Police Bhavan Kalaburagi

Police Bhavan Kalaburagi

Tuesday, April 16, 2013

GULBARGA DISTRICT REPORTED CRIME


ಅಪಘಾತ ಪ್ರಕರಣ :
ಕಮಲಾಪೂರ ಪೊಲೀಸ್ ಠಾಣೆ: ಶ್ರೀಮತಿ.ಲಕ್ಷ್ಮೀಬಾಯಿ ಗಂಡ ರಾಮಣ್ಣ ಭಂಗನೊರ ವಯಾ||38 ವರ್ಷ ಸಾ|| ಮುಡಬಿ ಗ್ರಾಮ  ತಾ||ಬಸವಕಲ್ಯಾಣ  ಜಿ|| ಬೀದರ  ರವರು ನನ್ನ ತವರು ಮನೆ ಹುಡಗಿ ಗ್ರಾಮವಾಗಿದ್ದು, ನಾವು ಮತ್ತು ನಮ್ಮ ತವರು ಮನೆಯವರು ಘತ್ತರಗಿ ದೇವರಿಗೆ ನಡೆದುಕೊಳ್ಳುತ್ತಿರುತ್ತೇವೆ. ದಿನಾಂಕ:15/04/2013 ರಂದು ನಾನು ಮತ್ತು ನನ್ನ ಗಂಡ, ವಂದನಾ ತಂದೆ ಸೈಬಣ್ಣ ಗೋಣಿ ಕೂಡಿಕೊಂಡು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ದೇವಿಗೆ ಪಾದಯಾತ್ರೆ ಹೋಗುವ ಕುರಿತು ಊರಿನಿಂದ ಹೊರಟಿದ್ದು, ಹುಡಗಿ ಗ್ರಾಮದಿಂದ  ಕೂಡಾ ನನ್ನ ತಾಯಿ ಕಾಶಿಬಾಯಿ ಗಂಡ ಭೀಮಶ್ಯಾ ಪದ್ಮಾನೋರ, ತಂಗಿಯಾದ ಚಂದ್ರಕಲಾ ಗಂಡ ರಮೇಶ ಸೋಲಾಪೂರ ರವರೂ ಕೂಡಾ ಪಾದ ಯಾತ್ರೆಗೆ ಬರುತ್ತೇವೆ, ನೀವು ಕಮಲಾಪೂರಕ್ಕೆ ಬನ್ನಿ ಎಲ್ಲರೂ ಕೂಡಿಕೊಂಡು ಹೋಗೋಣ ಅಂತಾ ತಿಳಿಸಿದ್ದಕ್ಕೆ ನಿನ್ನೆ ರಾತ್ರಿ 7-00 ಗಂಟೆ ಸುಮಾರಿಗೆ ಕಮಲಾಪೂರ ಬಸ್ ಸ್ಟಾಂಡಿಗೆ ಬಂದಿರುತ್ತೆವೆ. ನಮ್ಮ ತಾಯಿ ಹಾಗೂ ತಂಗಿ ಮತ್ತು ಅವರ ಜೊತೆಯಲ್ಲಿ ಖಾಸಿಂಪೂರ ಗ್ರಾಮದ ನಮ್ಮ ತಂಗಿಯಾದ ಸತ್ಯಮ್ಮ @ ಸಂತೋಷಿ ಗಂಡ ಮಹಾನಂದ ಗುಮಾಸ್ತೆ ಹಾಗೂ ಅದೇ ಗ್ರಾಮದ ಶಶಿಕಲಾ ಗಂಡ ರಾಜಕುಮಾರ ಗುಮಾಸ್ತೆ , ಅನ್ನಪೂರ್ಣಾ ಗಂಡ ಅಂಬರೀಶ್ ಗುಮಾಸ್ತೆ, ನಾಗಮ್ಮ ಗಂಡ ಹರಿಹರ ಗುಮಾಸ್ತೆ, ಈರಮ್ಮ ಗಂಡ ವೈಜುನಾಥ ಗುಮಾಸ್ತೆ, ಪದ್ವಾವತಿ ಗಂಡ ಪ್ರಭು ಗುಮಾಸ್ತೆ, ಜಗದೇವಿ ತಂದೆ ತುಳಸಿರಾಮ ಗುಮಾಸ್ತೆ, ತೇಜಮ್ಮ ಗಂಡ ನರಸಪ್ಪ ಹಣಜೆ , ಬಸಮ್ಮ ಗಂಡ ಶರಣಪ್ಪ  ಹಾಗೂ ಮುತ್ತಂಗಿ ಗ್ರಾಮದ ಚಿತ್ರಮ್ಮ ಗಂಡ ವಿಠಲ ಬಾಳಪ್ಪನೋರ, ಕಲಾವತಿ ಗಂಡ ಸುಭಾಶ ಬಾಳಪ್ಪನೋರ ರವರೆಲ್ಲರೂ ಬಂದಿರುತ್ತೆವೆ.ದಿನಾಂಕ:16/04/2013 ರಂದು ನಸುಕಿನ 4-00 ಗಂಟೆ ಸುಮಾರಿಗೆ ನಡೆದುಕೊಂಡು ಹುಮನಾಬಾದ – ಗುಲಬರ್ಗಾ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಕಮಲಾಪೂರ ದಾಟಿ ನವನಿಹಾಳ ತಾಂಡಾದ ಕ್ರಾಸ್ ಹತ್ತಿರ ರೋಡಿನ ಎಡಬದಿಯಿಂದ ಹೊರಟಾಗ ನಮ್ಮ ಹಿಂದಿನಿಂದ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಾಲಕನು ತನ್ನ ಬಸ್ಸನ್ನು ಅತಿವೇಗವಾಗಿ ಮತ್ತು ನಿಷ್ಕಾಳಜಿತನದಿಂದ ಯಾವದೇ ಹಾರ್ನ ಹಾಕದೇ ಚಲಾಯಿಸಿಕೊಂಡು ಬಂದವನೇ ನಮ್ಮಲ್ಲಿಯ ಕೆಲವರಿಗೆ ಡಿಕ್ಕಿ ಹೊಡೆದು ನನಗೂ ಡಿಕ್ಕಿ ಪಡಿಸಿದ್ದರಿಂದ ನಾನು ಹಾರಿ ಬಿದ್ದೆನು. ನನಗೆ ಟೊಂಕಕ್ಕೆ ಗುಪ್ತಗಾಯ ಮತ್ತು ಬಲಗೈಗೆ ಗಾಯವಾಗಿದ್ದು, ನನ್ನ ಗಂಡ ರಾಮಣ್ಣನಿಗೆ ನೋಡಲಾಗಿ ತೆಲೆಗೆ, ಕಾಲುಗಳಿಗೆ ಭಾರಿ ರಕ್ತಗಾಯಗಳಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಹಾಗೂ ಖಾಸಿಂಪೂರದ ಬಸಮ್ಮ ಗಂಡ ಶರಣಪ್ಪ ಗುಮಾಸ್ತೆ ಇವಳಿಗೆ ತೆಲೆಯ ಭಾಗಕ್ಕೆ ಮತ್ತು ಅಲ್ಲಲ್ಲಿ ಭಾರಿ ಪ್ರಮಾಣದ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಳು. ಜಗದೇವಿ, ಅನ್ನಪೂರ್ಣ, ಶಶಿಕಲಾ ಮತ್ತು ನನ್ನ ತಾಯಿ ಕಾಶಿಬಾಯಿ ಹಾಗೂ ತಂಗಿ ಚಂದ್ರಕಲಾ ಗಂಡ ರಮೇಶ ಸೋಲಾಪೂರೆ ಹಾಗೂ ಇತರರಿಗೆ ರಕ್ತಗಾಯಗಳಾಗಿದ್ದವು. ಅವರೆಲ್ಲರಿಗೂ ಅಂಬುಲೆನ್ಸದಲ್ಲಿ ಹಾಕಿಕೊಂಡು ಗುಲಬರ್ಗಾದ  ಸರ್ಕಾರಿ ಆಸ್ಪತ್ರೆಗೆ ತರುವಾಗ ನನ್ನ ತಾಯಿ ಕಾಶಿಬಾಯಿ ಮತ್ತು ತಂಗಿ ಚಂದ್ರಕಲಾ ಇವರುಗಳು ಭಾರಿ ಗಾಯದಿಂದ ಮಾರ್ಗಮಧ್ಯದಲ್ಲಿಯೇ ಮೃತಪಟ್ಟಿರುತ್ತಾರೆ. ಬಸ್ ಚಾಲಕ ಓಡಿ ಹೋಗಿದ್ದು, ಬಸ್ ನಂಬರ್ ನೋಡಲಾಗಿ ಕೆಎ–32/ಎಫ್ – 1538 ನೇದ್ದು ಹೈದ್ರಾಬಾದ – ಗುಲಬರ್ಗಾ ಮಾರ್ಗದ ಬಸ್ಸು ಇದ್ದು, ಚಾಲಕನ ಹೆಸರು ಮಲ್ಲೇಶಿ ತಂದೆ ನರಸಪ್ಪಾ ಶಾಬಾದಿ ಅಂತಾ ಗೊತ್ತಾಗಿರುತ್ತದೆ. ಜಗದೇವಿ ತಂದೆ ತುಳಸಿರಾಮ ಇವಳು ಭಾರಿ ಗಾಯದಿಂದ ಮಾತನಾಡುವ ಸ್ಥಿತಿಯಲ್ಲಿರುವದಿಲ್ಲ. ಉಳಿದ ಕೆಲವರಿಗೆ ಭಾರಿ ಮತ್ತು ಸಾದಾ ರಕ್ತಗಾಯಗಳಾಗಿರುತ್ತವೆ. ಪಾದಯಾತ್ರಿಗಳ ಪೈಕಿ ಇನ್ನೂ ಕೆಲವರಿಗೆ ಗಾಯಗಳಾಗಿರುತ್ತವೆ. ಬಸ್ಸ ಚಾಲಕ ಮಲ್ಲೇಶಿ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ:37/2013 ಕಲಂ 279.337.338.304 [ಎ] ಐಪಿಸಿ ಸಂಗಡ  187 ಐಎಂವ್ಹಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: