಕಕ್ಕೆ ಎಡಗೈ ಸುಟ್ಟಿದ್ದು ಬೀಬಿ ಫಾತಿಮಾಳಿಗೆ ಟೊಂಕದಿಂದ ಪಾದದವರೆಗೆ ಸುಟ್ಟಿರುತ್ತದೆ. ನನ್ನ ಮಗಳಾದ ಆಶಾ ಬೇಗಂ ಇವಳಿಗೆ ಮೈ ಪೂರ್ತಿ ಸುಟ್ಟಿರುತ್ತದೆ. ಮೂರು ಜನರಿಗೆ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆ ಶಹಾಬಾದಕ್ಕೆ ತಂದು ಅಲ್ಲಿಂದ ಹೆಚ್ಚಿನ ಉಪಚಾರ ಕುರಿತು ಸರ್ಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ 108 ಅಂಬುಲೇನ್ಸನಲ್ಲಿ ಹಾಕಿಕೊಂಡು ಬಂದು ಸೇರಿಕೆ ಮಾಡಿದ್ದು ಉಪಚಾರ ಹೊಂದುತ್ತಾ ನನ್ನ ಮಗಳು ಆಶಾಬೇಗಂ ಇವಳು  ದಿನಾಂಕ:03/04/2013 ರಂದು 3.00 ಎಎಂ ಕ್ಕೆ ಮತ್ತು ಆಕೆಯ ಅತ್ತೆ ಅಮದಬಿ ಇವಳು ಬೆಳಗ್ಗೆ 6.15 ಗಂಟೆಗೆ ಉಪಚಾರ ಹೊಂದುತ್ತಾ ಮೃತ ಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 49/2013  ಕಲಂ: 498 (ಎ), 306, 504 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. 

No comments: