Police Bhavan Kalaburagi

Police Bhavan Kalaburagi

Friday, April 19, 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:ಶ್ರೀ ಅಜಯ ತಂದೆ ಜಗನ ರಾಠೋಡ ಸಾ:ಮಡ್ಡಿ ಶಹಾಬಾದರವರು ದಿನಾಂಕ:18/04/2013 ರಂದು ಮಧ್ಯರಾತ್ರಿ 00.45 ಎಎಂಕ್ಕೆ ನಾನು ಮತ್ತು ಶಿವಕುಮಾರ ತಂದೆ ಅಶೋಕ ರಾಠೋಡ ಕೂಡಿಕೊಂಡು ಭಂಕೂರ ಕ್ರಾಸದಿಂದ ಟಂ ಟಂ ನಂ.ಕೆಎ-33/4397 ನೇದ್ದರಲ್ಲಿ ಕುಳಿತುಕೊಂಡು ಶಹಾಬಾದಕ್ಕೆ ಬರುತ್ತಿದ್ದಾಗ ಮಧ್ಯರಾತ್ರಿ 1.15 ಎಎಂಕ್ಕೆ ಜಗಜೀವನರಾಮ ವೃತ್ತದ ಹತ್ತಿರ ರೋಡಿನ ಮೇಲೆ ತಿರುವಿನಲ್ಲಿ  ಟಂ ಟಂ ಚಾಲಕನು ಅತೀವೇಗ & ನಿಷ್ಕಾಳಜಿತನದಿಂದ ಚಲಾಯಿಸಿ ಒಮ್ಮೆಲೆ ಬ್ರೇಕ ಹಾಕಿದ್ದರಿಂದ ಟಂ ಟಂ ರೋಡಿನ ಎಡಗಡೆ ಪಲ್ಟಿಯಾಗಿ ಬಿದ್ದಿದ್ದರಿಂದ ನನಗೆ ಎಡಗೈಗೆ ಭಾರಿ ರಕ್ತಗಾಯವಾಗಿರುತ್ತದೆ ಮತ್ತು ಶಿವಕುಮಾರನಿಗೆ ಎಡಗೈ ಮತ್ತು ಎಡಗಾಲಿಗೆ ರಕ್ತಗಾಯ ಮತ್ತು ತರಚಿದ ಗಾಯವಾಗಿರುತ್ತದೆ. ಟಂ ಟಂ ಚಾಲಕನು ತನ್ನ ವಾಹನವನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 64/2013 ಕಲಂ:279,337,338 ಐಪಿಸಿ ಸಂ:187 ಐಎಮ್‌ವಿ ಆಕ್ಟ್‌     ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ:18-04-13 ರಂದು ಬೆಳಿಗ್ಗೆ 11-00 ಗಂಟೆ ಸುಮಾರಿಗೆ ನಾನು ಮತ್ತು ನಮ್ಮ  ಸಿಬ್ಬಂದಿಯವರು ಅಫಜಲಪೂರ ಕ್ರಾಸ ಹತ್ತ್ಟಿರುವ ಎಂ.ಸಿ.ಸಿ. ಚೆಕ್ಕ ಪೋಸ್ಟದಲ್ಲಿದ್ದಾಗ, ಗುಲಬರ್ಗಾ ಕಡೆಯಿಂದ  ಬಿಳಿ ಬಣ್ಣದ ಇನೋವಾ ಕಾರ ನಂಬರ ಎಮ್ಎಚ್-13 /ಎಝಡ್-7011 ನೇದರ ವಾಹನ ನಿಲ್ಲಿಸಿ ತಪಾಸಣೆ ಮಾಡುವ ಕುರಿತು ನಿಲ್ಲಿಸಿದಾಗ ಕಾರಿನ ಹಿಂಭಾಗದ ಡಿಕ್ಕಿಯಲ್ಲಿ  ಸಮಾಜವಾದಿ ಪಕ್ಷ ಕರ್ನಾಟಕ ರಾಜ್ಯ ಸೈಕಲ ಚಿನ್ಹೆವುಳ್ಳ ಸ್ಟಿಕರಗಳು ಮೂರು ಬಂಡಲಗಳಿದ್ದು, ಕರಪತ್ರದ  ಎಡಭಾಗಕ್ಕೆ ಅಭ್ಯರ್ಥಿ ಭಾವಚಿತ್ರವಿದ್ದು, ಅದರ ಕೆಳಗಡೆ  ಗೋವಿಂದ ವ್ಹಿ.ಭಟ್ಟ್ ರಾಜ್ಯ ಉಪಾಧ್ಯಕ್ಷರು ಎಂದು ಕನ್ನಡದಲ್ಲಿ ಬರೆದಿದ್ದು  ಇರುತ್ತದೆ. ಸ್ಟಿಕರಗಳ ಮೇಲೆ ಮುದ್ರಕರ ಮತ್ತು ಪ್ರಕಾಶಕರ ಹೆಸರು ವಿಳಾಸ, ಅದರ ಸಂಖ್ಯೆ  ನಮೂದಿಸಿರುವುದಿಲ್ಲಾ. ಲಕ್ಷ್ಮಣ ತಂದೆ ಮಲ್ಲಪ್ಪ ಟಕ್ಕಳಕಿ  ಸಾ:ಹಾವನೂರ ತಾ: ಆಫಜಲಪೂರ ರವರು ಚುನಾವಣೆ ಅಧಿಕಾರಿಗಳಿಂದ ಪರವಾನಿಗೆ ಪಡೆಯದೇ ಮುದ್ರಣೆ ಮಾಡಿ ಚುನಾವಣೆ ಪ್ರಚಾರ ತೊಡಗಿದ್ದಲ್ಲದೇ ಮತ್ತು ಸಂಬಂಧಪಟ್ಟ ಚುನಾವಣೆ ಅಧಿಕಾರಿಗಳಿಂದ ಪರವಾನಿಗೆ ಪಡೆಯದೆ ಸ್ಟೀಕರಗಳು ಸಾಗಿಸಿ ಚುನಾವಣೆ ನೀತಿ ಸಂಹಿತೆ ಉಲ್ಲಂ ಘನೆ ಮಾಡುತ್ತಾರೆ. ಅಂತಾ ಶ್ರೀಡಾ:ಡಿ.ಎಂ. ಮಣ್ಣೂರು ಪ್ಲಾಯಿಂಗ್ ಸ್ವ್ಕಾಡ  ಎಂ.ಸಿ.ಸಿ. ಮಾದರಿ ಚುನಾವಣೆ ನೀತಿ ಸಂಹಿತೆ ಅಧಿಕಾರಿ 44- ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಮತಕ್ಷೇತ್ರ ದ ಆಧಿಕಾರಿಯವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:203/2013 ಕಲಂ, 188 ಐಪಿಸಿ ಮತ್ತು 127 (ಎ) 133 ಆರ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: