ಹಲ್ಲೆ ಪ್ರಕರಣ:
ಸೇಡಂ ಪೊಲೀಸ್ ಠಾಣೆ: ಶ್ರೀ. ಸಾಯಬಣ್ಣ ತಂದೆ ದೇವಿಂದ್ರಪ್ಪ ನಾಯ್ಕೋಡಿ, ವಯ:67 ವರ್ಷ, ಜಾತಿ:ಬೇಡರ, ಉ:ನಿವೃತ್ತ ನೌಕರರು, ಸಾ:ಶೆಟ್ಟಿ ಹೂಡಾ, ತಾ:ಸೇಡಂ ರವರು ನನಗೆ ಚಂದ್ರಕಾಂತ ಮತ್ತು ದೇವಿಂದ್ರಪ್ಪ ಅಂತ ಇಬ್ಬರು ಗಂಡು ಮಕ್ಕಳಿದ್ದು, ಇಬ್ಬರಿಗೂ ಮದುವೆ ಆಗಿದ್ದು ಬೇರೆ-ಬೇರೆ ಮನೆಯಲ್ಲಿ ವಾಸವಾಗಿರುತ್ತಾರೆ, ನನ್ನ ಹಿರಿಯ ಮಗನಾದ ಚಂದ್ರಕಾಂತ ಇತನು ನನಗೆ ಆಸ್ತಿಯಲ್ಲಿ ಪಾಲು ಸರಿಯಾಗಿ ಕೊಟ್ಟಿಲ್ಲ ಅಂತಾ 2-3 ವರ್ಷಗಳಿಂದ ನನ್ನೊಂದಿಗೆ ಜಗಳ ಮಾಡುತ್ತಿದ್ದು ಈ ವಿಷಯದಲ್ಲಿ ಜಗಳವಾಗಿ ಹೊಡೆಬಡೆ ಆಗಿದ್ದರಿಂದ ಈ ಮೊದಲು ಪ್ರಕರಣ ದಾಖಲಾಗಿದೆ. ಅದೇ ವೈಮನಸ್ಸು ಇಟ್ಟುಕೊಂಡು ದಿನಾಂಕ:19-05-2013 ರಂದು ಮಧ್ಯಾಹ್ನ 12 ಗಂಟೆಗೆ ಶೆಟ್ಟಿ ಹುಡಾದ ವಾಲ್ಮಿಕಿ ನಗರದ ಮನೆಯಲ್ಲಿರುವಾಗ ಚಂದ್ರಕಾಂತನ ಮಗನಾದ ಗಣೇಶ ನಾಯ್ಕೋಡಿ ಇತನು ಮನೆಯೊಳಗೆ ಬಂದು ಮನೆಯಲ್ಲಿದ್ದ ಮಂಚ, ಪ್ಲಾಸ್ಟಿಕ್ ಕುರ್ಚಿಗೆ ಮತ್ತು ಇತರೆ ಮನೆಯ ಸಾಮಾನುಗಳನ್ನು ಚೆಲ್ಲಾಪಿಲ್ಲಿ ಮಾಡಿ ಒಡೆದು ಹಾಕಿ, ಅವಾಚ್ಯ ಶಬ್ದಗಳಿಂದ ಬೈದು ಬಡಿಗೆಯಿಂದ ಹೊಡೆದು ಬಲಗಾಲಿಗೆ ಗುಪ್ತಗಾಯ ಪಡಿಸಿರುತ್ತಾನೆ. ಈ ಘಟನೆಗೆ ಚಂದ್ರಕಾಂತ, ಭಾಗ್ಯಲಕ್ಷ್ಮೀ ಮತ್ತು ಅವರ ತಾಯಿಯ ಸಂಬಂಧಿಯಾದ ಭದ್ರಿ ಇವರ ಪ್ರಚೋದನೆಯೇ ಕಾರಣವಾಗಿರುತ್ತದೆ. ಅಂತ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 134/2013 ಕಲಂ,448, 324, 504, 506, 109 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment