Police Bhavan Kalaburagi

Police Bhavan Kalaburagi

Saturday, April 6, 2013

GULBARGA DISTRICT REPORTED CRIMES


ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಬಗ್ಗೆ:
ಚಿತ್ತಾಪೂರ ಪೊಲೀಸ್ ಠಾಣೆ:ದಿನಾಂಕ.05/04/2013 ರಂದು ಸಾಯಂಕಾಲ 4-00 ಗಂಟೆ ಸುಮಾರಿಗೆ  ಚಿತ್ತಾಪೂರ ಸಾರ್ವತ್ರಿಕ ವಿಧಾನ ಸಭೆ ಚುನಾವಣೆಗೆ ಕರ್ತವ್ಯದಲ್ಲಿ ನಿರತನಾಗಿದ್ದಾಗ ಸಾಯಂಕಾಲ 4-00 ಗಂಟೆ ಸುಮಾರಿಗೆ ಚಿತ್ತಾಪುರ ಪಟ್ಟಣದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಿದ್ದರೂ ಸಹಿತ ಚಿತ್ತಾಪೂರ ಮತಕ್ಷೇತ್ರದ ಕೆ.ಜೆ.ಪಿ ಪಕ್ಷದ ಅಭ್ಯರ್ಥಿಯಾದ  ಶ್ರೀ ಸಿ.ಗುರುನಾಥ ರವರು ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿ ಸಾರ್ವಜನಿಕ ಸ್ಥಳದಲ್ಲಿ ಪೋಸ್ಟರ ಅಂಟಿಸಿ ಬಹಿರಂಗ ಸಭೆ ನಡೆಸಿರುತ್ತಾರೆ,ಅಂತಾ ಚುನಾವಣೆ ಕರ್ತವ್ಯದ ಪ್ಲ್ಯಾಯಿಂಗ ಸ್ಕ್ವಾಡ್ ಅಧಿಕಾರಿಯವರಾದ ಶ್ರೀ ಫೀರೋಜ್. ಟಿ ಉಪ ನಿಬಂಧಕರು  ಗುಲಬರ್ಗಾ ಪ್ಲ್ಯಾಯಿಂಗ ಸ್ಕ್ವಾಡ್ ಚಿತ್ತಾಪುರ  ರವರು ವರದಿ ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ:37/2013 ಕಲಂ, 3 ಕರ್ನಾಟಕ ಓಪನ್ ಪ್ಲೇಸ್ ಪ್ರಿವೆನ್ಸನ್ ಆಪ್ ಡಿಸಫಿಗರಮೆಂಟ್ ಆಕ್ಟ್ 1981  ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ಶ್ರೀಮತಿ, ಲಕ್ಕಮ್ಮ ಗಂಡ ಚಂದಪ್ಪಾ ಕರಗರ ಸಾ|| ನವನಿಹಾಳ ತಾ||ಜಿ|| ಗುಲಬರ್ಗಾ ರವರು ನಮ್ಮ ಮನೆಯಲ್ಲಿ ಸಾಕಿರುವ ನಾಯಿಯು ಬಂಡಪ್ಪಾ ತಂದೆ ಬೀರಪ್ಪಾ ರವರ ಮನೆಯ ಮುಂದಿನ ಅಂಗಳದಲ್ಲಿ ಹೋಗಿ ಹೊಲಸು ಮಾಡುತ್ತಿದ್ದಾಗ ನಿಂಗಮ್ಮ ಇವಳು ನಾಯಿಗೆ ಕಲ್ಲಿನಿಂದ ಹೊಡೆದು ಓಡಿಸುತ್ತಿದ್ದಾಗ ನಾಯಿಗೆ ಯಾಕೆ ಹೊಡೆದಿದ್ದೀರಿ ಅಂತಾ ಕೇಳಿದ್ದಕ್ಕೆ ಬಂಡಪ್ಪಾ, ಕಲ್ಲಪ್ಪಾ, ಸಂಗಪ್ಪಾ, ರಾಯಪ್ಪಾ, ಉಷಾಭಾಯಿ, ನಿಂಗಮ್ಮ ರವರೆಲ್ಲರೂ ಕೂಡಿಕೊಂಡು ತಲವಾರ, ಕೊಯಿತಾ, ಬಡಿಗೆ, ಕಲ್ಲಿನಿಂದ ಹೊಡೆದಿರುತ್ತಾರೆ, ಜಗಳ ಬಿಡಿಸಲು ಬಂದ ನನ್ನ ಮಗ ಪ್ರಭಾಕರ ತನು ಜಗಳ ಬಿಡಿಸಲು ಬಂದಾಗ ಆತನಿಗೂ ಸಹ ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆ ಬಡೆ ಮಾಡಿರುತ್ತಾರೆ ಅಂತಾ ಲಕ್ಕಮ್ಮ ರವರು ದೂರು ಸಲ್ಲಿಸಿದ್ದರಿಂದ ಠಾಣೆ ಗುನ್ನೆ ನಂ: 28/2013 ಕಲಂ, 143, 147, 148, 341, 323, 324, 326, 354, 504, 506 (1) ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.
ಹಲ್ಲೆ ಪ್ರಕರಣ:
ಕಮಲಾಪೂರ ಪೊಲೀಸ್ ಠಾಣೆ: ಶ್ರೀ,ಬಂಡಪ್ಪಾ ತಂದೆ ಬೀರಪ್ಪಾ ನಾಗೂರ ಸಾ|| ನವನಿಹಾಳ ತಾ||ಜಿ|| ಗುಲಬರ್ಗಾ ರವರು, ಲಕ್ಕಮ್ಮ ಇವರು  ಸಾಕಿದ ನಾಯಿ ನಮ್ಮ ಮನೆಯ ಮುಂದಿನ ಅಂಗಳದಲ್ಲಿ ಬಂದು ಹೊಲಸು ಮಾಡುತ್ತಿದ್ದಾಗ ನನ್ನ  ತಾಯಿಯಾದ  ನಿಂಗಮ್ಮ ಇವಳು ನಾಯಿಗೆ ಕಲ್ಲಿನಿಂದ ಹೊಡೆದು ಓಡಿಸುತ್ತಿದ್ದಾಗ ಲಕ್ಕಮ್ಮ ಇವಳು ಬಂದು ತನ್ನ ನಾಯಿಗೆ ಯಾಕೆ ಹೊಡೆದಿದ್ದೀರಿ ಅಂತಾ ಕೇಳುತ್ತಿದ್ದಾಗ. ಆಕೆಯ ಮಗಳಾದ ಪ್ರಭಾಕರ ತನು ಬಂದವನೇ ನಮ್ಮೊಂದಿಗೆ ಜಗಳ ತೆಗೆದು ತನ್ನಲ್ಲಿರುವ ಕೊಯಿತಾದಿಂದ ನನ್ನ ಕೈಗಳಿಗೆ ಹೊಡೆದು ರಕ್ತಗಾಯ ಪಡಿಸಿರುತ್ತಾನೆ. ಹಾಗೂ ಎಲ್ಲೆ ಬಿದ್ದಿರುವ ಕಲ್ಲಿನಿಂದ  ಎದೆಯ ಮೇಲೆ ಒಗೆದು ಗುಪ್ತಗಾಯ ಪಡಿಸಿರುತ್ತಾನೆ, ನನ್ನ ತಾಯಿಗೆ ಲಕ್ಕಮ್ಮ ಇವಳು ಅವಮಾನ ಮಾಡಿ ನೂಕಿಸಿಕೊಟ್ಟಿರುತ್ತಾರೆ. ಕೃಷ್ಣಮ್ಮ , ಮತ್ತು ರೇವಣಸಿದ್ದಪ್ಪಾ ರವರು ಸಹ ಕಲ್ಲಿನಿಂದ ಮತ್ತು ಬಡಿಗೆಯಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ: 29/2013 ಕಲಂ, 341, 323, 324, 354, 506 (1) ಸಂಗಡ 34 ಐಪಿಸಿ  ಪ್ರಕಾರ ಪ್ರಕರಣ ದಾಖಲಾಗಿರುತ್ತದೆ.

No comments: