Police Bhavan Kalaburagi

Police Bhavan Kalaburagi

Wednesday, April 10, 2013

GULBARGA DISTRICT REPORTED CRIME


ಬಂಗಾರದ ಲಾಕೇಟ ದೋಚಿದ ಬಗ್ಗೆ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀಮತಿ ಶಾಂತಾಭಾಯಿ ಗಂಡ ಶಾಂತಲಿಂಗಪ್ಪಾಸಾ|| ಖೇಡ ತಾ|| ಆಳಂದ ಹಾ||ವ|| ಗೋದುತಾಯಿ ನಗರ ಗುಲಬರ್ಗಾರವರು, ನಾನು ಮತ್ತು ನನ್ನ ಅಣ್ಣನ ಮಗಳಾದ ಶೈಲಜಾ ಇವಳೊಂದಿಗೆ ಹೈದ್ರಾಬಾದಕ್ಕೆ ಹೋಗುವ ಕುರಿತು ಮನೆಯಿಂದ ಬಸ್ ನಿಲ್ದಾಣಕ್ಕೆ ಮಧ್ಯಾಹ್ನ 2:50 ಗಂಟೆ ಸುಮಾರಿಗೆ  ಗೋದುತಾಯಿ ಕಾಲೋನಿಯ ಮೊತಕಪಲ್ಲಿ ವಕೀಲರ ಮನೆಯ ಹತ್ತಿರದಿಂದ ಹೊಗುತ್ತಿರುವಾಗ 22-25 ವರ್ಷದವನು ಒಬ್ಬ ಅಪರಿಚಿತ ವ್ಯಕ್ತಿ ಹಿಂದಿನಿಂದ ನಡೆದುಕೊಂಡು ಬಂದವನೆ, ನನ್ನ ಕೊರಳಿಗೆ ಕೈಹಾಕಿ 30 ಗ್ರಾಂ ಬಂಗಾರದ ಲಾಕೆಟ್ ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದು, ನಾನು ಬಂಗಾರದ ಲ್ಯಾಕೆಟನ್ನು ಕೈಯಿಂದ ಹಿಡಿದಾಗ ಕೈಯಲ್ಲಿದ್ದ ಬಂಗಾರದ ಲ್ಯಾಕೆಟ್ ಅಂದಾಜು 5 ಗ್ರಾಂ ಉಳಿದಿದ್ದು ಉಳಿದ 25 ಗ್ರಾಂ ಬಂಗಾರದ ಲ್ಯಾಕೆಟ ಅ.ಕಿ 60,000/- ರೂಪಾಯಿಗಳದ್ದು ಆ ವ್ಯಕ್ತಿ ಕಿತ್ತುಕೊಂಡು ಓಡಿ ಹೋದನು. ಆತನು ನೀಲಿ ಕಲರ್ ಜಿನ್ಸ ಪ್ಯಾಂಟ್, ನೀಲಿ ಕಲರ್ ವೈಟ್ ಚೆಕ್ಕ ಶರ್ಟ, 5 ಪೀಟ ಎತ್ತರವಿರುವವನಾಗಿರುತ್ತಾನೆ ಅಂತಾ ಶ್ರೀಮತಿ ಶಾಂತಾಬಾಯಿ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 56/2013 ಕಲಂ.392 ಐಪಿಸಿ ಪ್ರಕಾರ ಪ್ರಕರಣ  ದಾಖಲಿಸಿಕೊಂಡಿರುತ್ತಾರೆ.

No comments: