ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀ ಬಸಲಿಂಗಪ್ಪ ತಂದೆ ಸುಭಾಶ್ಚಂದ್ರ ಸಾ:ಗುಂಜ ಬಬಲಾದ ಆಳಂದ ರವರುನಾನುದಿನಾಂಕ:07-05-2013 ರಂದು ಮಧ್ಯಾಹ್ನ ನನ್ನ ತಮ್ಮ ಸತೀಶ ಮತ್ತು ನಾಗರಾಜ ನೊಂದಿಗೆ ಶೆಟ್ಟಿ ಕಾಂಪ್ಲೇಕ್ಸ ಹತ್ತಿರ ನಿಂತಾಗ ಮೋಟಾರ ಸೈಕಲ್ ನಂ:ಕೆಎ-32 ಇಸಿ-4611 ನೇದ್ದರ ಸವಾರನಾದ ಹರೀಶ ಇತನು ಅತೀವೇಗದಿಂದ ಮೋಟಾರ ಸೈಕಲ್ ಚಲಾಯಿಸಿಕೊಂಡು ಬಂದು ನನ್ನ ಪಕ್ಕದಲ್ಲಿರುವ ನನ್ನ ತಮ್ಮ ಸತೀಶ ಇತನಿಗೆ ಡಿಕ್ಕಿ ಪಡಿಸಿದ್ದರಿಂದ ಆತನ ಹಲ್ಲುಗಳು ಮುರಿದಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 33/2013 ಕಲಂ:279, 338 ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಹಲ್ಲೆ ಪ್ರಕರಣ:
ಸೇಡಂ ಪೊಲೀಸ್ ಠಾಣೆ:ಶ್ರೀ,ಬಸವರಾಜ ತಂದೆ ನಾಗಣ್ಣ ಕುಡೊಕ್ಕಲಿಗೆರ, ಸಾ:ಹೊಳಿತಿಪ್ಪಿ ಸೇಡಂ ರವರು ನಾವು ಒಟ್ಟು ನಾಲ್ಕು ಜನ ಅಣ್ಣ-ತಮ್ಮಂದಿರಿದ್ದು ನಮ್ಮ ಹಿರಿಯ ಅಣ್ಣನಾದ ಮಲ್ಲಿಕಾರ್ಜುನ ಇತನು ಲಗ್ನವಾದ ಬಳಿಕ ತನ್ನ ಹೆಂಡತಿಯೊಂದಿಗೆ ಬೇರೆ ಮನೆ ಮಾಡಿಕೊಂಡು ವಾಸವಾಗಿರುತ್ತಾನೆ. ಆರು ತಿಂಗಳ ಹಿಂದೆ ಮಲ್ಲಿಕಾರ್ಜುನ ಇತನಿಗೆ ಆರಾಮ ಇಲ್ಲದಿರುವದರಿಂದ ಆತನಿಗೆ ಹೊಟ್ಟೆ ಅಪರೇಶನ್ ಆಗಿರುತ್ತದೆ. ದಿನಾಂಕ:07-05-2013 ರಂದು ಬೆಳಗ್ಗೆ 9-30 ಗಂಟೆಯ ಸುಮಾರಿಗೆ ನಮ್ಮ ಅತ್ತಿಗೆಯಾದ ಅನಿತಾ ಗಂಡ ಮಲ್ಲಿಕಾರ್ಜುನ ಇವಳು ಮನೆಗೆ ಬಂದು ನಮ್ಮ ತಾಯಿಯಾದ ಶಂಕ್ರಮ್ಮ ಇವಳಿಗೆ ನಿಮ್ಮ ಮಗನಿಗೆ ಆರಾಮ ಇರುವದಿಲ್ಲ ಆತನಿಗೆ ದವಾಖಾನೆಗೆ ಕರೆದುಕೊಂಡು ಹೋಗಲು ನನ್ನ ಹತ್ತಿರ ಹಣ ಇಲ್ಲ. ಆದ್ದರಿಂದ ನನ್ನ ಗಂಡನಿಗೆ ಬರಬೇಕಾದ ಆಸ್ತಿಯಲ್ಲಿ ಪಾಲು ಕೊಡಿರಿ ಅಂತ ಕೇಳಿದಳು,ನಮ್ಮ ತಾಯಿ ಮತ್ತು ನಮ್ಮ ಅತ್ತಿಗೆ ಮಧ್ಯ ಬಾಯಿ ಮಾತಿನ ತಕರಾರು ಆಗಿದ್ದರಿಂದ ನಮ್ಮ ಅತ್ತಿಗೆಯು ನಮ್ಮ ತಾಯಿಗೆ, ನಮ್ಮ ಅಣ್ಣ ತಮ್ಮಂದಿರರಿಗೆ ಕರೆಯಿಸಿ ಪಾಲು ತೆಗೆದುಕೊಳ್ಳುತ್ತೇನೆ ಅಂತ ಹೇಳಿ, ನಿನ್ನ ಹಾಗೂ ನಿನ್ನ ಮಕ್ಕಳ ವಿರುದ್ಧ ಪೊಲೀಸ್ ಕೇಸ ಮಾಡುತ್ತೇನೆ ಅಂತ ಹೇಳಿ ಮನೆಯಿಂದ ಹೋಗಿರುತ್ತಾಳೆ.ನಾನು ಮತ್ತು ನಮ್ಮ ತಾಯಿಯಾದ ಶಂಕ್ರಮ್ಮ ಇಬ್ಬರೂ ಕೂಡಿಕೊಂಡು ಅತ್ತಿಗೆಯಾದ ಅನಿತಾ ಇವಳು ಪೊಲೀಸ್ ಠಾಣೆಯಲ್ಲಿ ಅರ್ಜಿ ಕೊಟ್ಟಿರಬಹುದು ಅಂತಾ ಸಾಯಂಕಾಲ 6-45 ಗಂಟೆ ಸುಮಾರಿಗೆ ಪೊಲೀಸ್ ಠಾಣೆಗೆ ಹೋಗುತ್ತಿದ್ದಾಗ, ಪೋಸ್ಟ ಆಫೀಸ್ ಸಮಿಪ ನಮ್ಮ ಅತ್ತಿಗೆಯ ಅಣ್ಣನಾದ ಮನೋಹರ ತಂದೆ ಅಮೃತಪ್ಪ ಗಂಜನೊರ ಹಾಗೂ ಅವರ ತಮ್ಮನಾದ ಪ್ರಭು ತಂದೆ ಅಮೃತಪ್ಪ ಗಂಜನೊರ, ಶಾಮರಾವ ತಂದೆ ಬಸವರಾಜ ಗಂಜನೊರ ಸಾ:ಅಲಿಂಬರ ಗ್ರಾಮ, ತಾ:ಜಿ:ಬೀದರ್ ಹಾಗೂ ಅವರ ಸಂಭಂದಿಕನಾದ ಮನೋಹರ ತಂದೆ ಸಿದ್ರಾಮಪ್ಪ ನೀಲಾನೊರ ಸಾ:ಹಾಲಳ್ಳಿ ತಾ:ಭಾಲ್ಕಿ, ಜಿಲ್ಲಾ:ಬೀದರ ರವರುಗಳು ಅವಾಚ್ಯವಾಗಿ ಬೈದು ನನಗೆ ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗೆಯನ್ನು ಒತ್ತಿ ಹಿಡಿದು ಹಿಸುಕುತ್ತಿದ್ದಾಗ ನಮ್ಮ ತಾಯಿ ಶಂಕ್ರಮ್ಮ ಇವಳು ಬಿಡಿಸಲು ಬಂದರೆ ಅವಳಿಗೂ ಕೂಡಾ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:115/2013 ಕಲಂ-341, 323, 307, 504, 506 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
No comments:
Post a Comment