Police Bhavan Kalaburagi

Police Bhavan Kalaburagi

Friday, April 26, 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಅಪ್ಸನಾ ಬೇಗಂ ಗಂಡ ಶೇಖ ಮಹಿಬೂಬ ಸಾ: ಶಹಾಜಿಲಾನಿ ದರ್ಗಾ ಹತ್ತಿರ ಮದಿನಾ ಕಾಲೋನಿ ಎಮ್.ಎಸ್.ಕೆ.ಮಿಲ್ ಗುಲಬರ್ಗಾರವರು ದಿನಾಂಕ:25-04-2013 ರಂದು   ಮಧ್ಯಾಹ್ನ  3=00 ಗಂಟೆ ಸುಮಾರು ನನ್ನ ಮಗಳಾದ ಆಫ್ರೀನಾ ಇವಳು ಓಣಿಯ ಮಕ್ಕಳ ಜೊತೆಗೆ ಹಸನ ಸಾಬ ಕಲೆಗಾರ ಇವರ ಮನೆಯ ಮುಂದೆ ಆಟವಾಡುತ್ತಿದ್ದಾಗ ಶಾಹಾಜಿಲಾನಿ ರೋಡ ಕಡೆಯಿಂದ ಮೋಟಾರ ಸೈಕಲ್ ನಂ:ಕೆಎ-32 ಯು 5177 ನೇದ್ದರ ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಆಟ ಆಡುತ್ತಿದ್ದ ನನ್ನ ಮಗಳು ಆಫ್ರೀನಾ ಇವಳಿಗೆ ಡಿಕ್ಕಿ ಪಡಿಸಿ ಮೋಟರ ಸೈಕಲ್ ಸಮೇತ   ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:29/2013 ಕಲಂ: 279, 338  ಐ.ಪಿ.ಸಿ. ಸಂ 187 ಐ.ಎಮ್.ವಿ ಆಕ್ಟ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಮಹಾಗಾಂವ  ಪೊಲೀಸ ಠಾಣೆ:ದಿನಾಂಕ:25/04/13 ರಂದು  ಸಾಯಂಕಾಲ 5.30 ಗಂಟೆ ಸುಮಾರಿಗೆ ನಾನು ತಡಕಲ ಕ್ರಾಸದಲ್ಲಿ ನಿಂತಿರುವಾಗ ಸಾಯಂಕಾಲ 6-00 ಗಂಟೆಗೆ ರಟಕಲ ಕಡೆಯಿಂದ ಬಜಾಜ ಡಿಸ್ಕವರಿ ಮೋಟಾರ ಸೈಕಲ ನಂ ಕೆಎ,-32 ಇಸಿ-2622 ನೇದ್ದರ ಚಾಲಕ ಅಪರಿಚಿತ ಗಂಡು ಮನುಷ್ಯ ಅಂದಾಜು 23 ವಯಸ್ಸಿನವನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದವನೆ ಮೋಟಾರ ಸೈಕಲದೊಂದಿಗೆ ರೋಡಿನ ತೆಗ್ಗಿನಲ್ಲಿ ಕಲ್ಲುಗಳಲ್ಲಿ ಬಿದ್ದಿದ್ದು ತಲೆಯ ಹಿಂಭಾಗಕ್ಕೆ ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ. ಸದರಿ ವ್ಯಕ್ತಿಯ ಮೃತನ ಸಂಬಂಧಿಕರ ಬಗ್ಗೆ ಪತ್ತೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ವೀರಣ್ಣ ತಂ ಶಿವಶರಣಪ್ಪ ಏರಿ ಸಾ|| ತಡಕಲ ಕ್ರಾಸ ತಾ|| ಜಿ||ಗುಲಬರ್ಗಾರವರು ದೂರು ಸಲ್ಲಿಸಿದ  ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 53/2013 ಕಲಂ, 279, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಶಹಾಬಾದ ಪೊಲೀಸ್ ಠಾಣೆ:ಶ್ರೀ ಸಂಬಾಜಿ ತಂದೆ ರಾಣಪ್ಪಾ ಸೂಲದವರ ಸಾ:ಐತವಾರ ಫೈಲ ಶಹಾಬಾದರವರು ನನ್ನ ತಮ್ಮನಾದ ರಾಜ ಕಮಲ @ ಗುಂಡು ತಂದೆ ರಾಣಪ್ಪಾ ಇತನು ಮನೆಗೆ ದಿನಾಂಕ:24/04/2013 ರಂದು ರಾತ್ರಿ 9.30 ಪಿಎಂಕ್ಕೆ ಮನೆಯಲ್ಲಿದ್ದ ನನ್ನ ತಾಯಿ ಸೀತಾಬಾಯಿ ಇವಳಿಗೆ ಅವಾಚ್ಯವಾಗಿ ಬೈದು  ಕಪಾಳ ಮೇಲೆ ಕೈಯಿಂದ ಹೊಡೆದನು. ಜಗಳ ಬಿಡಿಸಲು ಹೋದಾಗ ನನಗೂ ಅವಾಚ್ಯ ಶಬ್ದಗಳಿಂದ ಬೈದು ಕಲ್ಲಿನಿಂದ ಎತ್ತಿ ನನಗೆ ಕೊಲೆ ಮಾಡುವ ಉದ್ದೇಶದಿಂದ ನನ್ನ ತಲೆಯ ಮೇಲೆ ಹಾಕಲು ಬಂದಾಗ ನಾನು ತಪ್ಪಿಸಿಕೊಂಡಿರುತ್ತೆನೆ.ಹಾಗೂ ನನ್ನ ಹೆಂಡತಿ ಸಂಗಡ ಸಹ ಅಸಸ್ಯವಾಗಿ ನಡೆದುಕೊಂಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:90/2013  ಕಲಂ:341,323,504,354.506,307 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ವಿದ್ಯುತ್ ತಂತಿ ತಗಲಿ ಕಾರ್ಮಿಕ ಸಾವು:
ಶಹಾಬಾದ ಪೊಲೀಸ್ ಠಾಣೆ:ದಿನಾಂಕ: 25/04/2013 ರಂದು ನಸುಕಿನ ಜಾವ 5-00 ಗಂಟೆ ಸುಮಾರಿಗೆ ಲಾರಿ ನಂ; ಸಿಎನಕ್ಯೂ ನಂ:6038 ನೇದ್ದರ ಚಾಲಕನಾದ ಖಾದರಸಾಬ ಮುಲ್ಲಾ ತಂದೆ ಮೊಹ್ಮದ ಗೌಸ ಮುಲ್ಲಾ ಹಾಗೂ ಲಾರಿಯ ಮಾಲಿಕನಾದ ಗೊಖುಲ ಕನಸೆ ಹಾಗೂ ನನ್ನ ಕಾಕನಾದ ಯಲ್ಲಪ್ಪಾ ತಂದೆ ಚನ್ನಬಸಪ್ಪಾ ನಿಂಬಾಳ ವಯಾ|| 50 ಸಾ:ಗ್ಯಾಂಗಬೌಡಿ ರವರು ಲಾರಿಯಲ್ಲಿ ಕಿರಾಣಿ ಸಾಮಾನುಗಳು ತುಂಬಿಕೊಂಡು ಶಹಾಬಾದದ ಪೇಮಸ್ ಕಿರಾಣಿ ಅಂಗಡಿಗೆ ತಂದು ಸಾಮಾನುಗಳನ್ನು ಇಳಿಸಬೇಕಾಗಿರುವದರಿಂದ ಕಿರಾಣ ಅಂಗಡಿಯ ಎದುರುಗಡೆ ರೋಡಿನ ಬಲಗಡೆ ಕೆ.ಇ.ಬಿ.ಯ ಹೈ ಪವರ್‌ ತಂತಿ ಇರುವ ಜಾಗದಲ್ಲಿ ಲಾರಿ ಚಾಲಕ ಲಾರಿಯನ್ನು ನಿಲ್ಲಿಸಿದನು. ಲಾರಿಯಲ್ಲಿದ್ದ ಲಾರಿ ಮಾಲಿಕ ಗೊಖುಲ ಇತನು ನನ್ನ ಕಾಕ ಯಲ್ಲಪ್ಪಾ ಇತನಿಗೆ ಲಾರಿಯ ಕ್ಯಾಬಿನ ಮೇಲಿದ್ದ ಕಿರಾಣಿ ಸಾಮಾನುಗಳು ಇಳಿಸು ಅಂತಾ ಹೇಳಿದ್ದರಿಂದ ಕ್ಯಾಬಿನ ಮೇಲೆ ಇದ್ದ ಕಿರಾಣಿ ಸಾಮಾನುಗಳನ್ನು ಬಗ್ಗಿ ತೆಗೆದುಕೊಂಡು ಮೇಲೆ ಏಳುವಷ್ಟರಲ್ಲಿ ಲಾರಿಯ ಮೇಲೆ ಇದ್ದ ಕೆ.ಇ.ಬಿ. ಹೈ ಪವರ್‌‌ ತಂತಿ ನನ್ನ ಕಾಕನ ತಲೆಗೆ ಹತ್ತಿರುವದರಿಂದ ನನ್ನ ಕಾಕನು ಕೆಳಗಡೆ ಬಿದ್ದನು, ನನ್ನ ಕಾಕನ ತಲೆಗೆ ಬಾರಿ ಪೆಟ್ಟಾಗಿ ತಲೆಯಿಂದ ರಕ್ತ ಬರುತ್ತಿದ್ದು, ಮೂಗಿನಿಂದ ರಕ್ತ ಬರುತ್ತಿತ್ತು. ನಾನು ಮತ್ತು ಲಾರಿ ಚಾಲಕ ಹಾಗೂ ಲಾರಿ ಮಾಲಿಕ ಕೂಡಿಕೊಮಡು ಉಪಚಾರ ಕುರಿತು ಆಸ್ಪತ್ರೆಗೆ ತರುವಷ್ಟರಲ್ಲಿ ದಾರಿ ಮಧ್ಯದಲ್ಲಿ ಮೃತ ಪಟ್ಟಿರುತ್ತಾನೆ ಅಂತಾ ಶ್ರೀ,ಅಂಬೋಜಿ ತಂದೆ ತುಳಜಾರಾಮ ನಿಂಬಾಳ ಸಾ:ಮೊರಟಗಿ ತಾ:ಸಿಂದಗಿ ಜಿ:ಬಿಜಾಪುರರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 94/2013 ಕಲಂ, 304 (ಎ) ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: