Police Bhavan Kalaburagi

Police Bhavan Kalaburagi

Wednesday, April 17, 2013

GULBARGA DISTRICT REPORTED CRIME


ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ. ರೇವಣಸಿದ್ದಪ್ಪಾ ತಂದೆ ಶಿವರಾಜ ಬಿರಾದರ ವಯಾ||35 ವರ್ಷ ಸಾ||ರಟಕಲ ತಾ||ಚಿಂಚೋಳಿ ಜಿ||ಗುಲಬರ್ಗಾ ರವರು ನಾನು ಮತ್ತು  ಶಿವನಾಗಪ್ಪಾ ಬಳವಡಿಗೆ ಇಬ್ಬರು ಕೂಡಿಕೊಂಡು ಆತನ  ಹಿರೋ ಹೊಂಡಾ ಸ್ಪ್ಲೆಂಡರ ಮೋಟಾರ ಸೈಕಲ್ ನಂ.ಕೆಎ-20 ಜೆ-7730 ನೇದ್ದರ ಮೇಲೆ ದಿನಾಂಕ.08-04-2013 ರಂದು ಸಾಯಂಕಾಲ 6-00 ಗಂಟೆ ಸುಮಾರಿಗೆ ಸಲಾಮಟೇಕಡಿ ಬಜಾಜ ಕಂಪನಿಯ ಎದರುಗಡೆ ಆತನ ಮೋಟಾರ ಸೈಕಲ್ ಹಿಂದೆ ಕುಳಿತು ಹೋಗುತ್ತಿರುವಾಗ ಎದುರಿನಿಂದ ಟ್ರ್ಯಾಕ್ಟರ ಇಂಜಿನ ಏರ ಕ್ರ್ಯಾಪ್ಶನ್ ವೇಗವಾಗಿ ಬರುತ್ತಿರುವಾಗ ಅದರ ಏಕ್ಸಲ್ ಕಟ್ಟಾಗಿದ್ದು , ಅದೇ ವಳೆಗೆ ಟ್ರ್ಯಾಕ್ಟರ ಹಿಂದುಗಡೆಯಿಂದ ಕ್ರೋಜರ ನಂ.ಕೆಎ-36/5601 ನೇದ್ದರ ಚಾಲಕ ತನ್ನ ವಾಹನ ವೇಗವಾಗಿ  ಚಲಾಯಿಸಿಕೊಂಡು ಬಂದು ಮೊದಲು ಟ್ರ್ಯಾಕ್ಟರ ಇಂಜನಿಗೆ ಡಿಕ್ಕಿ ಹೊಡೆದು, ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದಿದ್ದರಿಂದ ನಾವು ಕೆಳಗೆ ಬಿದ್ದಾಗ ತಲೆಗೆ ಕಾಲುಗಳಿಗೆ ಭಾರಿಗಾಯಗಳಾಗಿದ್ದು  ಕ್ರೋಜರ ಚಾಲಕ  ಮತ್ತು ಟ್ರ್ಯಾಕ್ಟ ರ ಇಂಚನ ಚಾಲಕ ಇಬ್ಬರು  ವಾಹನಗಳನ್ನು ಬಿಟ್ಟು ಓಡಿ ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:175/2013 ಕಲಂ. 279,338 ಐಪಿಸಿ ಸಂಗಡ 187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿತ್ತು. ಗಾಯಾಳು ಶಿವನಾಗಪ್ಪಾ ತಂದೆ ಮುರುಗೆಪ್ಪಾ ಬೆಳವಡಗಿ ಸಾ;ರಟಕಲ್ ಇತನು ದಿನಾಂಕ.12-04-2013 ರಂದು 10-30 ಪಿ.ಎಂ.ಕ್ಕೆ ಉಪಚಾರದಿಂದ ಗುಣ ಮುಖನಾಗದೆ ಸೋಲಾಪೂರದ ಯಶೋಧ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದರಿಂದ ಕಲಂ 304 (ಎ) ಐಪಿಸಿ ಅಳವಡಿಸಿಕೊಳ್ಳಲಾಗಿದೆ. 

No comments: