Police Bhavan Kalaburagi

Police Bhavan Kalaburagi

Sunday, June 16, 2013

GULBARGA DISTRICT REPORTED CRIME

ಕೊಲೆ ಪ್ರಕರಣ:


ಗ್ರಾಮೀಣ ಪೊಲೀಸ ಠಾಣೆ:ಶ್ರೀ ಸೈಬಣ್ಣಾ ತಂದೆ ದೇವಪ್ಪ ಘರ ಸಾ:ದೇವಂತಗಿ ಗ್ರಾಮ ತಾ:ಆಳಂದ ಹಾ:ವ: ರೇಲ್ವೆ ಗೇಟ ಹತ್ತಿರ ಹೀರಾಪೂರ ಗ್ರಾಮ ರವರು ನಾನು ಮತ್ತು ನಮ್ಮ ತಮ್ಮ ದಿನಾಂಕ 15-06-13 ರಂದು ಮಧ್ಯಾಹ್ನ 4-30 ಗಂಟೆ ಸುಮಾರಿಗೆ  ಕುಪೇಂದ್ರ ಬಿರಾದಾರ ಇವರ ಮಾದರಸನ ಹಳ್ಳಿ ಹೊಲ  ಸರ್ವೆ ನಂ. 20 ರಲ್ಲಿ ಬೆಳೆದ ಕಬ್ಬಿನ ಹೊಲದ ಮೇಲ್ಬಾಗದಲ್ಲಿ ಇರುವ ಕಬ್ಬನ್ನು ಕಟಾವು ಮಾಡಿ  ಕೆಳಗಿನ ಹೊಲಕ್ಕೆ ನಾಟಿ ಮಾಡಲು ಒಯ್ಯುತ್ತಿದ್ದಾಗ ಒಮ್ಮೇಲೆ  ವಾಸನೆ ಬರುತ್ತಿದ್ದರಿಂದ ಹೋಗಿ ನೋಡಲಾಗಿ ಕಬ್ಬಿಗೆ ನೀರು ಬಿಡುವ ನಾಲಿಯಲ್ಲಿ  ಒಂದು ಕಂದು ಬಣ್ಣದ (ಕತ್ತಿ)  ಶಾಲಿನಲ್ಲಿ  ಎನೋ ಮುಚ್ಚಿದ್ದು ನೋಡಿ, ಕಟ್ಟಿಗೆಯಿಂದ ಶಾಲು ತೆಗೆದು ನೋಡಲಾಗಿ ಒಬ್ಬ ಮನುಷ್ಯನ ಮೃತ ದೇಹ ಬೋರಲಾಗಿ ಬಿದ್ದಿದ್ದು.  ಮೈಮೇಲೆ ಷರ್ಟು ಇದ್ದಿರಲಿಲ್ಲಾ. ಕೇವಲ ಕಪ್ಪು ಗೆರೆವುಳ್ಳ ಪ್ಯಾಂಟು ಮಾತ್ರ ಇದ್ದು, ಪೂರ್ತಿ ದೇಹ ಕೊಳೆತು ಹುಳಗಳು ಬಿದ್ದು ನಾರುತ್ತಿದ್ದು, ಕಟ್ಟಿಗೆಯಿಂದ ಶವವನ್ನು ಅಂಗಾಂತವಾಗಿ ಹಾಕಿ ನೋಡಲಾಗಿ  ಕುತ್ತಿಗೆ ಎಡಭಾಗಕ್ಕೆ  ಯಾವುದೇ ಆಯುಧದಿಂದ ಹೊಡೆದು ಗಾಯಪಡಿಸಿದ್ದು, ಗಾಯದ ಜಾಗದಲ್ಲಿ ಕೊಳೆತು ಹುಳಗಳು ಬಿದ್ದಿರುತ್ತದೆ.ಕುತ್ತಿಗೆ ಮಾಂಸ ಹೋಗಿ ಎಲುಬು ಮಾತ್ರ ಕಂಡು ಬರುತ್ತವೆ.  ತಲೆ ಮಾಂಸ ಹೋಗಿ ತಲೆ ಬರುಡೆ ಮಾತ್ರ ಕಂಡು ಬರುತ್ತದೆ. ಅಲ್ಲದೇ ಎರಡು ಕೈ ಬೆರಳಗಳು ಕೊಳೆತು  ತೊಗಲು ಸುಲಿದಿರುತ್ತವೆ. ಬಲ ರಟ್ಟೆಯ ಮೇಲೆ ಜೈ ಹನುಮಾನ ದೇವರ ಹಣಚೆ ಬಟ್ಟಿನ  ಗುರುತು ಇರುತ್ತದೆ.  ಅಲ್ಲದೇ ಮೃತ ದೇಹದ ಮೇಲೆ ಕಪ್ಪು ಬಣ್ಣದ ಮಲಫರ ಕೂಡಾ ಇರುತ್ತದೆ. ಮೃತನು ಅಂದಾಜ 20 ರಿಂದ 25 ವರ್ಷ ವಯಸ್ಸಿನವನೂ ಇರುತ್ತಾನೆ. ಸದರಿ ಮೃತ ದೇಹ ಪೂರ್ತಿ ಕೊಳೆತು ಹುಳುಗಳು ಬಿದ್ದರಿಂದ ಚಹರೆ ಪಟ್ಟಿ ಗುರುತುಗಳು ಕಂಡು ಬರುತ್ತಿಲ್ಲಾ. ಯಾರೋ ದುಷ್ಕರ್ಮಿಗಳು ಅಂದಾಜ 5-6  ದಿವಸಗಳ ಹಿಂದೆ ಯಾವುದೋ ದುರುದ್ದೇಶದಿಂದ ಆಯುಧದಿಂದ ಹೊಡೆದು ಕೊಲೆ ಮಾಡಿ ಸಾಕ್ಷಿ ಪುರಾವೆಗಳನ್ನು ನಾಶಪಡಿಸುವ ಉದ್ದೇಶದಿಂದ ಶವವನ್ನು ಶಾಲಿನಲ್ಲಿ ಮುಚ್ಚಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇಲಿಂದ ಠಾಣೆ ಗುನ್ನೆ ನಂ:303/2013 ಕಲಂ 302, 201 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: