Police Bhavan Kalaburagi

Police Bhavan Kalaburagi

Friday, May 3, 2013

GULBARGA DISTRICT REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀಮತಿ ಮಲ್ಲಮ್ಮ ಗಂಡ ದಯಾನಂದ ಚಿಟಕೋಟೆ ಸಾ: ಸೈಯದ ಚಿಂಚೋಳಿ ತಾ: ಗುಲಬರ್ಗಾರವರು ದಿನಾಂಕ:02-05-2013 ರಂದು  ಮಧ್ಯಾಹ್ನ 3=30 ಗಂಟೆ ಸುಮಾರಿಗೆ  ಟೆಂಪೂ ನಂಬರ ಕೆಎ-22 ಎ-7035 ನೇದ್ದರಲ್ಲಿ ಕುಳಿತುಕೊಂಡು ನಮ್ಮೂರಿಗೆ ಹೋಗುವಾಗ ಟೆಂಪೂ ಚಾಲಕನ್ನು ಬೇಂದ್ರೆ ನಗರ ರೋಡಿನ ಮೇಲೆ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ ಬೇಂದ್ರೆ ನಗರದಲ್ಲಿರುವ ಅರುಣಕುಮರ ಯಳಸಂಗಿಕರ ಇವರ ಮನೆಯ ಕಿಟಕಿಯ ಸಜ್ಜಾಕ್ಕೆ ಡಿಕ್ಕಿ ಪಡಿಸಿ ಅಪಘಾತ ಮಾಡಿದರಿಂದ ನನಗೆ ಬಲಗೈ ಹಸ್ತಕ್ಕೆ ಮತ್ತು ಬೆರಳುಗಳಿಗೆ ಭಾರಿ ರಕ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 31/2013  ಕಲಂ: 279,338  ಐಪಿಸಿ ಸಂ:187 ಐ.ಎಮ್.ವಿ.ಆಕ್ಟ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ನಿರ್ಮಲಾ ಗಂಡ ಅಶೋಕ ರೆಡ್ಡಿ  ಸಾ: ಕಂದಕೋರ ಜಿ: ಯಾದಗಿರ ರವರು ನಾನು ದಿನಾಂಕ:30-04-2013 ರಂದು  ಸಾಯಂಕಾಲ  5=00 ಗಂಟೆಗೆ  ಸರಕಾರಿ ಆಸ್ಪತ್ರೆ ಎದುರುಗಡೆ ಔಷದ ಅಂಗಡಿಗೆ ಔಷದ ತರಲು ರೋಡ ದಾಟುವಾಗ ಮೋಟಾರ ಸೈಕಲ ನಂಬರ ಕೆಎ-32 ಯು-0737 ಸವಾರನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ  ಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 32/2013  ಕಲಂ: 279,337  ಐಪಿಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:ಶ್ರೀ ಶೇಖರ ತಂದೆ ಸಿದ್ರಾಮಪ್ಪ ಕಟ್ಟಿ ಜಾ:ಬುಡಗ ಜಂಗಮ (ಪರಿಶಿಷ್ಟ ಜಾತಿ) ಸಾ:ಆಳಂದ ಚೆಕ್ಕಪೋಸ್ಟ್‌‌‌ ರಾಮತೀರ್ಥ ನಗರ ಗುಲಬರ್ಗಾರವರು ನಾನು ಮತ್ತು ನನ್ನ ಮಗ ಯಲ್ಲಪ್ಪ ಇಬ್ಬರು ಆಳಂದ ಚೆಕ್ಕ ಪೋಸ್ಟ್‌‌ ಕ್ರಾಸಿನ ಮಲಂಗ ಹೊಟೇಲ ಹತ್ತಿರ ದಿನಾಂಕ:03/05/2013 ರಂದು ಬೆಳಿಗ್ಗೆ 9-00 ಗಂಟೆ ಸುಮಾರಿಗೆ ನಿಂತಿರುವಾಗ  ನಮ್ಮ ಅಳಿಯ ಧನರಾಜ ಇತನು ಬಂದು  ನಾಸ್ಟ್‌‌ ಪ್ಯಾಕ ಮಾಡಿಸಿ ನನ್ನ ಮಗನಿಗೆ( ಯಲ್ಲಪ್ಪನಿಗೆ) ಇಂಚಗಿರಿ ಮಠದ ಹತ್ತಿರ ಇರುವ ತಮ್ಮ ಮನೆಗೆ ನಾಸ್ಟ್‌‌ ಕೊಟ್ಟು ಬಾ ಅಂತ ಹೇಳಿ ತನ್ನ ಬಜಾಜ ಪ್ಲಾಟಿನಮ್‌ ಮೋಟಾರ ಸೈಕಲ ನಂ ಕೆಎ 32 ವೈ 1256 ನೇದ್ದು ಕೊಟ್ಟಿರುವದರಿಂದ ನನ್ನ ಮಗ ಒಬ್ಬನೇ ಕುಳಿತುಕೊಂಡು ಹೋದನು. ಸ್ವಲ್ಪ ಸಮಯದ ನಂತರ ನನ್ನ ಸಂಬಂಧಿ ನಿಂಗಪ್ಪ ಇತನು ನನ್ನ ಮೋಬೈಲಿಗೆ ಪೋನ ಮಾಡಿ, ನಿನ್ನ ಮಗ ಯಲ್ಲಪ್ಪ ಇತನು  ದರ್ಗಾ ರೋಡ  ಕ್ರಾಸಿನಿಂದ ರೋಡ ಕ್ರಾಸ ಮಾಡಿ ರೋಡ ಡಿವೈಡರ ದಾಟಿ ಸ್ವಲ್ಪ ಮುಂದೆ ಹೊರಟಾಗ ಆಳಂದ ರೋಡ ಕಡೆಯಿಂದ ಕೆಎಸ್‌ಆರ್‌‌‌ಟಿಸಿ ಬಸ್ಸ ನಂಬರ ಕೆಎ-32 ಎಪ್‌ 1091 ಚಾಲಕ ತನ್ನ ಬಸ್ಸನ್ನು ಅತಿವೇಗದಿಂದ ಮತ್ತು ನಿಷ್ಕಾಳಜಿತನದಿಂದ ನಡೆಸುತ್ತಾ ಬಂದವನೇ ನಿನ್ನ ಮಗನ ಮಗನ ಮೋಟಾರ ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆಯಲು, ನಿನ್ನ ಮಗ ಮೋಟಾರ ಸೈಕಲ ಮೇಲಿಂದ ಪುಟಿದು ರೋಡಿನ ಮೇಲೆ ಬಿದ್ದಾಗ ಬಸ್ಸಿನ ಮುಂದಿನ ಟಾಯರ ನಿನ್ನ ಮಗನ ತಲೆಯ ಮೇಲಿಂದ ಹೋಗಿದ್ದರಿಂದ, ತಲೆ ಒಡೆದು ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ  ಮೃತಪಟ್ಟಿರುತ್ತಾನೆ ಅಂತಾ ಹೇಳಿದ್ದರಿಂದ ನಾನು ಹೋಗಿ ನೋಡಲು ನನ್ನ ಮಗ ಯಲ್ಲಪ್ಪನ ತಲೆ ಒಡೆದು ಮೆದಳು ಮೌಂಸ ಹೊರ ಬಂದು ಭಾರಿ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ. ನನ್ನ ಮಗನಿಗೆ ಡಿಕ್ಕಿ ಹೊಡೆದ ಬಸ್ಸು  ನಂಬರ ಕೆಎ 32 ಎಪ್‌ 1091  ನೇದ್ದರ  ಬಸ್ಸ ಚಾಲಕನಾದ ಸಂತೋಷ ತಂದೆ ಶಿವಶರಣಪ್ಪ  ವಗ್ಗೆ ಡಿಪೋ ನಂ 3 ಇತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:226/13 ಕಲಂ 279 304(ಎ) ಐಪಿಸಿ ಸಂಗಡ 187 ಐಎಮ್‌ವಿ ಆಕ್ಟ್‌ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 
ಅಪಘಾತ ಪ್ರಕರಣ:
ಮಳಖೇಡ ಪೊಲೀಸ್ ಠಾಣೆ:ದಿನಾಂಕ:03/05/2013 ರಂದು ಶರಣಪ್ಪ ತಂದೆ ಸಾಮಣ್ಣ ಚಿತ್ತಾಪುರ ವಯಾ||45 ಸಾ|| ಕೊಂಕನಳ್ಳಿ ಇತನು ಹೋಲದಲ್ಲಿ ಟ್ರ್ಯಾಕ್ಟರ್ ನಂಬರ ಕೆಎ-32 ಟಿ-3426 ನೇದ್ದರಿಂದ ಗಳ್ಯಾ ಹೋಡಿಸಿ ಮರಳಿ ಬರುವಾಗ ಮುಂಜಾನೆ 9:30 ಗಂಟೆ ಸುಮಾರಿಗೆ ನೀಲಹಳ್ಳಿ ಗ್ರಾಮದ ಹತ್ತಿರ ಟ್ರ್ಯಾಕ್ಟರ್ ಚಾಲಕನು ಅಲಕ್ಷ್ಯತನದಿಂದ ಟ್ರಾಕ್ಟರ ನಡೆಸಿ ಅಪಘಾತ ಪಡೆಸಿದ್ದರಿಂದ ಶರಣಪ್ಪ ಇತನು ಗಾಯ ಹೊಂದಿದ್ದನು. ಇತನಿಗೆ  ಉಪಚಾರ ಕುರಿತು ಗುಲಬರ್ಗಾಕ್ಕೆ ತೆಗೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲಿ ಶರಣಪ್ಪಾ ಇತನು ಮೃತಪಟ್ಟಿರುತ್ತಾನೆ ಅಂತಾ ಮಲ್ಲಮ್ಮ ಗಂಡ ಶರಣಪ್ಪ ಚಿತ್ತಾಪುರ ಸಾ|| ಕೊಂಕನಳ್ಳಿ ರವರು ಠಾಣೆ ಗುನ್ನೆ ನಂ:53/2013 ಕಲಂ 279. 304(ಎ) ಐಪಿಸಿ ಸಂಗಡ 187 ಐ.ಎಮ್.ವ್ಹಿ ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಜೇವರ್ಗಿ ಪೊಲೀಸ್ ಠಾಣೆ: ದಿನಾಂಕ;02-05-2013 ರಂದು ಮುಂಜಾನೆ ನನ್ನ ತಮ್ಮನಾದ ಸಿದ್ದಪ್ಪ ತಂದೆ ಬಾಬು ಇತನ ಮಕ್ಕಳ ಜವಳ ಕಾರ್ಯಕ್ರಮ ಇರುವದರಿಂದ ನಾನು ಹಾಗೂ ಇತರರು ಟಾಟಾ ಎ,ಸಿ. ವಾಹನ ನಂಬರ ಕೆ.ಎ-32 ಬಿ-8503 ನೇದ್ದರಲ್ಲಿ ಕುಳಿತುಕೊಂಡು ಕೋಳಕೂರದಿಂದ ಸಿಂದಗಿ ತಾಲ್ಲೂಕಿನ ಯಂಕಂಚಿಗೆ  ಹೋಗಿ ಜವಳ ಕಾರ್ಯಕ್ರಮ ಮುಗಿಸಿಕೊಂಡು ಮರಳಿ 7-30 ಪಿ,ಎಮಕ್ಕೆ ಜೇವರ್ಗಿ-ಸಿಂದಗಿ ಮೇನ ರೋಡ ರೇವನೂರ ಕ್ರಾಸ ಹತ್ತಿರ ಬರುತ್ತಿರುವಾಗ ವಾಹನ ಚಾಲಕನು ವಾಹನವನ್ನು ಅತೀವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಒಮ್ಮೇಲೆ ಕಟ್ ಹೊಡೆದು ವಾಹನ ಪಲ್ಟಿ ಮಾಡಿದ್ದರಿಂದ ನನಗೆ ಮತ್ತು ಇನ್ನೀತರರಿಗೆ ಸಾದಾ ಮತ್ತು ಭಾರಿಗಾಯಗಳಾಗಿರುತ್ತವೆ. ಅಳಿಯ ಶರಣಪ್ಪ ತಂದೆ ಶಂಕರೆಪ್ಪ ಇತನಿಗೆ ತಲೆಗೆ ಬಾರಿಗಾಯವಾಗಿ ಸ್ಥಳದಲ್ಲಿಯೇ ಮೃತ ಪಟ್ಟಿರುತ್ತಾನೆ. ವಾಹನ ಚಾಲಕನು ಘಟನೆ ನೋಡಿ ವಾಹನ ಬಿಟ್ಟು ಓಡಿ ಹೋಗಿರುತ್ತಾನೆ. ಅಂತಾ ಲಕ್ಷ್ಗಣ ತಂದೆ ಬಾಬು ಹರಳಯ್ಯ ಸಾ: ಕೋಳಕೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:98/2013 ಕಲಂ 279337,338304(ಎ) ಐ.ಪಿ.ಸಿ ಸಂ 187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: