Police Bhavan Kalaburagi

Police Bhavan Kalaburagi

Tuesday, April 2, 2013

GULBARGA DISTRICT

::  ಪೊಲೀಸ್ ದ್ವಜಾ ದಿನಾಚರಣೆ::

ಗುಲಬರ್ಗಾ ಜಿಲ್ಲಾ ಸಶಸ್ತ್ರ ಕವಾಯತ್ ಮೈದಾನದಲ್ಲಿ ದಿನಾಂಕ:02-04-2013 ರಂದು ಬೆಳಿಗ್ಗೆ 8-00 ಗಂಟೆಗೆ ಹಮ್ಮಿಕೊಂಡಿದ್ದ ಪೊಲೀಸ್ ದ್ವಜಾ ದಿನಾಚರಣೆ ಕಾರ್ಯಕ್ರಮಕ್ಕೆ ಮಾನ್ಯ ಶ್ರೀ ಮಹಮದ ವಜೀರ್ ಅಹಮದ ಪೊಲೀಸ್ ಮಹಾ ನಿರೀಕ್ಷಕರು ಈಶಾನ್ಯ ವಲಯ ಗುಲಬರ್ಗಾ ರವರು ಅಧ್ಯಕ್ಷತೆ ಹೊಂದಿದ್ದರು. ಪೊಲೀಸ್ ದ್ವಜಾ ದಿನಾಚರಣೆ ಕಾರ್ಯಕ್ರಮಕ್ಕೆ ಶ್ರೀ ವೀರಣ್ಣಾ ಕುಂಬಾರ ನಿವೃತ್ತ ಪಿ.ಎಸ.ಐ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಪರೇಡ್ ವಂದನೆ ಸ್ವೀಕರಿಸಿದರು. ಮಾನ್ಯ ಐ.ಜಿ.ಪಿ ಸಾಹೇಬರು ಸಿಬ್ಬಂಧಿಯವರನ್ನು ಉದ್ದೇಶಿಸಿ ಮಾತನಾಡಿ ಪೊಲೀಸ್ ಸಿಬ್ಬಂದಿಯವರು ತಮ್ಮ ಆರೋಗ್ಯದ ಕಡೆ ಗಮನ ಹರಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವಂತೆ ಕರೆ ನೀಡಿದರು, ಮಾನ್ಯ ಶ್ರೀ,ಎನ್.ಸತೀಷಕುಮಾರ ಐ.ಪಿ.ಎಸ್,.ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು  ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಅಪರಾದದಲ್ಲಿ ನೊಂದವರಿಗೆ ಸಹಾಯ ಮತ್ತು ಸಹಾನುಬೂತಿ ವ್ಯಕ್ತ ಪಡಿಸುವಂತೆ ಕರೆ ನೀಡಿದರು. ಹಾಗು ಪೊಲೀಸ್ ಸಿಬ್ಬಂದಿಯವರಿಗೆ ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಸೂಚಿಸಿ,  ಸಿಬ್ಬಂದಿಯವರು ತಮ್ಮ ಕುಟುಂಬದ ಕಡೆ ಮತ್ತು ತಮ್ಮ ಮಕ್ಕಳ ವಿಧ್ಯಾಭ್ಯಾಸದ ಕಡೆ ಗಮನ ಹರಿಸುವಂತೆ ಸಲಹೆ ನೀಡಿದರು. ಹಾಗೂ ಜಿಲ್ಲೆಯ ವಿವಿಧ ಕಡೆಗಳಿಂದ ಈ ಕಾರ್ಯಕ್ರಮದಲ್ಲಿ ಹಾಜರಾಗಿರುವವ ನಿವೃತ್ತ ಪೊಲೀಸ್ ಸಿಬ್ಬಂದಿಯವರಿಗೆ ಅಭಿನಂದನೆ ಸಲ್ಲಿಸಿದರು.  ಮಾನ್ಯ ಶ್ರೀ ಕಾಶಿನಾಥ ತಳಕೇರಿ, ಅಪರ್ ಪೊಲೀಸ್ ಅಧೀಕ್ಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, 

No comments: