Police Bhavan Kalaburagi

Police Bhavan Kalaburagi

Thursday, June 13, 2013

GULBARGA DISTRICT REPORTED CRIME

ಕಳ್ಳತನ ಪ್ರಕರಣ:

ನೆಲೋಗಿ ಪೊಲೀಸ ಠಾಣೆ:ಶ್ರೀ, ರೇವಣಸಿದ್ದ ತಂದೆ ಭಾಗಪ್ಪ ಕೇರಿ  ಸಾ:ಜೇರಟಗಿ ರವರು ನಾವೆಲ್ಲರೂ ದಿನಾಂಕ:12-06-2013 ರಾತ್ರಿ 10-00 ಗಂಟೆಯ ಸುಮಾರಿಗೆ ಊಟ ಮಾಡಿ ಅಂಗಳದಲ್ಲಿ ಮಲಗಿಕೊಂಡಿದ್ದು, ನಸುಕಿನ ವೇಳೆ 5.00  ಗಂಟೆಯ ಸುಮಾರಿಗೆ ನನ್ನ ತಾಯಿ ಎದ್ದು ರೂಮ್ ತೆಗೆಯಲು ಬಾಗಿಲು ಒತ್ತಿದಾಗ ಬಾಗಿಲು ತೆರೆಯಲಿಲ್ಲಾ ನನಗೆ ಎಬ್ಬಿಸಿ ಯಾಕೋ ಬಾಗಿಲು ತೆರೆಯುತ್ತಿಲ್ಲ ಅಂತಾ ಹೇಳಿದಳು ನಾನು ಜೋರಾಗಿ ತಳ್ಳಿದರಿಂದ ಬಾಗಿಲು ತೆರೆಯಿತು. ಬಾಗಿಲಿಗೆ ಅಕ್ಕಿ ಚೀಲ ಇಟ್ಟಿದ್ದು ಹಿಂದಿನ ಖಿಡಕಿ ಮುರಿದಿದ್ದು ನೋಡಿ ಒಳಗೆ ಹೋಗಿ ನೋಡಲು ಅಲಮಾರಿಯಲ್ಲಿಟ್ಟಿದ್ದ 11/2  ತೊಲೆ ಬಂಗಾರ ಅ.ಕಿ 42,000/-, 1 ತೊಲೆ ಬಂಗಾರದ ಲಾಕೀಟ ಅ.ಕಿ 28000/-,1/2 ತೊಲೆ ಕರಿಮಣಿ ಟಿಕ್ಕ ಅ.ಕಿ  13000/-, ಮನೆಯ ಕಟ್ಟಲು ತಂದಿಟ್ಟಿದ್ದ ನಗದು ಹಣ 30000/- ರೂಪಾಯಿಗಳು  ಸೀರೆಗಳು ಹೀಗೆ ಒಟ್ಟು 1,27,000/- ಕಿಮ್ಮತ್ತಿನವುಗಳು ಯಾರೋ ಕಳ್ಳರು ರಾತ್ರಿ ವೇಳೆಯಲ್ಲಿ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ರೇವಣಸಿದ್ದ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:89/2013 ಕಲಂ 457, 380 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: