ಹಲ್ಲೆ ಪ್ರಕರಣ ಮತ್ತು ಜಾತಿ ನಿಂದನೆ ಪ್ರಕರಣ:
ದೇವಲ ಗಾಣಗಾಪೂರ ಪೊಲೀಸ್ ಠಾಣೆ:ಶ್ರೀ, ರಾಜಕುಮಾರ ತಂದೆ ಮಾರುತಿ ಭಜಂತ್ರಿ ಜಾತಿ; ಭಜಂತ್ರಿ ಸಾ|| ಚೌಡಾಫೂರ ತಾ|| ಅಫಜಲಪೂರ ರವರು ನಾನು ಮತ್ತು ಮಹಾಂತಪ್ಪ ತಳಕೇರಿ ಪಂಚಾತ ಸದಸ್ಯ ಇಬ್ಬರು ಕೂಡಿ ಪಂಚಾಯತಿಯ ಅಭಿವೃದ್ದಿ ಅಧಿಕಾರಿಯಾದ ಪ್ರಮೋದ ಮೋರೆ ಇವರಿಗೆ ಫೋನ ಮಾಡಿ 8 ತಿಂಗಗಳಿಂದ ಪಂಚಾಯತ ಸದಸ್ಯರ ಸಭೆ ಕರೆದಿರುವುದಿಲ್ಲ. ಹಾಗು ಅಭಿವೃದ್ದಿ ಕೆಲಸದ ಬಗ್ಗೆ ಮಾಹಿತಿ ಸಹ ಕೊಟ್ಟಿರುವದೆ ಇರುವದರಿಂದ ಬೇಗನೆ ಸಭೆ ಕರೆಯುವಂತೆ ಅಧ್ಯಕ್ಷರಿಗೆ ತಿಳಿಸಿದೆವು. ದಿನಾಂಕ:16-05-2013 ರಂದು ಮುಂಜಾನೆ 9-00 ಗಂಟೆ ಸುಮಾರಿಗೆ ಚೌಡಾಪೂರ ಗ್ರಾಮದಲ್ಲಿ ಅಂಬಾರಾಯ ಜಮದಾರ ಸಾ|| ಬಾದನಳ್ಳಿ ಇವರ ಮನೆಯ ಮಾರ್ಕ ಔಟ ಹಾಕಲು ನಮ್ಮೂರ ರೇವಣಪ್ಪಾ ವಾಡೇದ ನಾವು ಇಬ್ಬರೂ ಕೂಡಿಕೊಂಡು ಮಾರ್ಕ ಔಟ ಮಾಡುತ್ತಿದ್ದಾಗ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಮಲ್ಲಿನಾಥ ಜಮಾದಾರ ಇತನು ತನ್ನ ಸಂಗಡ ನಾಗಪ್ಪ ಜಮಾದರ ಮತ್ತು ಆತನ ತಮ್ಮ ಮೂಕುಂದ ಜಮಾದಾರ ರೊಂದಿಗೆ ಬಂದು ನಿನ್ನೆ ಪಿ.ಡಿ.ಓ ಅಧಿಕಾರಿಗಳಿಗೆ ಏಕೆ ಪೋನ ಮಾಡಿ ಏನು ಹೇಳಿರುವಿ ಅಂತಾ ಕೇಳಿದಾಗ ನಾನು ಪಂಚಾಯತಿ ಸಭೆ ಕರೆದು ಆಗು ಹೋಗುಗಳ ಬಗ್ಗೆ ಮಾಹಿತಿ ಕೊಡಲು ಹೇಳಿರುವುದಾಗಿ ಹೇಳಿದೆನು. ಆಗ ಮಲ್ಲಿನಾಥ ಇತನು ನಾನು ಎಂಟು ಲಕ್ಷ ಖರ್ಚು ಮಾಡಿ ಅಧ್ಯಕ್ಚ ಆಗಿರುವೆನು. ನನಗ ಲೆಕ್ಕ ಪತ್ರ ಕೇಳತೀಯಾ ಅಂತಾ ಬೈದು ಹಲ್ಲೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ರಾಜುಕಮಾರ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ:56/2013 ಕಲಂ 323,324,355,504,506 ಸಂ 34 ಐಪಿಸಿ ಮತ್ತು 3 (1)(10) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಆಳಂದ ಪೊಲೀಸ್ ಠಾಣೆ; ಶ್ರೀ, ಉಸ್ಮಾನ ತಂದೆ ಹನೀಫ ಮುಲ್ಲಾ ಸಾ: ಖಾನಾಪೂರ ರವರು ನಾನು ನನ್ನ ಮಾವನಾದ (ಹೆಂಡತಿಯ ತಂದೆ) ಖಾಜಾಬಾಯಿ ತಂದೆ ಬಾಷಾಸಾಬ ಮುಲ್ಲಾ ವಯಾ: 50 ವರ್ಷ ಸಾ: ಖಾನಾಪೂರ ಇತನು ಶ್ರೀ ಮುಸ್ತಫಾ ತಂದೆ ಬಾಬುಮೀಯಾ ಖುರೇಷಿ ಇವರ ಹತ್ತಿರ ಒಕ್ಕಲುತನ ಕೆಲಸ ಮಾಡಿಕೊಂಡಿರುತ್ತಾನೆ.ದಿನಾಂಕ:16/05/2013 ರಂದು ರಾತ್ರಿ 8.30 ಗಂಟೆ ಸುಮಾರಿಗೆ ನಿಮ್ಮ ಮಾವನಿಗೆ ಆಳಂದ ವಾಗ್ದರಿ ರೋಡಿನ ರಜಾ ಅನ್ಸಾರಿ ಇವರ ಹೊಲದ ಹತ್ತಿರ ಯಾವುದೋ ಒಂದು ವಾಹನ ಅಪಘಾತದಿಂದ ಭಾರಿ ಗಾಯ ಹೊಂದಿ ಸ್ಥಳದಲ್ಲಿ ಮೃತಪಟ್ಟಿರುವ ಬಗ್ಗೆ ತಿಳಿದುಕೊಂಡು ನಾನು ಹಾಗೂ ನಮ್ಮೂರಿನ ಜನರು ಕೂಡಿಕೊಂಡು ಆ ಸ್ಥಳಕ್ಕೆ ಹೋಗಿ ನೋಡಲು ನಮ್ಮ ಮಾವನ ಶವವು ಎರಡು ಕಾಲುಗಳ ಕಪಗಂಡ ಮುರಿದು ಭಾರಿ ರಕ್ತಗಾಯವಾಗಿದ್ದಲ್ಲದೆ ಬಲಗೈ ಮುರಿದಿದ್ದು ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲೆ ರಕ್ತ ಸೋರಿದ್ದು, ಕುತ್ತಿಗೆಗೆ ರಕ್ತಗಾಯವಾಗಿದ್ದು ಸದರಿ ನಮ್ಮ ಮಾವನಿಗೆ ಕೆಎ-32 ಎಂ-4882 ವಾಹನದ ಚಾಲಕನು ಅತಿವೇಗದಿಂದ ಹಾಗೂ ಅಲಕ್ಷತನದಿಂದ ಚಲಾಯಿಸಿ ನಮ್ಮ ಮಾವನಿಗೆ ಡಿಕ್ಕಿ ಪಡಿಸಿದ್ದರಿಂದ ಆ ಸ್ಥಳದಿಂದ 50 ಫೀಟ್ ವರೆಗೆ ಎಳೆದುಕೊಂಡು ಹೋಗಿರುತ್ತದೆ. ಸದರಿ ಘಟನೆಗೆ ಕಾರಣನಾದ ವಾಹನದ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:146/2013 ಕಲಂ 279 304 (ಎ) ಐಪಿಸಿ ಸಂ 187 ಐಎಮ್‌ವಿ ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ದಿನಾಂಕ:16/05/2013 ರಂದು ಸಾಯಂಕಾಲ 7:30 ಗಂಟೆ ಸುಮಾರಿಗೆ ನಾನು ನಮ್ಮ ಮನೆಯಲ್ಲಿದ್ದಾಗ ದತ್ತಾ ತಂದೆ ಉಮ್ಮಣ್ಣಾ ಪೂಲಾರಿ,ಇತನ ಹೆಂಡತಿ ಕಾಶಿಬಾಯಿ ಗಂಡ ದತ್ತಾ ಪೂಲಾರಿ ಹಾಗೂ ಈತನ ಅಣ್ಣನ ಹೆಂಡತಿಯಾದ ಕಸ್ತೂರಿಬಾಯಿ ಗಂಡ ಶಿವಶರಣ ಪೂಲಾರಿ ರವರು ಕೂಡಿಕೊಂಡು ಬಂದು ನಮ್ಮ ಮನೆಯ ಹೊರಗೆ ನಿಂತು ಅವಾಚ್ಯವಾಗಿ ಬೈದು ಕೈ-ಯಿಂದ ಹೊಡೆ-ಬಡೆ ಮಾಡಿರುತ್ತಾರೆ ಅಂತಾ ಶ್ರೀಮತಿ.ಮುಕ್ತಾಬಾಯಿ ಗಂಡ ಶರಣಪ್ಪ ಪೂಲಾರಿ ಸಾ:ಹಿರೋಳಿ ತಾ: ಆಳಂದ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 42/2013 ಕಲಂ: 323,354,504,506 ಸಂಗಡ 34 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲಿಸಿಕೊಡಿರುತ್ತಾರೆ.
No comments:
Post a Comment