ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ದಿನಾಂಕ:12-05-2013 ರಂದು ಮದ್ಯಾಹ್ನ 2-30 ಗಂಟೆ ಸುಮಾರಿಗೆ ಶ್ರೀ ಚಂದ್ರಶೇಖರ ತಿಗಡಿ ಪಿ,ಎಸ್,ಐ, ಹೆಚ್ವುವರಿ ಸಂಚಾರಿ ಪೊಲೀಸ ಠಾಣೆ ರವರು ಮತ್ತು ಅವರ ಸಿಬ್ಬಂದಿಯೊಂದಿಗೆ ಪೆಟ್ರೊಲಿಂಗ ಕರ್ತವ್ಯದ ಮೇಲಿರುವಾಗ ಮೋಟಾರ ಸೈಕಲ ನಂಬರ ಕೆಎ-32 ಆರ್-9125 ನೇದ್ದರ ಮೇಲೆ ಮನೋಹರ ಇತನು ಮಧ್ಯಪಾನ ಮಾಡಿ ಮೋಟಾರ ಸೈಕಲ್ ಮೇಲೆ ಇಬ್ಬರನ್ನು ಕೂಡಿಸಿಕೊಂಡು ಕುಳಗೇರಿ ಕ್ರಾಸ್ ಕಡೆಯಿಂದ ಲಾಹೋಟಿ ಕ್ರಾಸ್ ಕಡೆಗೆ ಇತರ ವಾಹನ ಸವಾರರಿಗೆ ಭಯ ಹುಟ್ಟುವಂತೆ ವಾಹನ ಚಲಾಯಿಸಿಕೊಂಡು ಬರುತ್ತಿರುವದನ್ನು ಗಮನಿಸಿ ಆತನ ಮೇಲೆ ಠಾಣೆ ಗುನ್ನೆ ನಂ:37/2013 ಕಲಂ, 279, 185, 177 ಐಪಿಸಿ ಸಂಗಡ 185, ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ದಿನಾಂಕ:12-05-2013 ರಂದು ಸಾಯಂಕಾಲ 4-30 ಗಂಟೆ ಸುಮಾರಿಗೆ ಮಾಸಾಪ್ತಿ ದರ್ಗಾದ ಹತ್ತಿರ ಗಿಡದ ಕೆಳಗೆ ನೂರಂದಯ್ಯಾ ತಂದೆ ಕಲ್ಲಯ್ಯಾ ಸ್ವಾಮಿ ಮಠಪತಿ ಸಾ;ರೋಜಾ (ಬಿ). 2) ಸಂತೋಷ ತಂದೆ ಬಾಲಾಜಿ ಗಾಜಿಲೆ ಸಾ;ರಾಮನಗರ ಗುಲಬರ್ಗಾ.3) ಶರಣು ತಂದೆ ಬಂಡೆಪ್ಪಾ ಮಹಾಗಾಂವ ಸಾ;ಮಹಾಗಾಂವ ತಾ;ಜಿ ಗುಲಬರ್ಗಾ,4) ಭೀಮಾಶಂಕರ ತಂದೆ ಬಸವರಾಜ ಹೂಗಾರ ಸಾ; ಇಂಗನಕಲ್ಲ ತಾ;ಚಿತ್ತಾಪೂರ,5) ರಾಚಣ್ಣಾ ತಂದೆ ಸುಭಾಷ ಚುಂಚಕೋಟಿ ಸಾ;ಆರ್.ಎಸ್. ಕಾಲೂನಿ ಗುಲ್ಬರ್ಗಾ,6) ಆನಂದ ತಂದೆ ಮಲ್ಕಪ್ಪಾ ಸೂಗುರ ಸಾ;ಕೆ.ಕೆ.ನಗರ ಗುಲಬರ್ಗಾ,7)ಲಿಂಬಾಜಿ ತಂದೆ ಶಂಕರ ಸಿಂಧೆ ಸಾ;ಕೆ.ಕೆ.ನಗರ ಗುಲಬರ್ಗಾ,8) ವಿಠಲ ತಂದೆ ತುಳಸಿರಾಮ ಸಿಂಧೆ ಸಾ;ಕೆ.ಕೆ.ನಗರ ಗುಲಬರ್ಗಾ ರವರು ಅಂದರ ಬಾಹರ ಜೂಜಾಟವನ್ನು ಆಡುತ್ತಿದ್ದಾಗ ಪಿ.ಎಸ.ಐ ಸಿದ್ದರಾಯ ಬಳೂರ್ಗಿ ರವರು ಮತ್ತು ಅವರ ಸಿಬ್ಬಂದಿಯವರು ದಾಳಿ ಮಾಡಿ ಜೂಜಾಟಕ್ಕೆ ಬಳಸಿದ ಹಣ ನಗದು ಹಾಗೂ ಇಸ್ಪೇಟ ಎಲೆಗಳು ವಶಪಡಿಸಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 239/2013 ಕಲಂ, 87 ಕೆ.ಪಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ.
No comments:
Post a Comment