Police Bhavan Kalaburagi

Police Bhavan Kalaburagi

Wednesday, April 24, 2013

GULBARGA DISTRICT REPORTED CRIMES


ಮಂಗಳಸೂತ್ರ ದರೋಡೆ ಮಾಡಿದ ಬಗ್ಗೆ: :
ಅಶೋಕ ನಗರ ಪೊಲೀಸ್ ಠಾಣೆ:ಶ್ರೀಮತಿ ಪ್ರತಿಭಾ ಗಂಡ ಅಶೋಕ ತಾಳಿಕೋಟಿ ಸಾ|| ಎಸ್.ಬಿ.ಎಚ್ ಕಾಲೋನಿ ಗೋದುತಾಯಿ ನಗರ ಗುಲಬರ್ಗಾರವರು ನಾನು ಮತ್ತು ನನ್ನ ಅತ್ತೆ ಹಾಗೂ ದೊಡ್ಡ ಅತ್ತೆ ಶಾಂತಿಬಾಯಿ ಯಾದಗಿರಿ ಮೂರು ಜನರು ದಿನಾಂಕ:23/04/2013 ರಂದು  ನಮ್ಮ ಸಂಬಂಧಿಕರ ಮಗುವಿನ ತೊಟ್ಟಿಲ್  ಕಾರ್ಯಕ್ರಮ ಮುಗಿಸಿಕೊಂಡು ಗಂಜದಿಂದ ನೃಪತುಂಗ ನಗರ ಸಾರಿಗೆ ಬಸ್ಸಿನಲ್ಲಿ ಕುಳಿತು ಕೊಠಾರಿ ಭವನ ಹತ್ತಿರ ಇಳಿದು ನಡೆದುಕೊಂಡು ಮದರ ತೆರಿಸಾ ಶಾಲೆಯ ಕ್ರಾಸಿನ ಹತ್ತಿರ ಹೋಗುತ್ತಿರುವಾಗ ಸಾಯಂಕಾಲ 4-30 ಗಂಟೆ ಸುಮಾರಿಗೆ ಎದುರುಗಡೆಯಿಂದ ಒಂದು ಕಪ್ಪು ಬಣ್ಣದ ಮೋಟಾರ ಸೈಕಲ್ ಮೇಲೆ ಇಬ್ಬರೂ ಸವಾರರು ಕುಳಿತುಕೊಂಡು ಬಂದವರೇ ಒಮ್ಮೇಲೆ ನನ್ನ ಮೈಮೇಲೆ ಬಂದು ಮೋಟಾರ ಸೈಕಲ್ ಹಿಂದೆ ಕುಳಿತ ವ್ಯಕ್ತಿಯು ನನ್ನ ಕೊರಳಿಗೆ ಕೈಹಾಕಿ ಬಂಗಾರದ ಮಂಗಳಸೂತ್ರ ಸರ್ ಕಿತ್ತುಕೊಂಡು ಹೋಗಿದ್ದು ಕಿತ್ತುಕೊಳ್ಳುವಾಗ ನಾನು ಮಂಗಳಸೂತ್ರ ಪದಕ ಹಿಡಿದಿದ್ದಕ್ಕೆ 1 ತೊಲೆ ಪದಕ ಮಾತ್ರ ಕೈಯಲ್ಲಿ ಉಳಿದಿದ್ದು ಇನ್ನೋಳಿದ 3 ತೊಲೆಯ ಬಂಗಾರದ ಮಂಗಳಸೂತ್ರ ಸರ್ ಕಿತ್ತುಕೊಂಡು ಓಡಿ ಹೋಗಿರುತ್ತಾರೆ. ಅದರ ಮೌಲ್ಯ 75,000/- ರೂಪಾಯಿಗಳಾಗುತ್ತದೆ. ಮಂಗಳಸೂತ್ರ ಕಿತ್ತುಕೊಂಡು ಹೋಗಿದ್ದ ಹಿಂದೆ ಕುಳಿತ ವ್ಯಕ್ತಿಯು ಬ್ಲೂ ಜಿನ್ಸ ಪ್ಯಾಂಟ, ಎಲ್ಲೋ ಚಕ್ಸ ಟಿ-ಶರ್ಟ ಮತ್ತು ಕಣ್ಣಿಗೆ ಚಸ್ಮಾ, ಕ್ಯಾಪ್ ಹಾಕಿಕೊಂಡಿದ್ದು ಆತನಿಗೆ ನೋಡಿದರೆ ಗುರುತಿಸುತ್ತೆನೆ. ಅಂತಾ ಶ್ರೀಮತಿ, ಪ್ರತಿಭಾ ಗಂಡ ಅಶೋಕ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:70/2013  ಕಲಂ.392 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ನೆಲೋಗಿ ಪೊಲೀಸ ಠಾಣೆ: ದಿನಾಂಕ:20/04/2013 ರಂದು ರಾತ್ರಿ  9.00 ಗಂಟೆಯ ಸುಮಾರಿಗೆ ನಾನು ಹಾಗೂ ಗಂಡ ಮನೆಯಲ್ಲಿ ಮಾತನಾಡುತ್ತ  ಕುಳಿತಿದ್ದಾಗ ನಮ್ಮ ಅಣ್ಣ ತಮ್ಮಕೀಯ ಮಲ್ಲಣ್ಣ ತಂದೆ ರುದ್ರಗೌಡ ಹಾಗೂ ಬಸಲಿಂಗಪ್ಪ ತಂದೆ ರುದ್ರಗೌಡ ಬಂದು ಮನೆಯ ಭಾಗಿಲ ಬಡೆದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ನಿನ್ನ ಗಂಡ ಎಲ್ಲಿದ್ದಾನೆ ಅಂತಾ ಮಲ್ಲಪ್ಪ ಮತ್ತು ಬಸಲಿಂಗಪ್ಪನು ಕೇಳಿ ಜಗಳ ಬಿಡಿಸಲು ಬಂದ  ನನ್ನ ಗಂಡನ ಬೆನ್ನಿಗೆ ಮತ್ತು ಕೈಗೆ ಬಡಿಗೆಯಿಂದ ಹೋಡೆದಿರುತ್ತಾರೆ ಅಂತಾ ಶ್ರೀಮತಿ  ಲಲೀತಾಬಾಯಿ ಗಂಡ ಶಿವಶರಣಪ್ಪ ಪೊಲೀಸ್ ಪಾಟೀಲ್ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನ ನಂ:63/2013 ಕಲಂ 448,323,324,354,504.506 ಸಂ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ, ಬಾಷಾ ತಂದೆ ಮಕ್ಸೂದ @ ಮಲಿಕ್ ಮುಜಾವರ ಸಾ; ನೆಲ್ಲೂರ ತಾ:ಆಳಂದ ಜಿ;ಗುಲಬರ್ಗಾ ರವರು ದಿನಾಂಕ:22-04-2013 ರಂದು ರಾತ್ರಿ 10-45 ಗಂಟೆಯ ಸುಮಾರಿಗೆ ಗುಲಬರ್ಗಾ – ಆಳಂದ ರಸ್ತೆಯ ಜವಳಿ ದಾಬಾದ ಎದುರುಗಡೆ  ನಾನು ಮತ್ತು ನನ್ನ ತಂಗಿಯ ಗಂಡ ಜಾವೇದ ಇಬ್ಬರು ಕೂಡಿಕೊಂಡು ನಮ್ಮ ಬಜಾಜ ಪಲ್ಸರ್  ಮೋಟಾರ ಸೈಕಲ್ ನಂ.ಕೆಎ.32 ಡಬ್ಲೂ.7225 ನೇದ್ದರ ಮೇಲೆ ನೆಲ್ಲೂರದಿಂದ ಪಟ್ಟಣ ಗ್ರಾಮಕ್ಕೆ ಬರುತ್ತಿರುವಾಗ  ನಮ್ಮ ಹಿಂದಿನಿಂದ ಕಾರ ನಂ.ಎಂ.ಹೆಚ-03 ಎಎಫ್. 4060 ನೇದ್ದರ ಚಾಲಕನು ತನ್ನ ಕಾರನ್ನು ಅತೀವೇಗ ಮತ್ತು ನಿಸ್ಕಾಳಜಿತನದಿಂದ ಚಲಾಯಿಸಿ ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಹೋಡೆದು ಕಾರ ಅಲ್ಲಿಯೇ ನಿಲ್ಲಿಸಿ ಓಡಿಹೋದನು. ನನಗೆ ತಲೆಗೆ, ಬಲಕಪಾಳಕ್ಕೆ ಭಾರಿ ರಕ್ತಗಾಯ ಮತ್ತು ತರಚಿದ ಗಾಯಗಳಾಗಿದ್ದು  ಮತ್ತು ಮೋಟಾರ ಸೈಕಲ್ ನಡೆಯಿಸುತಿದ್ದ ಜಾವೇದ ತಂದೆ ಬಕ್ಸೊದ್ದಿನ  ಇತನಿಗೆ  ತಲೆಯ ಹಿಂದುಗಡೆ ಭಾರಿ ರಕ್ತಗಾಯವಾಗಿ,ಕಿವಿಯಿಂದ, ಮೂಗಿನಿಂದ, ಬಾಯಿಂದ ರಕ್ತಸ್ರಾವವಾಗುತ್ತಿತ್ತು. 108 ಅಂಬುಲೆನ್ಸದಲ್ಲಿ ಉಪಚಾರ ಕುರಿತು ಗುಲಬರ್ಗಾ ಸರಕಾರಿ ಆಸ್ಪತ್ರೆಗೆ ತಂದು ಸೇರಿಕೆ ಮಾಡಲಾಗಿದ್ದು, ಹೆಚ್ಚಿನ ಉಪಚಾರ ಕುರಿತು ಬಸವೇಶ್ವರ ಆಸ್ಪತ್ರೆಗೆ ತಂದು ಸೇರಿಕೆ ಮಾಡಿದಾಗ ಜಾವೇದ ಇತನು ಉಪಚಾಕ ಫಲಕಾರಿಯಾಗದೇ ಮೃತ ಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:210/2013 ಕಲಂ.279,338, 304 (ಎ) ಐಪಿಸಿ ಸಂಗಡ 187 ಐಎಂವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ. ನಂತರ 

No comments: