ದರೋಡೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀ. ಅಭೀ ಪ್ರಕಾಶ ನಾರಾಯಣ ತಂದೆ ಶಂಬುನಾಥ ಬಿಂದ ಸಾ: ಉತ್ತರ ಪ್ರದೇಶ ರಾಜ್ಯ ಹಾ.ವ:ವಿಶಾಲ ಕೆಲಕರ ಮನೆಯಲ್ಲಿ ಬಾಡಿಗೆ ಸಿ.ಐ.ಬಿ ಕಾಲೋನಿ ಗುಲಬರ್ಗಾ ರವರು ನಾನು ಸೆಂಟ್ರಲ ಯುನಿವರ್ಸಿಟಿಯಲ್ಲಿ ಸಬ್ ಕಾಂಟ್ರ್ಯಾಕ್ಟರ ಅಂತಾ ಕೆಲಸ ಮಾಡಿಕೊಂಡು ನಗರದ ಸಿ.ಐ.ಬಿ ಕಾಲೋನಿ ನಿರೀನ ಟ್ಯಾಂಕ ಹತ್ತಿರದ ವಿಶಾಲ ಕೆಲಕ್‌ರ ರವರ ಮನೆಯಲ್ಲಿ ಎಪ್ರಿಲ್ 2ನೇ ತಾರಿಖಿನಿಂದ ಬಾಡಿಗೆಯಿಂದ ವಾಸವಾಗಿರುತ್ತೆವೆ. ದಿನಾಂಕ 12/05/2013 ರಂದು ಶಶಿ ಮತ್ತು ಅನಿಲ ಅನ್ನುವವರು ನನ್ನ ಹೆಂಡತಿ ಮನೆಯಲ್ಲಿರುವಾಗ ಬಾಗಿಲು ಬಡೆದಿದ್ದರು, ಯ್ಯಾಕೆ ಬಾಗಿಲು ಬಡೆದಿದ್ದು ಅಂತಾ ಕೇಳಿದಕ್ಕೆ, ನೀವು ಏನು ಮಾಡುತ್ತಿರಿ ಎಷ್ಟು ಸಂಪಾದನೇ ಮಾಡುತ್ತಿ ಅಂತಾ ಕೇಳಿ, ಈ ಕಾಲೋನಿಯಲ್ಲಿರಬೇಕಾದರೆ ನಮಗೆ ಹಣ ಕೊಡಬೇಕಾಗುತ್ತದೆ ಅಂತಾ ಕಿರಿಕಿರಿ ಮಾಡಿದ್ದರಿಂದ ನಾವು ಪೊಲೀಸ ಠಾಣೆಗೆ ಹೋಗಿ ಅರ್ಜಿ ಕೊಟ್ಟಿದ್ದೆವು. ಆಗ ಕಪೀಲ ಇತನು ಬಂದು ರಾಜಿ ಮಾಡಿ ಮುಂದೆ ಏನಾದರೂ ಆದಲ್ಲಿ ಪೋನ ಮಾಡಲು ತಿಳಿಸಿದ್ದನು. ದಿನಾಂಕ:14/05/2013 ರಂದು ರಾತ್ರಿ 10-00 ಗಂಟೆಗೆ ಶಶಿ, ಅನಿಲ, ಕಪೀಲ ಹಾಗು ಅವರ ಸಂಗಡಿಗರು ನಮ್ಮ ಮನೆಗೆ ಬಂದು ನನ್ನ ಹೆಂಡತಿಯ ಕೊರಳಲ್ಲಿಯ ಬಂಗಾರದ ಚೈನ, ಉಂಗರ ಅಂದಾಜು ಕಿಮ್ಮತ್ತು 45000/- ರೂ ಬೆಲೆವುಳ್ಳದ್ದು ಹಾಗೂ ಕಪಾಟದಲ್ಲಿಟ್ಟಿದ್ದ 2 ಲಕ್ಷ ರೂಪಾಯಿ ತೆಗೆದುಕೊಂಡು ಹೋಗುವಾಗ ತಡೆದಿದ್ದಕ್ಕೆ ನನ್ನ ಹೆಂಡತಿಯ ಮೇಲೆ ಕಪಾಳ ಮೇಲೆ ಹೊಡೆದು ನನ್ನ ಮೇಲು ಸಹ ಹಲ್ಲೆ ಮಾಡಿರುತ್ತಾರೆ. ನಮ್ಮನು ಬೆದರಿಸಿ ಹಣ ಮತ್ತು ಬಂಗಾರ ಕಸಿದುಕೊಂಡು ಹೋಗಿರುವ ಕಪೀಲ ಮತ್ತು ಅವರ ಸಂಗಡಿರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:80/2013 ಕಲಂ.448,392,386,354 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮೋಟಾರ ಸೈಕಲ್ ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ ಮದನ ತಂದೆ ಬಂಡೆರಾವ ಕುಲಕರ್ಣಿ ಸಾ|| ಎನ್.ಜಿ.ಓ ಕಾಲೋನಿ ಜೇವರ್ಗಿ ರೋಡ ಗುಲಬರ್ಗಾ ರವರು ನಾನು ದಿನಾಂಕ:10/05/2013 ರಂದು ಬೆಳಿಗ್ಗೆ 11-30 ಗಂಟೆ ಸುಮಾರಿಗೆ ರೇಣುಕಾ ಸುಗರ ಪ್ಯಾಕ್ಟರಿಯಿಂದ ಪಾರ್ಸಲ ಬರುತ್ತಿದ್ದರಿಂದ ಪಾರ್ಸಲ ತೆಗೆದುಕೊಳ್ಳುವ ಕುರಿತು ಗುಲಬರ್ಗಾ ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ದ್ವಿಚಕ್ರ ವಾಹನವನ್ನು ಶ್ರೀನಿವಾಸ ಬುಕ್ ಸ್ಟಾಲ್ ಮುಂದುಗಡೆ ನಿಲ್ಲಿಸಿ ಪಾರ್ಸಲ ತೆಗೆದುಕೊಂಡು ಬರುವಷ್ಟರಲ್ಲಿ ನನ್ನ ಹಿರೊಹೊಂಡಾ ಸ್ಪ್ಲೆಂಡರ್ ಪ್ಲಸ ದ್ವಿಚಕ್ರ ವಾಹನ ನಂ. ಕೆಎ-32 ಎಕ್ಸ-1996 ಇಂಜನ ನಂ.HA10EFAHG29811 ಚೆಸ್ಸಿ ನಂ. MBLHA10EZAHG17425 ಮಾಡಲ 2010 ಸಿಲ್ವರ ಕಲರ ಅಂದಾಜು ಕಿಮ್ಮತ್ತು 28630/- ರೂ. ನೇ ದ್ವಿಚಕ್ರ ವಾಹನವನ್ನು ಯಾರೊ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 81/2013 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ: ಶ್ರೀಮತಿ. ಶ್ರೀದೇವಿ ಗಂಡ ಪ್ರಶಾಂತ ಆಲೂರಕರ ಸಾ: ಸಿ.ಐ.ಬಿ ಕಾಲೋನಿ ಗುಲಬರ್ಗಾ ರವರು ನಾನು ಒಂದು ವರ್ಷದ ಹಿಂದೆ ಪ್ರಶಾಂತ ಇತನೊಂದಿಗೆ ವಿವಾಹವಾಗಿರುತ್ತೆನೆ. ನನ್ನ ಗಂಡನಾದ ಪ್ರಶಾಂತ ಇತನು ಬಾಲಾಜಿ(ಚಾಲುಕ್ಯ) ಬಸ್ಸು ನಲ್ಲಿ ಕಂಡಕ್ಟರ ಕೆಲಸ ಮಾಡುತ್ತಾರೆ. ಅವರು ಮನೆಗೆ ಎರಡು ದಿನಕೊಮ್ಮೆ ಮನೆಗೆ ಬರುತ್ತಾನೆ. ಒಂದು ತಿಂಗಳು ಹಿಂದಿನಿಂದ ನಮ್ಮ ಮನೆಯ ಬಾಜು ಮನೆಯಲ್ಲಿ ಉತ್ತರ ಪ್ರದೇಶದ ಹುಡಗರು ಬಾಡಿಗಿಗೆ ಬಂದಿರುತ್ತಾರೆ. ಅವರು 8 ದಿನಗಳ ನಂತರ ರಾಜು ಸಾಬು ಕಾಂಟಕ್ಟರ ಮತ್ತು ವೈಯುಮ ಹಾಗು ಅವರ ತಮ್ಮ ಇಬ್ಬರು ಮೂವರು ಕೂಡಿಕೊಂಡು ನಾನು ಹೊರಗಡೆ ಬಂದಾಗ ಮತ್ತು ಬಟ್ಟೆ ತೊಳಿಯುವಾಗ ಹಾಗು ಹೊರಗಡೆ ಹೋಗುವಾಗ ನನಗೆ ಚುಡಾಯಿಸುವುದು ಮತ್ತು ಅವರ ಬಾಷೆಯಿಂದ ಆಡುವುದು ಕಣ್ಣು ಸೊನ್ನೆ ಮಾಡುತ್ತಿದರು. ಅದಕ್ಕೆ ನಾನು ನನ್ನ ಮೈದುನಿಗೆ ಹೇಳಿದಾಗ ನನ್ನ ಮೈದುನ ನೀವು ಬೇರೆ ರಾಜ್ಯದಿಂದ ಬಂದು ಯಾಕೆ ಸುಮ್ಮನೆ ಇರುವದಕ್ಕೆ ಆಗುವುದಿಲ್ಲಾ. ಅಂತಾ ಕೇಳಿದಕ್ಕೆ ರಾಜು, ಸಾಬು ಮತ್ತು ವೈಯುಮ ಹಾಗು ಇತರರು ಬಂದು ನನಗೆ ಮತ್ತು ನನ್ನ ಮೈದುನಿಗೆ ಕೈಯಿಂದ ಹೊಡೆದಿರುತ್ತಾರೆ. ದಿನಾಂಕ 14/05/2013 ರಂದು ರಾತ್ರಿ 8-30 ಸುಮಾರಿಗೆ ಬಂದು ಜಗಳ ತೆಗೆದು ನನಗೆ ಮತ್ತು ನಮ್ಮ ಮನೆಯವರಿಗೆ ಅವಾಚ್ಯ ಶಬ್ದಗಳಿಂದ ತಮ್ಮ ಬಾಷೆಯಲ್ಲಿ ಜಾತಿ ನಿಂದನೆ ಮಾಡಿರುತ್ತಾರೆ. ಅಲ್ಲದೇ ಕಾರ ನಂಬರ ಕೆಎ-05.ಎಂಹೆಚ್.4227 ನೇದ್ದರಲ್ಲಿ ಕಾರಿನಲ್ಲಿ 4 ರಿಂದ 5 ಜನರು ಸುಮಾರು 25 ರಿಂದ 35 ವರ್ಷದವರು ಕಾರದ ಪುಡಿ , ತಲವಾರ ಚಾಕು ಮತ್ತು ಮಚ್ಚು ಬಡಿಗೆಳಿಂದ ನಮ್ಮ ಕಾಲೋನಿಗೆ ಬಂದು ಬೆದರಿಕೆ ಹಾಕಿ ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 82/2013 ಕಲಂ. 147, 148, 323, 504, 506, 509 ಸಂ. 149 ಐಪಿಸಿ ಮತ್ತು 3(1)(10) ಎಸ್‌ಸಿ ಎಸ್‌ಟಿ ಪಿಎ ಎಕ್ಟ 1989 ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment