ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ:ಶ್ರೀ ಆನಂದ ತಂದೆ ಶರಣಪ್ಪಾ
ಕೌವಲಗಿ ಸಾ:ಭೋಸಗಾ (ಕೆ) ತಾ||ಜೇವರ್ಗಿ ಹಾ:ವ:ಯಡವನಹಳ್ಳಿ ಕಾಂಪ ಲೆಕ್ಸ ಬಿದ್ದಾಪುರ ಕಾಲೋನಿ ಗುಲಬರ್ಗಾರವರು
ದಿನಾಂಕ:12/05/2013 ರಂದು ಮಧ್ಯಾಹ್ನ 3:30 ಗಂಟೆ ಸುಮಾರಿಗೆ ಹೀರಾಪುರ ಪೆಟ್ರೋಲ ಪಂಪಗೆ ಬರುವ
ಕುರಿತು ಕಾಂತಾ ಕಾಲೋನಿ ಕ್ರಾಸ ಹತ್ತಿರ ಬರುವಾಗ ಎದುರಗಡೆಯಿಂದ ಹಿರೋ ಹೊಂಡಾ ಸ್ಪ್ಲೇಡರ ಮೋಟಾರ
ಸೈಕಲ ನಂ ಕೆಎ-32 ಕ್ಯೂ-5477 ನೇದ್ದರ ಮೇಲೆ ಇಬ್ಬರು ಸವಾರರು ಅಡ್ಡಾ-ತಿಡ್ಡಿಯಾಗಿ ಅತೀವೇಗದಿಂದ
ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದವರೆ ನಾನು ಕುಳಿತುಕೊಂಡು ಬರುತ್ತಿದ್ದ ನನ್ನ ಮೋಟಾರ
ಸೈಕಲಕ್ಕೆ ಜೋರಾಗಿ ಡಿಕ್ಕಿ ಪಡಿಸಿದ್ದರಿಂದ ನಾನು ಮೋಟಾರ ಸೈಕಲ ಸಮೇತ ಕೆಳಗೆ ಬಿದ್ದಿದರಿಂದ ನನಗೆ
ಮತ್ತು ಡಿಕ್ಕಿ ಪಡಿಸಿದ ಮೋಟಾರ ಸೈಕಲ ಸವಾರನಿಗೆ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ
ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:240/2013 ಕಲಂ, 279, 337, 338 ಐಪಿಸಿ ಪ್ರಕಾರ ಪ್ರಕರಣ
ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ಶ್ರೀಮತಿ, ಮಮತಾಜ ಬೇಗಂ ಗಂಡ ಗೌಸ್ ಪಟೇಲ ಸಾಃ ಮಹಿಬೂಬ ನಗರ ಗುಲಬರ್ಗಾರವರು ದಿನಾಂಕ:12-05-2013 ರಂದು ಸಾಯಂಕಾಲ 7-00 ಗಂಟೆ ಸುಮಾರಿಗೆ ಮಹಿಬೂಬ ನಗರದಲ್ಲಿರುವ ಮದಿನಾ
ಮಜೀದ ಹತ್ತಿರ ನಾನು ಮತ್ತು ನನ್ನ ಮಗ ಜಿಶಾನ ಇಬ್ಬರು ಕೂಡಿ ನಡೆದುಕೊಂಡು ಹೋಗುತ್ತಿದ್ದಾಗ
ಯಾದುಲ್ಲಾ ಕಾಲೋನಿ ಕಡೆಯಿಂದ ಟವೇರಾ ಜೀಪ ನಂ. ಕೆಎ-17 ಎಮ್. ಸಿ-3355 ನೇದ್ದರ ಚಾಲಕನು ತನ್ನ
ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗನಿಗೆ ಅಪಘಾತ ಪಡಿಸಿ ತನ್ನ
ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:29/2013 ಕಲಂ 279,337 ಐಪಿಸಿ ಸಂಗಡ 187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment