ಮನುಷ್ಯ ಕಾಣೆಯಾದ ಪ್ರಕರಣ:
ಫರತಬಾದ ಪೊಲೀಸ್ ಠಾಣೆ:ದಿನಾಂಕ:15-05-2013 ರಂದು ಬೆಳಿಗ್ಗೆ 8-00 ಗಂಟೆ ಸುಮಾರಿಗೆ ಜೋಗುರ ಗ್ರಾಮದಲ್ಲಿ ವಕೀಲ ಎಂಬುವವರ ಹೊಲದಲ್ಲಿ ಮನೆ ಕಟ್ಟುವ ಸಲುವಾಗಿ ನನ್ನ ಗಂಡ ನಾಗು @ ನಾಗರಾಜ, ಆನಂದ, ರವಿ, ಶಂಕರ, ಮತ್ತು ಸೈದಪ್ಪ ಮಾನಕರ ಇವರೆಲ್ಲರೂ ಜೋಗೂರು ಗ್ರಾಮದಲ್ಲಿ ಕೆಲಸಕ್ಕೆ ಹೋಗಿತ್ತಿದ್ದರು. 15 ನೇ ತಾರಿಖಿನ ರಾತ್ರಿಯಿಂದ ನನ್ನ ಗಂಡ ಮನೆಗೆ ಬಾರದೆ ಇರುವುದರಿಂದ ದಿನಾಂಕ:21-05-2013 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಫೊನ ಮಾಡಿ ನನ್ನ ಗಂಡ ನಾಗರಾಜ ಇತನು ಮನೆಗೆ ಬಂದಿರುವುದಿಲ್ಲಾ ಅಲ್ಲೆ ಇದ್ದಾನೆ ಹೇಗೆ ಅಂತಾ ಕೇಳಲು ಅವರು ದಿನಾಂಕ:20-05-2013 ರಂದು ಬೆಳಿಗ್ಗೆ 6-00 ಗಂಟೆಗೆ ನಮ್ಮ ಹತ್ತಿರದ ಒಂದು ಅಂಗಿಯನ್ನು ತೆಗೆದುಕೊಂಡು ಗುಲಬರ್ಗಾಕ್ಕೆ ಹೋಗುತ್ತೆನೆ ಅಂತಾ ಹೋಗಿರುತ್ತಾನೆ, ಆದರೆ ಅವನ ಜೊತೆಗೆ ಕೆಲಸ ಮಾಡುವವರು ಇಲ್ಲೆ ಇದ್ದಾರೆ ಅಂತಾ ತಿಳಿಸಿದನು. ನಾನು ಮತ್ತು ನಮ್ಮ ಅತ್ತೆ ಕಲ್ಪನಾ ಇಬ್ಬರೂ ಜೋಗುರು ಗ್ರಾಮದ ಹೋಲಕ್ಕೆ ಹೋಗಿ ಕೆಲಸ ಮಾಡುವವರೆಗೆ ಕೇಳಲು ಸೈದಪ್ಪಾ ಅನ್ನುವವನು ನಾವೆಲ್ಲರೂ ದಿನಾಂಕ:19-05-2013 ರಂದು ಊಟ ಮಾಡಿ ಮಲಗಿದ್ದು, ಶಂಕರ ಇತನು ಬೇರೆ ಕಡೆಗೆ ಮಲಗಿದನು. ಬೆಳಿಗ್ಗೆ 5-00 ಗಂಟೆಗೆ ಎದ್ದು ನೋಡಲು ನಾಗರಾಜ ಇತನು ಕಾಣಲಿಲ್ಲಾ ಆಗ ನಾನು ನನ್ನ ಜೋತೆ ಇರುವ ಶಂಕರನಿಗೆ ಕೇಳಲು ರಾತ್ರಿ ನನ್ನ ಹತ್ತಿರ ಬೀಡಿ ಇಸಿದುಕೊಂಡು ಸೇದಿ ಹೋಗಿರುತ್ತಾನೆ ಅಂತಾ ತಿಳಿಸಿದರು. ನನ್ನ ಗಂಡನಾದ ನಾಗು @ ನಾಗರಾಜ ತಂದೆ ಶಿವಕುಮಾರ ಜಾಧವ ವಯ: 30 ವರ್ಷ ಜಾ: ವಡ್ಡರ ಉ: ಗೌಂಡಿಕೆಲಸ ಸಾ: ವಡ್ಡರ ಗಲ್ಲಿ ಬ್ರಹ್ಮಪೂರ ಗುಲಬರ್ಗಾ ಇತನು ನಾವು ಹುಡಕಾಡಿದರೂ ಇಲ್ಲಿಯವರೆಗೆ ಸಿಕ್ಕಿರುವುದಿಲ್ಲಾ ಅಂತಾ ಶ್ರೀಮತಿ ಮಲ್ಲಮ್ಮ ಗಂಡ ನಾಗು @ ನಾಗರಾಜ ಜಾಧವ ವಯಾ||25 ವರ್ಷ ಜಾ: ವಡ್ಡರ ಸಾ:ವಡ್ಡರ ಗಲ್ಲಿ ಬ್ರಹ್ಮಪೂರ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:74/2013 ಕಲಂ, ಮನುಷ್ಯ ಕಾಣೆ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment