Police Bhavan Kalaburagi

Police Bhavan Kalaburagi

Monday, April 22, 2013

GULBARGA DISTRICT REPORTED CRIME


ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ ಬಸವರಾಜ ತಂದೆ ಸಿದ್ದಣ್ಣ ಮೈಲಾರ ಸಾ|| ವಾಸವದತ್ತ ಕಾಲೋನಿ ಸೇಡಂ ರವರು ನಾನು ಮತ್ತು ನನ್ನ ಧರ್ಮಪತ್ನಿ ಸುವರ್ಣ ಇಬ್ಬರು ದಿನಾಂಕ:21/04/2013 ರಂದು ರಾತ್ರಿ 8-00 ಗಂಟೆಗೆ ಗುಲಬರ್ಗಾ ಕೇಂದ್ರ ಬಸ್ ನಿಲ್ದಾಣದಲ್ಲಿ ಬಂದು ಬೆಂಗಳೂರಿಗೆ ಹೋಗುವ ಕುರಿತು ರಾಜಹಂಸ ಬಸ್ ನಂಬರ ಕೆಎ-32 ಎಫ್-1798 ನೇದ್ದರಲ್ಲಿ ಶೀಟ್ ನಂ. 25,26 ರ ಮೇಲೆ ಡೆಲ್ ಲ್ಯಾಪಟ್ಯಾಪ Sl No.BXYMMV1 ಮತ್ತು ಲ್ಯಾಪಟ್ಯಾಪ ಬ್ಯಾಗಿನಲ್ಲಿದ್ದ ಟಾಟಾ ಡೊಕೊಮೊ ಪುಟೊನ್ ಡಾಟಾ ಕಾರ್ಡ,ಚೆಕ್ ಬುಕ್, ಮನೆಯ ಮತ್ತು ಕಾರಿನ ಕಿಲಿಕೈಗಳು ಒಟ್ಟು ಅ.ಕಿ 45,000/- ಬೆಲೆಬಾಳುವುಗಳು ಶೀಟಿನ ಮೇಲೆ ಕ್ಯಾರಿಯರದಲ್ಲಿಟ್ಟಿದ್ದು, ನಾವು ಕುಳಿತಿರುವ ಬಸ್ಸು ರೈಲ್ವೆ ಗೇಟ ಹತ್ತಿರ ಹೋದಾಗ ಲಗೇಜ ಬ್ಯಾಗ ನೋಡಲು ನನ್ನ ಲ್ಯಾಪಟ್ಯಾಪ ಬ್ಯಾಗ ಕಾಣಿಸಲಿಲ್ಲ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 68/2013 ಕಲಂ 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: