Police Bhavan Kalaburagi

Police Bhavan Kalaburagi

Monday, May 20, 2013

GULBARGA DISTRICT REPORTED CRIMES


ಅಪಘಾತ ಪ್ರಕರಣ:
ಗುಲಬರ್ಗಾಗ್ರಾಮೀಣ ಪೊಲೀಸ ಠಾಣೆ:ಶ್ರೀ ಶಕೀಲಪಟೇಲ ತಂದೆ ಬೂರಾನ ಪಟೇಲ ವಯಾ|| 36 ವರ್ಷ ಉ:ಲಾರಿ ಚಾಲಕ ಸಾ:ಮುಗಟಾ ತಾ;ಚಿತ್ತಾಪೂರ ಹಾ:ವ:ಅಂದೇರಿ ವೀರದೇಸಾಯಿ ರೋಡ ಶಾಮನಗರ ಮುಂಬೈ ನಗರ ಮಹಾರಾಷ್ಟ್ರ ರಾಜ್ಯ ರವರು ನಾವು ದಿನಾಂಕ:19-05-2013 ರಂದು ಮಧ್ಯಾಹ್ನ 4-00 ಗಂಟೆ ಸುಮಾರಿಗೆ ಗುಲಬರ್ಗಾ ಆಳಂದ ಮುಖ್ಯ ರಸ್ತೆಯ ಭೀಮ್ಮಳ್ಳಿ ಕ್ರಾಸ ಸಮೀಪ ಹೋಗುತ್ತಿದ್ದಾಗ ಗುಲಬರ್ಗಾ ಕಡೆಯಿಂದ ಲಾರಿ ನಂಬರ ಎಮ್‌ಹೆಚ್‌ 11 ಎಎಲ್‌ 1386  ನೇದ್ದರ ಚಾಲಕ ಅಮೀರ ಪಟೇಲ ಮತ್ತು ಆಳಂದ ಕಡೆಯಿಂದ ಬಸ್ಸ ನಂಬರ ಕೆಎ 32 ಎಫ 1860 ಚಾಲಕ ಚಾಂದಸಾಬ  ಇವರಿಬ್ಬರು ಅತಿವೇಗದಿಂದ ಮತ್ತು ನಿಷ್ಕಾಳಿಜಿತನದಿಂದ ತಮ್ಮ ಸೈಡಿಗೆ ಹೋಗದೇ ಮುಖಾ ಮುಖಿ ಡಿಕ್ಕಿ ಹೊಡೆದಿದ್ದರಿಂದ ಲಾರಿ ಮತ್ತು ಬಸ್ಸು ಎರಡು ವಾಹನಗಳ  ಡ್ರೈವರ  ಸೈಡಿಗೆ  ಡಿಕ್ಕಿಯಾಗಿದ್ದರಿಂದ ಲಾರಿ ಮತ್ತು ಬಸ್ಸು  ಮುಂಭಾಗ ಚಪ್ಪಟೆಯಾಗಿದ್ದುಲಾರಿಯಲ್ಲಿ  ಡ್ರೈವರನ ಹಿಂದೆ ಕುಳಿತ ಕುಮಾರಿ ಆಪ್ರೀನ ತಂದೆ ಶಕೀಲಪಟೇಲ ವಯಾ:12ಸಾ: ಸಾ:ಮುಗಟಾ ತಾ;ಚಿತ್ತಾಪೂರ ಹಾ:ವ:ಅಂದೇರಿ ವೀರದೇಸಾಯಿ ರೋಟ ಶಾಮನಗರ ಮುಂಬೈ ನಗರ ಇವರಿಗೆ ಇವಳಿಗೆ ಬಲಗಾಲ ಮೊಳಕಾಲ ಮುರಿದು ಮಾಂಸ ಖಂಡ ಹೊರ ಬಂದು ಸ್ಥಳದಲ್ಲಿ  ಮೃತಪಟ್ಟಿದ್ದು. ಲಾರಿಯಲ್ಲಿದ್ದ ನನಗೆ ಮತ್ತು ಚಾಲಕನಿಗೆ ಹಾಗೂ ಬಸ್ಸ ಚಾಲಕ ಒಳಗಿದ್ದ ಪ್ಯಾಸೆಂಜರ ರವರಿಗೆ ಭಾರಿ ರಕ್ತಗಾಯ ಗುಪ್ತಗಾಯವಾಗಿರುತ್ತವೆ. ಕಾರಣ ಎರಡು ವಾಹನಗಳ ಚಾಲಕರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಗುನ್ನೆ ನಂ:248/2013 ಕಲಂ 279337338304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ನಾಲ್ಕು ವರ್ಷದ ಕಂದಮ್ಮನ ಮೇಲೆ ಅತ್ಯಚಾರ:
ಶಹಾಬಾದ ನಗರ ಪೊಲೀಸ್ ಠಾಣೆ:ದಿನಾಂಕ:18/05/2013 ರಂದು ಸಾಯಂಕಾಲ 5-00 ಗಂಟೆ ಸುಮಾರಿಗೆ ನಾಲ್ಕುವರ್ಷದನನ್ನಮಗಳು ಮನೆಯ ಎದುರಗಡೆ ಆಟ ಆಡುತ್ತಿರುವಾಗ ಪಕ್ಕದಮನೆಯ ಐಸಕ್ರಿಂ ಪ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಮೌಲಾಶಾ ಬಬ್ಲು ತಂದೆ ಮಹಮದಶಾ ಮಕಾನದಾರ ಸಾ:ರಾಮಾಮೊಹಲ್ಲಾ ಶಹಾಬಾದ ಇತನು ಐಸಕ್ರಿಂ ಕೊಡಿಸುತ್ತೇನೆಂದು ನನ್ನಮಗಳಿಗೆ ಎತ್ತುಕೊಂಡು ಐಸಕ್ರೀಂ ಪ್ಯಾಕ್ಟರಿಯೊಳಗೆ ಹೋಗಿ ಜಬರಿ ಸಂಬೋಗ ಮಾಡಿರುತ್ತಾನೆ ಅಂತಾ ನಾಲ್ಕು ವರ್ಷದ ಹಸುಳೆಯ ತಾಯಿಯವರು ನೀಡಿದ ದೂರಿನ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 107/2013 ಕಲಂ3762 (ಎಪ್) ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

ಕೊಲೆಗೆ ಪ್ರಯತ್ನ:
ಶಹಾಬಾದ ನಗರ ಪೊಲೀಸ್ ಠಾಣೆ: ದಿನಾಂಕ:19/05/2013 ರಂದು ರಾತ್ರಿ 10.30 ಗಂಟೆ ಸುಮಾರಿಗೆ ನನ್ನ ಅಣ್ಣನಾದ ರಾಮ ಇತನು ನಮ್ಮ ಓಣಿಯ ವಾಸು ತಂದೆ ಅಶೋಕ ರಾಠೋಡ ಇತನ ಜೊತೆಗೆ ಅಂಬಾ ಭವಾನಿ ಗುಡಿಯ ಎದರುಗಡೆ ಹಳೆ ವೈಷಮ್ಯ ಇಟ್ಟುಕೊಂಡು ಬಾಯಿ ಮಾತಿನ ಜಗಳ ಮಾಡಿಕೊಂಡಿದ್ದುನನ್ನ ಅಣ್ಣನಿಗೆ ವಾಸು ಇತನು ಅವಾಚ್ಯವಾಗಿ ಬೈದು ಬಡಿಗೆಯಿಂದ ಹೊಡೆದು ಒಳಪೆಟ್ಟು ಮಾಡಿದ್ದುಬಿಡಿಸಲು ಹೋಗಿದ್ದ ನನಗೆ ಮತ್ತು ನನ್ನ ತಾಯಿ ಸಾಜನಾಬಾಯಿಗೆ ಅಶೋಕ ಇತನು ಮಾನಭಂಗ ಮಾಡಲು ಪ್ರಯತ್ನ ಮಾಡಿದ್ದು ಅಲ್ಲದೇ ಅರ್ಜುನ ಇತನು ನನ್ನ ಅಣ್ಣ ರಾಮ ಇತನಿಗೆ ಕೊಲೆ ಮಾಡುವ ಉದ್ದೇಶದಿಂದ ತನ್ನ ಕೈಯಲ್ಲಿದ್ದ ಕಟ್ಟಿಗೆಯನ್ನು ಹಿಡಿದು ತಲೆಯ ಮೇಲೆ ಹೊಡೆದು ಕಲ್ಲನ್ನು ತಲೆಯ ಮೇಲೆ ಹಾಕುವಷ್ಟರಲ್ಲಿ ನನ್ನ ಅಣ್ಣನನ್ನು ಹಿಡಿದು ಪಕ್ಕಕ್ಕೆ ತಳ್ಳಿದನು. ಶಿವು ಮತ್ತು ಅರ್ಜುನ ಇವರು ಹೊಡೆದರಿಂದ ರಕ್ತಗಾಯವಾಗಿರುತ್ತದೆ ಅಂತಾ ಶ್ರೀ ಧನರಾಜ ತಂದೆ ದೇವಾ ರಾಠೋಡ ಜಾ:ಲಂಬಾಣಿ ಉ:ಮಳಖೇಡ ಕಂಪನಿಯಲ್ಲಿ ಸೆಕ್ಯೂರಿಟಿ ಸುಪ್ರವೈಜರ ಸಾ:ಇಂದಿರಾ ನಗರ ಮಡ್ಡಿ.ನಂ.2 ಶಹಾಬಾದ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಗುನ್ನೆ ನಂ: 108/2013 ಕಲಂ:324,504,506,354,307 ಸಂ:34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ:ದಿನಾಂಕ 19-05-2013 ರಂದು ಮಧ್ಯಾಹ್ನ 1-30 ಗಂಟೆಗೆ ನನ್ನ ಅಟೋರಿಕ್ಷಾದಲ್ಲಿ ನನ್ನ ಮಾವನಾದ ಮಹಾಂತೇಶ ತಂದೆ ಸುಭಾಶ್ಚಂದ್ರ ಇವರನ್ನು ಕೂಡಿಸಿಕೊಂಡು ಸಿಟಿ ಬಸ್ ನಿಲ್ದಾಣ ದಿಂದ ದರೋಡಿನ ಮುಖಾಂತರವಾಗಿ ಪ್ರಕಾಶ ಟಾಕೀಸ ಕಡೆ ಹೋಗುತ್ತಿದ್ದಾಗ ಡಬರಿಪೀರ ದರ್ಗಾ ಹತ್ತಿರ ಅಟೋರಿಕ್ಷಾ ನಿಲ್ಲಿಸಿ ಇಳಿದು ನಡೆದುಕೊಂಡು ರೋಡ ದಾಟುತ್ತಿದ್ದಾಗ ಮೋಟಾರ ಸೈಕಲ ನಂಬರ ಕೆಎ 32 ವಿ 2748 ನೇದ್ದರ ಚಾಲಕನಾದ ಶೇಖ ಆರೀಫ ಇತನು ತನ್ನ ಮೋಟಾರ ಸೈಕಲನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ನನಗೆ ಡಿಕ್ಕಿ ಪಡಿಸಿರುತ್ತಾನೆ ಅಂತಾ ಪವನಕುಮಾರ ತಂದೆ ವಿಶ್ವನಾಥ ಮೇಕರವಃ 23 ವರ್ಷಉಃ ಅಟೋಚಾಲಕಸಾಃ ಮಹಾದೇವ ಗುಡಿ ಹತ್ತಿರ ಅಯ್ಯರವಾಡಿ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 31/2013 ಕಲಂ 279,338 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: