ಅಪಘಾತ ಪ್ರಕರಣ:
ಸುಲೇಪೇಟ ಪೊಲೀಸ್ ಠಾಣೆ:ಶ್ರೀ ಬಾಬು ತಂದೆ ಹಸನಪ್ಪ ಸುಲೇಪೇಟ ಸಾಃ ಮನ್ನಾಪೂರ ತಾಃ ಜಹಿರಬಾದ ಆಂದ್ರ ಪ್ರದೇಶ ರಾಜ್ಯ ರವರು ನನ್ನ ತಮ್ಮ ಶ್ಯಾಮದಾಸ ಇತನ ಮಾವ ಮೃತಪಟ್ಟಿದ್ದರಿಂದ ಬೀರನಳ್ಳಿ ಗ್ರಾಮಕ್ಕೆ ಬಂದು ದಿವಸ ಕಾರ್ಯಕ್ರಮಕ್ಕೆ ಮುಗಿಸಿಕೊಂಡು ಪಲ್ಸರ್ ಮೋಟಾರ್ ಸೈಕಲ್ ನಂ. ಎಪಿ- 23 ಎಜಿ-7234 ನೇದ್ದರ ಮೇಲೆ ಹೊಡೆ ಬೀರನಳ್ಳಿ ಗ್ರಾಮದಿಂದ ದಿನಾಂಕ:09-04-2013 ರಂದು ಬೆಳಿಗ್ಗೆ 11-00 ಗಂಟೆಗೆ ಮೋಟಾರ್ ಸೈಕಲ್ ಮೇಲೆ ಹೋಗುತ್ತಿರುವಾಗ ಶ್ಯಾಮದಾಸನು ಮೋಟಾರ್ ಸೈಕಲ್ ಅತೀವೇಗ ಮತ್ತು ಅಲಕ್ಷತನದಿಂದ ವಾಹನ ಓಡಿಸುತ್ತಿದ್ದು ಹಾಗೇಯೇ ಎದುರಿನಿಂದ ಅತೀವೇಗವಾಗಿ ಬರುತ್ತಿದ್ದ ಟಿ.ವಿ.ಎಸ್. ಸ್ಕೂಟರ್ ನಂ: ಕೆಎ-33 ಕೆ-3742 ನೇದ್ದರ ಸವಾರನಾದ ಶಿವರಾಯ ಚೆಂಗಟಿ ಸಾಃ ಗಾರಂಪಳ್ಳಿ ಇತನು ಸಹ ತನ್ನ ಸ್ಕೂಟರ್ ಅತೀವೇಗ ಚಲಾಯಿಸಿ ಒಬ್ಬರಿಗೊಬ್ಬರೂ ಸೈಡು ಕೊಡುವಾಗ ಆಯಾ ತಪ್ಪಿ ಕೆಳಗೆ ಬಿದ್ದಿದ್ದರಿಂದ ನನಗೆ ಬಲಗಾಲಿಗೆ ಮತ್ತು ಬಲಗೈಗೆ ರಕ್ತ ಗಾಯಗಳಾಗಿದ್ದು, ಶ್ಯಾಮದಾಸನಿಗೆ ತಲೆಗೆ, ಮುಖಕ್ಕೆ, ಕೈಗಳಿಗೆ ರಕ್ತಗಾಯಗಳಾಗಿದ್ದು ಸ್ಕೂಟರ್ ಚಾಲಕನಿಗೂ ಕೂಡ ಗಾಯಗಳಾಗಿರುತ್ತವೆ. ನನ್ನ ತಮ್ಮ ಶ್ಯಾಮದಾಸ ಇತನಿಗೆ ಹೆಚ್ಚಿನ ಉಪಚಾರ ಕುರಿತು ಗುಲಬರ್ಗಾಕ್ಕೆ ತೆಗೆದುಕೊಂಡು ಹೋಗುತ್ತಿರುವಾಗ ಮಾರ್ಗ ಮಧ್ಯದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಬಾಬು ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ: 39/2013 ಕಲಂ, 279, 337, 338, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment