ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ, ಆನಂದ ತಂದೆ ಗಂಗಪ್ಪಾ ಯಳಸಂಗಿ ಸಾ;ಗುಡುರ ತಾ;ಆಫಜಲಪೂರ ಜಿ;ಗುಲಬರ್ಗಾರವರು ನನ್ನ ತಮ್ಮನಾದ ಅಶೋಕ ತಂದೆ ಗಂಗಪ್ಪಾ ಯಳಸಂಗಿ ಇತನು ಔರಂಗಾಬಾದನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಆಗಾಗ ಊರಿಗೆ ಬಂದು ಹೋಗುವದು ಮಾಡುತ್ತಿದ್ದ. ದಿನಾಂಕ:27-04-2013 ರಂದು ನನ್ನ ತಮ್ಮ ಅಶೋಕ ಇತನು ಔರಂಗಬಾದದಿಂದ ಗುಲಬರ್ಗಾಕ್ಕೆ ಬಂದು ತನ್ನ ಗೆಳೆಯನ ರೂಮಿನಲ್ಲಿ ಉಳಿದುಕೊಂಡಿದ್ದನು.ದಿನಾಂಕ:28-04-2013 ರಂದು ಸಾಯಂಕಾಲ ಗುಡುರ ಗ್ರಾಮಕ್ಕೆ ಹೋಗುತ್ತೇನೆ ಅಂತಾ ಮಾತನಾಡಿದನು. ರಾತ್ರಿ ನಾನು ರೂಮಿನಲ್ಲಿರುವಾಗ ನನ್ನ ಗೆಳೆಯನಾದ ಶಾಂತಪ್ಪಾ ಸಾವಳಗಿ ಇತನು ನಿಮ್ಮ ತಮ್ಮನಾದ ಅಶೋಕ ಇತನು ತನ್ನ ಗೆಳೆಯನಾದ ಭೀಮಾಶಂಕರ ರಾಂಪೂರ ಇವರ ಮೋಟಾರ ಸೈಕಲ ನಂಬರ ಕೆಎ-32 ಆರ್-9416 ನೇದ್ದರ ಮೇಲೆ ಗುಲಬರ್ಗಾದಿಂದ ಗುಡುರ ಗ್ರಾಮಕ್ಕೆ ಹೋಗುತ್ತಿರುವಾಗ ಕೇರಿ ಬೋಸಗಾ ಕ್ರಾಸ್ ನಂತರಕೆಎ-32 ಎ-5462 ನೇದ್ದರ ಲಾರಿ ಚಾಲಕನು ತನ್ನ ಲಾರಿಯನ್ನು ಯಾವದೇ ಮುನ್ಸೂಚನೆ ಲೈಟ ಹಾಕದೆ ಲೋಡ ಲಾರಿ ರೋಡಿಗೆ ನಿಲ್ಲಿಸಿದ್ದು ಗಮನಿದ ಇವರು ಲಾರಿಯ ಹಿಂದುಗಡೆ ಡಿಕ್ಕಿ ಹೊಡೆದಿರುತ್ತಾರೆ. ಮೋಟಾರ ಸೈಕಲ್ ಚಲಾಯಿಸುತ್ತಿದ್ದ ಅಶೋಕ ತಂದೆ ಗಂಗಪ್ಪಾ ಯಳಸಂಗಿ ಉ||ಇಂಜನಿಯರ ಸಾ; ಗುಡುರ ತಾ;ಅಫಜಲಪೂರ ಜಿ;ಗುಲಬರ್ಗಾ ಇತನಿಗೆ ತಲೆಗೆ ಭಾರಿರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಭೀಮಾಶಂಕರ ತಂದೆ ಹಣಮಂತರಾಯ ಸುರಪೂರ ಡಿಪ್ಲೋಮಾ ವಿದ್ಯಾರ್ಥಿ ಸಾ; ರಾಂಪೂರ ಹಳ್ಳಿ ಇತನಿಗೂ ಭಾರಿಗಾಯವಾಗಿದ್ದು, ಉಪಚಾರ ಕುರಿತು 108 ಅಂಬುಲೇನ್ಸ ವಾಹನದಲ್ಲಿ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಮೃತ ಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:219/2013 ಕಲಂ. 279 304 (ಎ),283, ಐಪಿಸಿ ಸಂಗಡ 187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment